ನ್ಯಾಮತಿಯಲ್ಲಿ ಮಂಗಳವಾರ ವೀರಭದ್ರೇಶ್ವರಸ್ವಾಮಿ ಷರಭೀ ಗುಗ್ಗಳ ಮತ್ತು ಕೆಂಡದಾರ್ಚನೆ ಕಾರ್ಯಕ್ರಮ ನಡೆಯಿತು. ಪ್ರಾಣದೇವರು ಆಂಜನೇಯಸ್ವಾಮಿ ಪಾಲ್ಗೊಂಡು ಮೆರಗು ತಂದಿತು.
ನ್ಯಾಮತಿ:ಪಟ್ಟಣದ ವೀರಭದ್ರೇಶ್ವರಸ್ವಾಮಿ ಷರಭೀ ಗುಗ್ಗಳ ಮತ್ತು ಕೆಂಡದಾರ್ಚನೆ ಧಾರ್ಮಿಕ ಕಾರ್ಯಕ್ರಮ ಮಂಗಳವಾರ ನಡೆಯಿತು.ಈ ಸಲುವಾಗಿ ಮುಂಜಾನೆ ಕೋಹಳ್ಳಿಮಠದ ಎನ್.ಕೆ.ವಿಶ್ವರಾಧ್ಯರ ಪೌರೋಹಿತ್ಯದಲ್ಲಿ ವೀರಭದ್ರೇಶ್ವರಸ್ವಾಮಿಗೆ ರುದ್ರಾಭಿóಷೇಕ, ಮಹಾಮಂಗಳಾರತಿ ವಿವಿಧ ಪೂಜೆಗಳು ನೆರವೇರಿದ ನಂತರ ಕೆಂಡದಾರ್ಚನೆ ಕುಂಡಕ್ಕೆ ಪೂಜೆ ನೆರವೇರಿಸಿ ಅಗ್ನಿಸ್ಪರ್ಶಿಸಲಾಯತು. ಪಲ್ಲಕ್ಕಿಯಲ್ಲಿ ವೀರಭದ್ರೇಶ್ವರಸ್ವಾಮಿ ಪ್ರತಿಷ್ಠಾಪಿಸಿ,…
