Author: Aravind S

ಯಶಸ್ವಿ ಬೃಹತ್ ಉದ್ಯೋಗ ಮೇಳಕ್ಕೆ ಕ್ರಮವಹಿಸಿ: ಜಿಲ್ಲಾಧಿಕಾರಿ ಗಂಗಾಧರ್ ಸ್ವಾಮಿ.

ದಾವಣಗೆರೆ,ಫೆಬ್ರವರಿ.16: ದಾವಣಗೆರೆ ನಗರದ ಎಂಸಿಸಿ ಬ್ಲಾಕ್ ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆಬ್ರವರಿ 23 ರಂದು ಉದ್ಯೋಗ ಮೇಳ ನಡೆಯಲಿದೆ, ಮೇಳದಲ್ಲಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಕಾರ್ಯಕ್ರಮ ಯಶಸ್ವಿಗೆ ಅಧಿಕಾರಿಗಳು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ತಿಳಿಸಿದರು…

ಮಾನವತಾವಾದಿ ಸಂತ ಸರ್ವಜ್ಞ.

“ಕಣ್ಣು ನಾಲಿಗೆ ಮನವು ತನ್ನವೆಂದೆನಬೇಡಅನ್ಯರು ಕೊಂದರೆನುಬೇಡ ಇವು ಮೂರುತನ್ನ ಕೊಲ್ಲುವುದು ಸರ್ವಜ್ಞ” ಕೂತುನ್ನುವವನಿಗೆ ಕುಡಿಕೆ ಹೊನ್ನು ಸಾಲದು, ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು, ಪಂಚಗೆ ಪಗಾರವಿಲ್ಲ ಕತ್ತೆಗೆ ಲಗಾಮಿಲ್ಲ. ಇದು ಅಂದೇ ಸರ್ವಜ್ಞ ಕವಿ ನಮ್ರವಾಗಿ ನಾಗರೀಕರಿಗೆ ಉಪದೇಶಿಸಿದ. ಹೇಡಂಗೆ…

ಗೋವಿನಕೋವಿ ಹಾಲಸ್ವಾಮಿ ಮುಳ್ಳುಗದ್ದಿಗೆ ಉತ್ಸವ ಇಂದು

ನ್ಯಾಮತಿ; ತಾಲ್ಲೂಕಿನ ಗೋವಿನಕೋವಿ ಕಾಶಿ ಶಾಖಮಠದ ಹಾಲಸ್ವಾಮಿ ಬೃಹನ್ಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಹಾಲಸ್ವಾಮಿ ಜಾತ್ರಾ ಮಹೋತ್ಸವ ಮತ್ತು ಮುಳ್ಳುಗದ್ದಿಗೆ ಉತ್ಸವ ಫೆ.17ರಿಂದ ಎರಡು ದಿನ ನಡೆಯಲಿದೆ.ಫೆ.17ರಂದು ಲೋಕಕಲ್ಯಾಣಾರ್ಥವಾಗಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5 ಗಂಟೆಗೆ ಶ್ರೀಗಳ ತುಲಾಭಾರ ಸೇವೆ…

ಭಾಯಾಗಡ್‍ನಲ್ಲಿ ಸಂತ ಸೇವಾಲಾಲ್ ಮತ್ತು ಮರಿಯಮ್ಮಜಯಂತ್ಯುತ್ಸವದ ಮೂರನೇ ದಿನ ಭೋಗ್(ಹೋಮಕುಂಡಕೆ) ಸಾವಿರಾರು ಭಕ್ತರ ಸಮ್ಮುಖದಲ್ಲಿ ಪೂರ್ಣಾಹುತಿ.

ನ್ಯಾಮತಿ:ತಾಲ್ಲೂಕಿನ ಸೂರಗೊಂಡನಕೊಪ್ಪ ಭಾಯಾಗಡ್‍ನಲ್ಲಿ ನಡೆದ ಸಂತ ಸೇವಾಲಾಲ್‍ಅವರ 287ನೇ ಜಯಂತ್ಯುತ್ಸವಕ್ಕೆ ಭಾನುವಾರ ಹೋಮಕ್ಕೆ ಪೂರ್ಣಾಹುತಿ ಅರ್ಪಿಸುವುದರೊಂದಿಗೆ ತೆರೆ ಬಿದ್ದಿತು.ಭಾನುವಾರ ಬೆಳಿಗ್ಗೆ ಹೋಮ ಕುಂಡದ ಆವರಣಕ್ಕೆಅಲಂಕೃತ ಪಲ್ಲಕ್ಕಿಯಲ್ಲಿ ಮರಿಯಮ್ಮ ಮತ್ತು ಸೇವಾಲಾಲ್‍ ಉತ್ಸವ ಮೂರ್ತಿಗಳನ್ನು ತರಲಾಯಿತು. ವಿವಿಧ ಬಣ್ಣದ ರಂಗೋಲಿ, ಹೂವಿನಿಂದ ಆಲಂಕರಿಸಿದ್ದ…

ನ್ಯಾಮತಿ ತಾಲ್ಲೂಕು ಸಂತ ಸೇವಾಲಾಲರ ಜನ್ಮಸ್ಥಾನ ಭಾಯಗಡ್‍ನಲ್ಲಿ ಶನಿವಾರ ಪವಿತ್ರವೃಕ್ಷದ ಬಳಿ ವಿವಿಧ ಕಡೆಗಳಿಂದ ಮಾಲಾಧಾರಿಗಳಾಗಿ ಪಾದಯತ್ರೆ ಮೂಲಕ ಬಂದ ವ್ರತಾಧಾರಿಗಳು ಧರ್ಮಗುರುಗಳ ಸಮ್ಮುಖದಲ್ಲಿ ಮಾಲಾವಿಸರ್ಜನೆ ಮಾಡಿದರು.

ಸೇವಾಲಾಲ ಮತ್ತು ಮರಿಯಮ್ಮ ದೇವಿಯ ಉತ್ಸವ.

ನ್ಯಾಮತಿ ತಾಲ್ಲೂಕು ಸಂತ ಸೇವಾಲಾಲರ ಜನ್ಮಸ್ಥಾನ ಭಾಯಾಗಡ್‍ನಲ್ಲಿ ಶುಕ್ರವಾರ ಸೇವಾಲಾಲರ 287ನೇ ಜಯಂತ್ಯುತ್ಸವದಲ್ಲಿ ಸೇವಾಲಾಲರ ಉತ್ಸವ ಮೂರ್ತಿ, ಮರಿಯಮ್ಮದೇವಿ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು.ಸಪ್ಪ ಮಾತೃಕೆಯರ ಕೊಳದ ಬಳಿ ಪೂಜೆ ಸಲ್ಲಿಸಿ ಸಕಲ ಮಂಗಳ ವಾದ್ಯಗಳೊಂದಿಗೆ, ಕಲಾ ತಂಡದೊಂದಿಗೆ…

ನ್ಯಾಮತಿ ತಾಲ್ಲೂಕು ಸಂತ ಸೇವಾಲಾಲರ ಜನ್ಮಸ್ಥಾನ ಭಾಯಾಗಡ್‍ನಲ್ಲಿ ನಡೆಯಲಿರುವ ಸಂತ ಸೇವಾಲಾಲರ 287ನೇ ಜಯಂತ್ಯುತ್ಸವ ಸಿದ್ದತೆ ಬಗ್ಗೆ ಶುಕ್ರವಾರ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಎಸ್‍ಪಿ ಎಚ್.ಟಿ.ಶೇಖರ್, ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ಶಿವಮೊಗ್ಗ ಎಡಿಸಿ ವಿ.ಅಭಿಷೇಕ್, ವ್ಯವಸ್ಥಾಪಕ ಎನ್.ರಾಜು ಹಾಗೂ ಎಂ.ಸಿ.ಎ ಗುತ್ತಿಗೆ ಪಡೆದಿರುವ ಪ್ರಿಯಾಮಣಿ ಅವರೊಂದಿಗೆ ಚರ್ಚಿಸಿದರು.

ನ್ಯಾಮತಿ ತಾಲ್ಲೂಕು ಸಂತ ಸೇವಾಲಾಲರ ಜನ್ಮಸ್ಥಾನ ಭಾಯಾಗಡ್‍ನಲ್ಲಿ ಶುಕ್ರವಾರದಿಂದ ಮೂರು ದಿನ ನಡೆಯಲಿರುವ 287ನೇ ಜಯಂತ್ಯುತ್ಸವಕ್ಕೆ ಹರಪನಹಳ್ಳಿ ತಾಲ್ಲೂಕಿನ ತಾಂಡದಿಂದ ಮಾಲಾಧಾರಿಗಳು ಕುದುರೆಯೊಂದಿಗೆ ಪಾದಯಾತ್ರೆಯಲ್ಲಿ ಬರುತ್ತಿರುವುದು.

ಸಂತ ಸೇವಾಲಾಲ್ ಅವರ 287ನೇ ಜಯಂತ್ಯುತ್ಸವಕ್ಕೆ ಪ್ರವೇಶದ್ವಾರದ ಬಳಿ ಕಾಟಿ ಆರೋಹಣ ಮತ್ತು ಭೋಗ್ ಪೂಜೆಯೊಂದಿಗೆ ವಿದ್ಯುಕ್ತವಾಗಿ ಚಾಲನೆ.

ನ್ಯಾಮತಿ ತಾಲ್ಲೂಕು ಭಾಯಾಗಡ್‍ನಲ್ಲಿ ಶುಕ್ರವಾರ ಸಂತ ಸೇವಾಲಾಲ್ ಅವರ 287ನೇ ಜಯಂತ್ಯುತ್ಸವಕ್ಕೆ ಪ್ರವೇಶದ್ವಾರದ ಬಳಿ ಕಾಟಿ ಆರೋಹಣ ಮತ್ತು ಭೋಗ್ ಪೂಜೆಯೊಂದಿಗೆ ವಿದ್ಯುಕ್ತವಾಗಿ ಸಮುದಾಯದ ಮುಖಂಡರು ಚಾಲನೆ ನೀಡಿದರು.ಬೆಳಿಗ್ಗೆ ಕೆಂಪು ಮತ್ತು ಬಿಳಿ ಬಣ್ಣದ ಕಾಟಿಗಳನ್ನು ಧರ್ಮದ ಸಂಕೇತವಾಗಿ ಆರೋಹಣ ಮಾಡಲಾಯಿತು.…

ಕೌಶಲ್ಯ ಅರಿವು ಕಾರ್ಯಾಗಾರ

ದಾವಣಗೆರೆ ಫೆ.12: ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಯುವಕ ಮತ್ತು ಯುವತಿಯವರಿಗೆ ಯುವನಿಧಿ ಪ್ಲಸ್ ಯೋಜನೆ ಅಡಿಯಲ್ಲಿ ಫೆ.18 ರಂದು ಬೆಳಿಗ್ಗೆ 10 ಗಂಟೆಗೆ ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯ…