ದಾವಣಗೆರೆ ಜಿಲ್ಲೆ ಕೋವಿಡ್ 19 ಲಾಕ್ ಡೌನ್ ಹಿನ್ನಲೆಯಲ್ಲಿ ಹರಡುವಿಕೆಯನ್ನು ನಿಯಂತ್ರಿಸಲು ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ಆದೇಶಿಸಲಾದ
ದಿನಗಳಲ್ಲಿ ದಿನಾಂಕ 24/04/2020ರಂದು ಹೊನ್ನಾಳಿ ತಾಲೂಕು ಬೆನಕನಹಳ್ಳಿ ಗ್ರಾಮದಲ್ಲಿ ಇರುವ ತಿರುಮಲ ವೈನ್ಸ್ ಶ್ರೀಯುತ ರಮೇಶ್
ಮೆಣಸಿನಕಾಯಿ ಬಿನ್ ದೊಡ್ಡಕೆಂಚಪ್ಪ, ಕೆ.ಎಂ ಸತೀಶ್ ಬಿನ್ ಕೆಂಚಪ್ಪ ಸಿ.ಎ.ಎಲ್-2ರ ಪಾಲುದಾರರಾದ ಇವರು ತಿರುಮಲ ವೈನ್ಸ್ ಸರ್ವೇ ನಂ 5/07 ಖಾತೆ ಸಂಖ್ಯೆ 63 ತಾತ್ಕಲಿಕ 2019-20ನೇ ಸಾಲಿಗೆ ಹೊಂದಿರುವ ಸಿ.ಎ.ಎಲ್-2 ಸ್ವಾದೀನದ ಮಳಿಗೆಯ ಮುಂಭಾಗದ ಸೇಟ್ರಸ್ ಬೀಗವನ್ನು ಮುರಿದು ಆ ಮಳಿಗೆಯಲ್ಲಿದ್ದ ಮದ್ಯವನ್ನು ಕಳ್ಳತವನ್ನು ಮಾಡಿದ್ದರಿಂದ, ಹೊನ್ನಾಳಿ ಅಬಕಾರಿ ಉಪನಿರೀಕ್ಷರುಗಳಾದ ಮುರಡೇಶ್ ಮತ್ತು ಅಬಕಾರಿ ಸಬ್ಬ್‍ಇನ್ಸ್ ಪೆಕ್ಟರ್ ಗಳಾದ ಶ್ರೀಧರ್, ಚೇತನ್, ಹಾಗೂ ಹೊನ್ನಾಳಿಯ ಸರ್ಕಲ್
ಇನ್ಸ್ ಪೆಕ್ಟರ್ ರವರಾದ ಟಿ.ವಿ ದೇವರಾಜ್ ರವರು, ಪೊಲೀಸ್ ಸಬ್ಬ ಇನ್ಸ್ ಪೆಕ್ಟರ್ ರಾದ ತಿಪೇಸ್ವಾಮಿ ಇವರುಗಳ ನೇತೃತ್ವದಲ್ಲಿ ಪರಶೀಲಿಸಿ ತಪಾಸಣೆ ಮಾಡಿರುವ ಪ್ರಕಾರ ಕಳ್ಳತನವಾದ ಮದ್ಯದ ಮೌಲ್ಯ 58430 ರೂಗಳು ಆಗಿದೆ ಎಂದು ಅಬಕಾರಿ ಅಧಿಕಾರಿಗಳು ಪೋಲೀಸ್ ಇಲಾಖೆಗೆ ವರದಿಕೊಟ್ಟಾದ ನಂತರ ಪೋಲೀಸ್ ಇಲಾಖೆಯವರು ಎಫ್.ಐ.ಆರ್ ದಾಖಲೆ ಮಾಡಿಕೊಂಡಿದ್ದು ಆ ಮಳಿಗೆಯಲ್ಲಿ ಇದ್ದ ಮದ್ಯವನ್ನು ಕಳ್ಳತನ ಮಾಡಿದ ಅಪರಾದಿಗಳನ್ನ ತಕ್ಷಣ ಉಡುಕಿ ಕೂಡಲೆ ಅವರನ್ನು ಬಂದಿಸುತ್ತೇವೆ ಎಂದು ಮದ್ಯದ ಅಂಗಡಿಯ
ಮಾಲೀಕರಿಗೆ ಪೋಲೀಸ್ ಅಧಿಕಾರಿಗಳು ತಿಳಿಸಿದರು. ಎಂದು ಅಬಕಾರಿ ಅಧಿಕಾರಿಗಳು ಎ.ಬಿ.ಸಿ ನ್ಯೂಸ್ ಆನ್ ಲೈನ್ ಚಾನಲ್ ರವರಿಗೆ ಪತ್ರಿಕಾಗೊಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು.

Leave a Reply

Your email address will not be published. Required fields are marked *