ಹೊನ್ನಾಳಿ :ಜುಲೈ 3: ತಾಲೂಕಿನ ಹೊನ್ನಾಳಿ ಮತ್ತು ನ್ಯಾಮತಿ ರಸ್ತೆ, ಚೌಡಮ್ಮ ದೇವಸ್ಥಾನದ ಚಾನೆಲ್ ಹತ್ತಿರ 29.06.2026ರಂದು ಟಾಟಾ ಎಸಿ ಮತ್ತು ಕಾರು ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕಿನ ಸವಾರ ಕಾಲನ್ನು ಮುರಿದುಕೊಂಡಿದ್ದಾನೆ .ಕಾರು ಮುಂಬದಿಯಿಂದ ಬಂದು ಅಡ್ಡಾಗಿ ಟಾಟಾ ಎಸಿ ಬಂಪರಗೆ ಸಿಕ್ಕಾಕಿಕೊಂಡಿತ್ತು ಎನ್ನಲಾಗಿದೆ. ತಕ್ಷಣಕ್ಕೆ ಹೊನ್ನಾಳಿ ಹೊಯ್ಸಳ ಪೊಲೀಸ್ ಎಎಸ್ಐ ಅಶೋಕ್ ರೆಡ್ಡಿ ಅವರು ಸ್ಥಳಕ್ಕೆ ದೌಡಾಯಿಸಿ ವೀಕ್ಷಣೆ ಮಾಡುವ ಸಂದರ್ಭದಲ್ಲಿ ಕಾರಿನ ಚಾಲಕ ಪರಾರಿ ಆಗಲು ಯತ್ನಿಸಿದ ಘಟನೆ ನಡೆಯಿತು.

ಎಎಸ್ ಐ ಅಶೋಕ್ ರೆಡ್ಡಿಯವರು ಸಮಯ ಪ್ರಜ್ಞೆಯಿಂದ ಕಾರ್ಯಪ್ರವೃತ್ತರಾಗಿ ಮಾದನ ಬಾವಿ ಬಳಿ ಕಾರ ಚೇಜ್ ಮಾಡಿ ಚಾಲಕನನ್ನು ಹಿಡಿದು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಅಂತದಲ್ಲಿದೆ ಎಂದು ಸಿಪಿಐ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಎ ಎಸ್ ಐ ಅಶೋಕ್ ರೆಡ್ಡಿ, ಹೊಯ್ಸಳ ವಾಹನದ ಚಾಲಕ ಕುಮಾರ್ ನಾಯಕ್ ಸಹ ಇದ್ದರು.

