ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಾಸ್ಕ್ ಧರಿಸದೆ ವ್ಯವಹಾರ ಮಾಡುತ್ತಿರುವ ಅಂಗಡಿಯ ಮಾಲೀಕರುಗಳು ಮತ್ತು ಅವರ ಸಹಾಯಕರುಗಳಿಗೆ ಒಬ್ಬ ವ್ಯಕ್ತಿಗೆ 200ರೂ ದಂಡ, ವಾಹನ ಸವಾರರು ಮಾಸ್ಕ್ ದರಿಸದೆ ಇದ್ದರೆ ಅವರಿಗೆ 100 ರೂ ದಂಡ, ಮತ್ತು ರೋಡಿನಲ್ಲಿ ಹೋಗುವಾಗ ಪಾನ್ ಬಿಡಾ ಹಾಕಿಕೊಂಡು ಉಗುಳಿದರೆ ಅವರಿಗೆ 100 ರೂಗಳಂತೆ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾದ ಹೆಚ್.ಎಂ ವೀರಭದ್ರಯ್ಯನವರು ಹಾಗೂ ಅವರ ಸಿಬ್ಬಂದಿ ವರ್ಗದವರು ಸೇರಿ ಪ್ರತಿಯೊಂದು ಅಂಗಡಿಗಳಿಗೆ ತೆರಳಿ ದಂಡವನ್ನು ವಿಧಿಸುವ ಮೂಲಕ ಎಚ್ಚರಿಕೆ ಸಂದೇಶವನ್ನು ಅಂಗಡಿಯ ಮಾಲೀಕರುಗಳಿಗೆ ತಿಳಿಸಿದರು. ನಿನ್ನೆಯ ದಿನ ಮಾಸ್ಕ್ ಧರಿಸದೆ ಇದ್ದವರಿಗೆ 100 ಮತ್ತು 200ರೂಗಳಂತೆ ವಸೂಲಿ ಮಾಡಿದ ಹಣ 3,800ರೂಗಳು ಬಂದಿರುವುದಾಗಿ
ಎ.ಬಿ.ಸಿ ನ್ಯೂಸ್ ಆನ್ ಲೈನ್ ಚಾನಲ್ ರವರಿಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

