ಸಾಸ್ವೆಹಳ್ಳಿ:14 ಮೇ ಗುರುವಾರದಂದುಹೋಬಳಿಯ ಲಿಂಗಾಪುರ ಗ್ರಾಮದ ಸುಪ್ರ ಸಿದ್ಧ ಶ್ರೀ ಹುಲಿಗೆಮ್ಮ ದೇವಿಯ 3 ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವ ಗುರುವಾರ ಸಂಪನ್ನಗೊಂಡಿತು.
ಮಂಗಳವಾರ ಬೆಳಗ್ಗೆ ದೇವಿಯ ಅಗ್ನಿ ಕುಂಡದ ಪೂಜೆ, ಗಂಗಾ ಪೂಜೆಯೊಂದಿಗೆ ಪ್ರಾರಂಭಗೊಂಡ ಜಾತ್ರಾ ಮಹೋತ್ಸವವು.
ಅಂದು ರಾತ್ರಿ ದೇವಿಗೆ ಬಾಳೆ ದಂಡಿಗೆ ಸೇವೆ ನಡೆಯಿತು.
ಬುಧವಾರ ಹಿಡಿದಕ್ಷಿಣೆ ವಿತರಣೆ, ಪಡಗದ ಪೂಜೆ ನಂತರ ಅಗ್ನಿ ಕುಂಡ ಸೇವೆ ಹಾಗೂ ದೇವಿಗೆ ಪಾಯಸ ಪ್ರಸಾದ ನೈವೇದ್ಯೆ ನಡೆಯಿತು.
ಗುರುವಾರ ಬೆಳಿಗ್ಗೆ ಅಗ್ನಿ ಕುಂಡಕ್ಕೆ ಮಹಾ ಮಂಗಳಾರತಿ ಮಾಡಿ ದೇವಿಯ ಉತ್ಸವ ಮೂರ್ತಿ ಹೊತ್ತ ಅರ್ಚಕ ಕೆಂಡವಾಯುತ್ತಿದ್ದಂತೆ ನೆರೆದ ಭಕ್ತರು ಕೆಂಡ ತುಳಿದು ದೇವಿಯ ಆಶೀರ್ವಾದ ಪಡೆಯುವ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ದೇವಸ್ಥಾನದ ಆಡಳಿತ ಮಂಡಳಿಯಿಂದ ನೆರೆದ ಭಕ್ತರಿಗೆ ಜಾತ್ರಾ ಮಹೋತ್ಸವದಲ್ಲಿ 3 ದಿನಗಳ ಕಾಲ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.

Leave a Reply

Your email address will not be published. Required fields are marked *