ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ಆರ್-ಡಬ್ಲ್ಯೂಬಿಸಿಐಎಸ್ ರೈತರ ಬೆಳೆ ವಿಮೆ ನೋಂದಣಿ ಅವಧಿಯನ್ನು ಜುಲೈ 15 ರವರೆಗೆ ಅಡಿಕೆ, ದಾಳಿಂಬೆ, ಕಾಳುಮೆಣಸು, ಹಾಗೂ ವಿಳ್ಯೆದೆಲೆ ಬೆಳೆಗಳಿಗೆ ಹಾಗೂ ಜುಲೈ 31 ರವರೆಗೆ ಮಾವು ಬೆಳೆ ವಿಮೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

