ನ್ಯಾಮತಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಿಲ್ಲಾ ಪಂಚಾಯತ್ ದಾವಣಗೆರೆ ತಾಲೂಕ ಪಂಚಾಯಿತಿ ನ್ಯಾಮತಿ ಇವರ ಸಂಯುಕ್ತ ಆಶ್ರಯದಲ್ಲಿ 2024ನೇ ಸಾಲಿನ ಪಂಚಾಯತ್ ರಾಜ್ ದಿನಾಚರಣೆ ಅಂಗವಾಗಿ ಸ್ವೀಪ್ ಕಾರ್ಯಕ್ರಮ ಜರಗಿತು.
ಪಟ್ಟಣದಲ್ಲಿರುವ ಮಾಲ್ತೇಶ್ ಕಲ್ಯಾಣ ಮಂಟಪದಿಂದ ಸುರುವೊನ್ನೆ ಬನಶಂಕರಿ ಸಮುದಾಯ ಭವನದವರೆಗೆ ವಿಶೇಷತೆಯಿಂದ ಕೂಡಿದ ಎತ್ತಿನಗಾಡಿ ಜಾಥಾ ಹಾಗೂ ವಿಕಲಚೇತನರ ತ್ರಿಚಕ್ರ ವಾಹನ ಮತ್ತು ಕಾಲ್ನಡಿಗೆಯಲ್ಲಿ ಮತದಾನದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ದಾವಣಗೆರೆ ಸ್ವೀಪ್ ಅಧ್ಯಕ್ಷರು ಮತ್ತು ಸಿಇಒ ಸುರೇಶ್ ಹಿಟ್ನಾಳ್. ಚಾಲನೆ ನೀಡಿ ನಂತರ ಮಾತನಾಡಿದ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದ ಮೇ 7ರಂದು ಚುನಾವಣೆ ನಡೆಯಲಿದ್ದು ನ್ಯಾಮತಿ ತಾಲೂಕಿನಲ್ಲಿ ಮತದಾರ ಬಾಂಧವರು ಹಣದ ಆಮಿಷಕ್ಕೆ ಒಳಗಾಗದೆ ಸ್ವತಂತ್ರವಾಗಿ 18 ವರ್ಷ ತುಂಬಿದ ಯುವಕ ಯುವತಿಯರು ಸ್ವತಂತ್ರವಾಗಿ ನಿರ್ಭೀತಿಯಿಂದ ಮತವನ್ನು ಚಲಾವಣೆ ಮಾಡಬೇಕು. ಚುನಾವಣೆಯನ್ನು ಮುಕ್ತ ನಾಯ ಸಮ್ಮತವಾಗಿ ನಡೆಸಲು ಹಾಗೂ ಮಾದರಿ ನೀತಿ ಸಮೇತ ಉಲ್ಲಂಘನೆ ಯಾದಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಚುನಾವಣಾಧಿಕಾರಿಗಳು ಸ್ವತಂತ್ರರು ಎಂದರು.
ಈ ಸಂದರ್ಭದಲ್ಲಿ ಅವಳಿ ತಾಲೂಕಿನ ಇಇಒ ಸುಮಾ ಡಿ ಎಸ್, ನ್ಯಾಮತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ, ಹೊನ್ನಾಳಿ ತಹಿಸಿಲ್ದಾರ್ ಪುರಂದರ ಹೆಗಡೆ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿ ಸೋಮಲಾನಾಯ್ಕ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮಾ, ಸಹಾಯಕ ನಿರ್ದೇಶಕರು ಪಂಚಾಯಿತರಾಜ್, ಪಿಡಿಒ ನೌಕರರ ಸಂಘದ ಅಧ್ಯಕ್ಷರುಗಳಾದ ವಿಜಯ್ ಕುಮಾರ, ಅರುಣ್, ಅವಳಿ ತಾಲೂಕಿನ ಪಿಡಿಒಗಳು, ಕಾರ್ಯದರ್ಶಿಗಳು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ತಾಲೂಕ್ ಪಂಚಾಯಿತಿ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *