Author: Aravind S

ನ್ಯಾಮತಿ ಯರಗನಾಳ್ ಗ್ರಾಮದಲ್ಲಿ ನಂದಿ ವಿಗ್ರಹ ಪ್ರತಿಷ್ಠಾಪನೆಯನ್ನು ಶಾಸಕ ಡಿ ಜಿ ಶಾಂತನಗೌಡ್ರು ಮತ್ತು ಮಾಜಿ ಶಾಸಕ ಡಿ ಬಿ ಗಂಗಪ್ಪನವರು ಗುದ್ದಲಿ ಪೂಜೆ ನೆರವೇರಿಸಿದರು.

ನ್ಯಾಮತಿ: ತಾಲೂಕು ಯರಗನಾಳ್ ಗ್ರಾಮದಲ್ಲಿಂದು ನೊಳಂಬ ವೀರಶೈವ ಲಿಂಗಾಯತ ಮತ್ತು ಸಾಧು ವೀರಶೈವ ಲಿಂಗಾಯಿತ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಮಾಜದವರ ಒಪ್ಪಿಗೆಯ ಮೇರೆಗೆ ನಂದಿ ವಿಗ್ರಹವನ್ನು ವೀರಭದ್ರೇಶ್ವರ ಸಮುದಾಯ ಭವನದ ಎದುರುಗಡೆ ಪ್ರತಿಷ್ಠಾಪನೆಯನ್ನು ಮಾಡಲು ತೀರ್ಮಾನಿಸಲಾಯಿತು.ಹಾಲಿ ಶಾಸಕ ಡಿ ಜಿ…

ನ್ಯಾಮತಿ ಫಲವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಉದ್ಯೋಗ ಮೇಳವನ್ನು ಗ್ರಾಪಂ ಅಧ್ಯಕ್ಷ ಗೋವಿಂದರಾಜ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ನ್ಯಾಮತಿ: ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಆಗಸ್ಟ್ 24 ಗುರುವಾರ ಬೆಳಗ್ಗೆ 11 ಗಂಟೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಫಲವನಹಳ್ಳಿ ಶಾಲೆಯ ಆವರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಅಡಿಯಲ್ಲಿ 18ರಿಂದ 30…

45 ದಿನಗಳ ಕೈಮಗ್ಗ ನೇಯ್ಗೆ ತರಬೇತಿಗಾಗಿ ಅರ್ಜಿ ಅಹ್ವಾನ

2023-24 ನೇ ಸಾಲಿನ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಜಿಲ್ಲಾವಲಯ ಯೋಜನೆಯಡಿ 45 ದಿನಗಳ ಕೈಮಗ್ಗ ನೇಯ್ಗೆ ತರಬೇತಿಗಾಗಿ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದ ನಿರುದ್ಯೋಗಿ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. 18-35 ವರ್ಷ ವಯೋಮಾನದವರಾಗಿ 5ನೇ ತರಗತಿ ವ್ಯಾಸಂಗ…

ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ಡಾ. ದೇವರಾಜ್ ಪಟಗಿ

ಡೆಂಗ್ಯೂ, ಮೆಲೇರಿಯಾಗಳಂತಹ ರೋಗಗಳು ಹೆಚ್ಚು ಹರಡುತ್ತಿದ್ದು, ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದೇವರಾಜ್ ಪಟಗಿ ತಿಳಿಸಿದರು. ಗುರುವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದೊಂದಿಗೆ ದಾವಣಗೆರೆ ತಾಲ್ಲೂಕು…

ದಾವಣಗೆರೆ ಅತ್ಯಾಧುನಿಕ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಕಾಮಗಾರಿ ಪರಿಶೀಲನೆಡಿಸೆಂಬರ್ ಅಂತ್ಯದವೇಳೆಗೆ ಉದ್ಘಾಟನೆಗೆ ಕ್ರಮ; ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ

ದಾವಣಗೆರೆಯಲ್ಲಿ 120 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದ್ದು ಡಿಸೆಂಬರ್ ಅಂತ್ಯದ ವೇಳೆ ಇದರ ಉದ್ಘಾಟನೆ ನೆರವೇರಿಸಲು ಉದ್ದೇಶಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿಯವರು ತಿಳಿಸಿದರು.ಅವರು ಬುಧವಾರ ದಾವಣಗೆರೆ ನಗರದ ಪಿ.ಬಿ.ರಸ್ತೆಯಲ್ಲಿ ನಿರ್ಮಾಣಗುತ್ತಿರುವ ಬಸ್ ನಿಲ್ದಾಣ…

ಅರೆ ನೀರಾವರಿ ಬೆಳೆಗಳಿಗೆ ಸಲಹೆ.

ಭದ್ರಾ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯ ಬೆಳೆಗಳಿಗೆ ಮತ್ತು 2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು, ಅರೆನೀರಾವರಿ ಬೆಳೆಗಳಿಗೆ ಮಾತ್ರ ನೀರನ್ನು ಒದಗಿಸಲಾಗುವುದು.ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಿ,…

ಆಸ್ತಿ ದರ ಪರಿಷ್ಕರಣೆ

ದಾವಣಗೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ದಾವಣಗೆರೆ ಮಹಾನಗರ ಪಾಲಿಕೆ ಹಾಗೂ ಗ್ರಾಮಗಳ ಕೃಷಿ ಜಮೀನು ಮತ್ತು ವಸತಿ ನಿವೇಶನಗಳ ಆಸ್ತಿ ದರಗಳ ಮಾರ್ಗಸೂಚಿ ಪ್ರಸಕ್ತ ಸಾಲಿಗೆ ದರಗಳನ್ನು ಪರಿಷ್ಕರಣೆಗೊಳಿಸಲಾಗಿದೆ.ವರದಿ ಪ್ರಕಟಣೆಗೊಂಡ ದಿನಾಂಕದಿಂದ 15 ದಿವಸಗಳ ಒಳಗಾಗಿ ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆ, ಸೂಚನೆಗಳು…

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ.

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಮತ್ತು ಸಂಸ್ಥೆಗಳಿಂದ ರಾಜ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸುವ ಮಕ್ಕಳು 2005 ಆಗಸ್ಟ್ 1 ರ ನಂತರ ಜನಿಸಿದ್ದು, ತಮ್ಮ ಪ್ರಾಣದ ಹಂಗನ್ನು…

ಲೋಕಾಯುಕ್ತರ ಬಲಗೆ ಬಿದ್ದ ಹೊಳಲೂರು ಉಪತಹಿಸಿಲ್ದಾರ್ ಪರಮೇಶ್ ನಾಯ್ಕ.

ಶಿವಮೊಗ್ಗ, ಆಗಸ್ಟ್ 22, ಫಿರ್ಯಾದಾರರಾದಶ್ರೀ ಶಿವರಾಜ್ ಡಿ, ಬಿನ್, ದುರ್ಗಪ್ಪ, ಭೋವಿ ಜನಾಂಗ, ವ್ಯವಸಾಯಕೆಲಸ, ಕ್ಯಾತನಕೊಪ್ಪ ಗ್ರಾಮ, ಶಿವಮೊಗ್ಗ ತಾಲ್ಲೂಕು ಮತ್ತುಜಿಲ್ಲೆ ಇವರು ಶಿವಮೊಗ್ಗ ತಾಲ್ಲೂಕು ಹೊಳಲೂರು ಹೋಬಳಿಕ್ಯಾತನಕೊಪ್ಪ ಗ್ರಾಮದವರಿದ್ದು, ಸದರಿ ಗ್ರಾಮದ ರಿ.ಸ.ನಂ.49ರಲ್ಲಿ ತಮ್ಮ ಪತ್ನಿ ಶ್ರೀಮತಿ ದೇವಮ್ಮ ಇವರ…