70ರ ದಶಕದಲ್ಲಿ ಶಿಕಾರಿಪುರ ನಗರದಲ್ಲಿ ಡಾ. ವಿ.ಆರ್. ಕುಲಕರ್ಣಿ ಎಂಬುವರು ಒಂದು ಕ್ಲಿನಿಕ್ ಪ್ರಾರಂಭಿಸಿದರು. ಅಲ್ಲಿ ನಾನು ಡಾಕ್ಟರ್’ಗೆ ಸಹಾಯಕನಾಗಿ ಕೆಲಸಕ್ಕೆ ಸೇರಿದೆ. ಆಗ ಟೇಬಲ್ ಮೇಲೆ ಇದ್ದದ್ದು ಟೆರಾಲಿಸಿನ್ ಇಂಜೆಕ್ಷನ್, ಸಿಕ್ವಿಲ್ ಇಂಜೆಕ್ಷನ್,ಅವಿಲ್ ಇಂಜೆಕ್ಷನ್, ಪೆನ್ಸಿಲಿನ್ ಇಂಜೆಕ್ಷನ್ ಮಾತ್ರ. ಗಾಯಕ್ಕೆ ಟೆರಾಲಿಸಿನ್ ಆಯಿಂಟ್ಮೆಂಟ್,ನಿಬಾಸೆಲ್ಟಾ ನ್ಪೇಕಿಂಗ್ ಪೌಡರ್,ಆಯಿಂಟ್ಮೆಂಟ್ ಮಾತ್ರ. ಅಂದು ಟೆರಾಲಿಸಿನ್ 10 ಇಂಜಕ್ಷನ್ನ ಒಂದು ಬಾಟಲಿ ಬೆಲೆ ₹2.50 ಮಾತ್ರ. ಡಾಕ್ಟರ್’ಗೆ ₹2.30 ಗೆ ಔಷಧಿ ಅಂಗಡಿಯವರು ಕೊಡುತ್ತಿದ್ದರು.

ಈಗ ಲಭ್ಯವಿರುವ ಮಾಹಿತಿ ಪ್ರಕಾರ 60,000 ಔಷಧಿಗಳು ಮಾರುಕಟ್ಟೆಯಲ್ಲಿ ಇವೆಯಂತೆ. 350 ಔಷಧಿಗಳು ಶೀತ,ನೆಗಡಿಗೆ ಇವೆಯಂತೆ. ಪೌಷ್ಠಿಕ ಆಹಾರ ಮರೆತ ಈ ಪುಟ್ಟ ಶರೀರ ಎಂತಹ ಭಯಾನಕ ಹಂತ ತಲುಪಿದೆ ಯೋಚಿಸಿ.!? ಇನ್ನೊಂದು ವರದಿ ಪ್ರಕಾರ ಈಗಿರುವ ಕಾಯಿಲೆಗಳಿಗೆ 250 ರಿಂದ 300 ಔಷಧಿಗಳು ಮಾತ್ರ ಸಾಕಂತೆ. ಕಳೆದ 7 ದಶಕಗಳಲ್ಲಿ ಸಿಡುಬು, ಕುಷ್ಟರೋಗ, ಕ್ಷಯ, ಪೋಲಿಯೋ ಹೆಸರಿನಲ್ಲಿ ಅಂತರಾಷ್ಟ್ರೀಯ ಔಷಧಿ ಕಂಪನಿಗಳು ಪ್ರಚಾರಗಿಟ್ಟಿಸಿಕೊಂಡವು. ಔಷಧಿ ವಿತರಿಸಿದವು. ಔಷಧಿ ತರಿಸುವ ನೆಪದಲ್ಲಿ ನಮ್ಮ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಹಣದ ರುಚಿ ಹತ್ತಿಸಿದವು‌. ನಮ್ಮ ಡಾಕ್ಟರ್ ಗಳಂತೂ ಹಾಲು, ಮೊಸರಿನಲ್ಲಿ ‘ಎ’ ಜೀವ ಸತ್ವವಿದೆ, ಬೇಳೆ ಕಾಳುಗಳಲ್ಲಿ ‘ಬಿ’ ಜೀವ ಸತ್ವವಿದೆ, ಹಸಿರು ಸೊಪ್ಪು ತರಕಾರಿಗಳಲ್ಲಿ ಪೌಷ್ಟಿಕಾಂಶಗಳಿವೆ ಎಂಬುದನ್ನು ಮರೆಮಾಚಿ, ಎಲ್ಲದಕ್ಕೂ ಮಾತ್ರೆ ಕೊಡತೊಡಗಿದರು. ಹೆಚ್ಚು ಮಾತ್ರೆ ಬರೆದ ಡಾಕ್ಟರ್’ಗೆ ಉಡುಗೊರೆ, ಹೆಚ್ಚು ಮಾರಾಟ ಮಾಡಿದ ವಿತರಕರಿಗೆ ಕಾರು ಕೊಟ್ಟ ಔಷಧಿ ಕಂಪನಿಗಳು ವ್ಯಾಪಾರ ವೃದ್ಧಿಸಿಕೊಂಡವು. ಲಾಭ ಜಾಸ್ತಿಯಾದಂತೆ ಕಳಪೆ, ಕಲಬೆರಿಕೆಯು ಪ್ರಾರಂಭವಾಯಿತು.

ರಾಜಕೀಯ ಮತ್ತು, ಸಾಮಾಜಿಕ ಅಭದ್ರತೆ, ಔಷಧ ತಯಾರಿಕಾ ಕಂಪನಿಗಳಿಗೆ ವರದಾನವಾಯಿತು. ಈಗ ತಮ್ಮ ಹಣಬಲದಿಂದ ಔಷಧ ತಯಾರಿಕಾ ಕಂಪನಿಗಳು ಸರ್ಕಾರಗಳನ್ನು, ನ್ಯಾಯಾಲಯಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕುಣಿಸತೊಡಗಿದವು. ನಮ್ಮ ಆರೋಗ್ಯಕ್ಕೆ ನಮಗೆ ಬೇಕಾಗಿರುವುದು ಔಷಧಿಯಲ್ಲ ಪೌಷ್ಟಿಕ ಆಹಾರ ಎಂಬುದನ್ನು ಮರೆತಿದ್ದು ಯಾರು? ಮರೆಸಿದ್ದು ಯಾರು? ಯೋಚಿಸಿ.?

ಚಿಕ್ಕಜೋಗಿಹಳ್ಳಿ ನಾಗರಾಜ್
ದುರ್ಗಿಗುಡಿ ಉತ್ತರ ಭಾಗ,
ಹೊನ್ನಾಳಿ ತಾ.ದಾವಣಗೆರೆ ಜಿಲ್ಲೆ. 577217
ಮೊ:-9449093902

Leave a Reply

Your email address will not be published. Required fields are marked *