ಈ ಲೇಖನವನ್ನು ಮಿಸ್ ಮಾಡದೇ ಓದಿ.!!
ನಿಮ್ಮ ಜೀವನದಲ್ಲಿ ನೀವು ಯಶಸ್ವಿ ವ್ಯಕ್ತಿಯಾಗಬೇಕಾ? ಹಾಗಾದರೆ ತಾಳ್ಮೆಯಿಂದ ಇದನ್ನೊಮ್ಮೆ ಓದಿ.!!
ಬದುಕಿನಲ್ಲಿ ಯಶಸ್ವಿಯಾಗಬೇಕೆಂದುಕೊಂಡಿರುವವರು ಯಾರಿದ್ದೀರಿ?’ ಎಂದು ಯಾವುದೇ ವಿದ್ಯಾರ್ಥಿಗಳ, ಯುವಜನರ ಸಮೂಹವನ್ನು ಕೇಳಿನೋಡಿ. ಎಲ್ಲ ಕೈಗಳೂ ಮೇಲೇಳುತ್ತವೆ. ಬರೀ ಯುವಕರು ಮಾತ್ರವಲ್ಲ, ಎಲ್ಲರಿಗೂ ಜೀವನದಲ್ಲಿ ಮುಂದೆ ಬರುವ ಬಯಕೆ, ಏನನ್ನಾದರೂ ಸಾಧಿಸುವ ಕನಸು.
ಆದರೆ ಎಲ್ಲರೂ ಯಶಸ್ವಿಯಾಗುವುದಿಲ್ಲ. ಕಾರಣ ದಿನನಿತ್ಯದ ಕೆಲಸಕ್ಕೂ, ಕನಸಿಗೂ, ಗುರಿಗೂ ವ್ಯತ್ಯಾಸವೇ ಬಹುತೇಕರಿಗೆ ಗೊತ್ತಿಲ್ಲ! ಉದಾಹರಣೆಗೆ, ಪ್ರತಿದಿನ ಹತ್ತಿರದ ಅಂಗಡಿಯಿಂದ ಹಾಲು ತರುವುದು ಒಂದು ಕೆಲಸ. ನೀವು ಐದು, ಹತ್ತು, ಹದಿನೈದು ವರ್ಷಗಳ ಕಾಲ ಹಾಲು ತಂದರೂ ಅದು ವಿಶೇಷವಲ್ಲ. ಹಾಗಂತ ಹಾಲು, ತರಕಾರಿ ತರುವುದು, ನೆಲ ಗುಡಿಸಿ ಒರೆಸುವುದು ಎಲ್ಲವೂ ಕೆಲಸವೇ. ಅವನ್ನು ಮಾಡಲೇಬೇಕು. ಹಾಗೆಯೇ ಸಾಧನೆಯ ಬಗ್ಗೆ ಯೋಚಿಸುತ್ತಲೇ ಇರುವುದು ಕನಸು. ಆದರೆ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ಗುರಿಯೊಂದನ್ನು ಇಟ್ಟುಕೊಳ್ಳಬೇಕು. ಅದು ಪರೀಕ್ಷೆಯಲ್ಲಿ ಅಂಕ ಗಳಿಸುವುದಿರಬಹುದು, ಒಳ್ಳೆಯ ಕೆಲಸ ಪಡೆಯುವುದಿರಬಹುದು, ಉತ್ತಮ ಹಾಡುಗಾರರಾಗುವುದಿರಬಹುದು, ಚೆನ್ನಾಗಿ ಕೀಬೋರ್ಡ್ ನುಡಿಸುವುದನ್ನು ಕಲಿಯುವುದಾಗಿರಬಹುದು. ಇವೆಲ್ಲ ಒಂದೆರಡು ದಿನಗಳಲ್ಲಿ ಆಗುವಂಥದ್ದಲ್ಲ.
ನಾವು ಯಾವುದೇ ಗುರಿ ಹಾಕಿಕೊಂಡಿರಲಿ, ಅದಕ್ಕೊಂದು ಯೋಜನೆ ಇರಬೇಕು. ಶ್ರದ್ಧೆಯಿಂದ ದಿನವೂ ಸಾಧನೆಗೆ ಸಮಯ ನೀಡುವುದರಿಂದ ದೀರ್ಘಕಾಲದಲ್ಲಿ ಅಪೂರ್ವ ಸಾಧನೆ ಮಾಡಬಹುದು.
ನಮಗಿರುವ ತೊಂದರೆ ಎಂದರೆ, ನಾವು ದಿನನಿತ್ಯ ಮಾಡುವ ಕೆಲಸಗಳಲ್ಲಿ ಯಾವುದು ಪ್ರಮುಖ ಎಂದು ನಿರ್ಧರಿಸಿರುವುದಿಲ್ಲ. ನಾನು ಈಗ ಮಾಡುತ್ತಿರುವ ಕೆಲಸ ಎಷ್ಟು ಮುಖ್ಯ? ಇದಕ್ಕಿಂತ ಮುಖ್ಯ ಕೆಲಸ ಯಾವುದಾದರೂ ಇದೆಯೇ ಎಂಬುದನ್ನು ಗುರುತಿಸಬೇಕು. (ವಿಶೇಷ ಸೂಚನೆ: ಇಂತಹ ಉಚಿತ ಮಾರ್ಗದರ್ಶನಕ್ಕಾಗಿ, & Job news ಗಾಗಿ ಶ್ರೀ ಶಂಕರ್ ಜಿ ಬೆಳ್ಳುಬ್ಬಿ ಸರ್ ರವರ ಮಾರ್ಗದರ್ಶನದ ಎಸ್ ಆರ್ ವಲ್ಡ್೯ ಟೆಲಿಗ್ರಾಂ ಗ್ರೂಪ್ ಗೆ join ಆಗಿ, ಅದರಲ್ಲಿ ಈಗಾಗಲೇ 1,33,333ಕ್ಕೂ ಅಧಿಕ ಜನರು join ಆಗಿದ್ದಾರೆ, 9538781570ಗೆ ಲಿಂಕ್ ಕಳುಹಿಸುವಂತೆ ಕೋರಿ ಒಂದು ವಾಟ್ಸಾಪ್ ಮೆಸೇಜ್ ಮಾಡಿದರೆ ಲಿಂಕ್ ಕಳುಹಿಸುತ್ತಾರೆ join ಆಗಿ ತುಂಬಾ ಅತ್ಯದ್ಭುತ ಮಾಹಿತಿ ಹಾಕುತ್ತಾರೆ ಆ ಗ್ರೂಪ್ ನಲ್ಲಿ.!!) ಉದಾಹರಣೆಗೆ, ಮುಂಬರುವ ಪರೀಕ್ಷೆಗೆ ಎಂಟು ದಿನದಲ್ಲಿ ಹದಿನಾರು ಪಾಠಗಳನ್ನು ಓದಬೇಕೆಂದು ಗುರಿ ಹಾಕಿಕೊಂಡಿದ್ದರೆ, ದಿನಕ್ಕೆ ಎರಡು ಪಾಠ ಓದಲೇಬೇಕು. ನಿಮ್ಮ ಮೊದಲ ಕೆಲಸ ಆ ಎರಡು ಪಾಠ ಓದಿ ಮುಗಿಸುವುದಾಗಬೇಕು. ಆ ನಂತರವೇ ಬೇರೆ ವಿಚಾರ.
ದಿನನಿತ್ಯವೂ ಮಾಡುವ ಚಿಕ್ಕಪುಟ್ಟ ಕೆಲಸಗಳು ಅದ್ಭುತವಾದ ಫಲಿತಾಂಶ ನೀಡಬಲ್ಲವು. ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳಬೇಕೆನ್ನುವವರು ದಿನನಿತ್ಯ 5 ನಿಮಿಷ ದೀರ್ಘ ಉಸಿರಾಟ ಮಾಡಿದರೆ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ. ನಮ್ಮ ಇಂಗ್ಲಿಷ್ ಭಾಷೆಯ ಶಬ್ದಭಂಡಾರ ಉತ್ತಮಗೊಳ್ಳಬೇಕೆಂದರೆ ದಿನಕ್ಕೆ ಎರಡು ಹೊಸ ಶಬ್ದ ಕಲಿಯುವುದು, ಒಂದರ್ಧ ಪುಟ ಇಂಗ್ಲಿಷ್ ಓದುವುದು, ಇಂಗ್ಲಿಷ್ ತರಬೇತಿ ನೀಡುವುದಕ್ಕೇ ಇರುವ ಸಾವಿರಾರು ಯೂಟ್ಯೂಬ್ ವಿಡಿಯೋಗಳ ಪೈಕಿ ಒಂದನ್ನಾದರೂ 5 ನಿಮಿಷ ನೋಡುವುದು ಮಾಡಬೇಕು. 15 ನಿಮಿಷಗಳ ಕಾಲ ಒಂದು ವರ್ಷಕಾಲ ದಿನವೂ ಇದನ್ನು ಮಾಡಿದರೆ ಇಂಗ್ಲಿಷ್ ಭಾಷಾಸಾಮರ್ಥ್ಯ ಉತ್ತಮಗೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ! ಇದು ಯಾರಿಗೂ ಗೊತ್ತಿಲ್ಲದ ವಿಚಾರವೇನಲ್ಲ; ಆದರೆ 15 ನಿಮಿಷ ಅದನ್ನು ಮಾಡುವುದಕ್ಕೇ ನಮಗೆ ಬೋರ್ ಆಗಿಬಿಡುತ್ತದೆ! ಐದು ನಿಮಿಷ ಪ್ರಾಣಾಯಾಮ ಮಾಡಲೂ ಸಮಯವಿಲ್ಲ; ಅದೇ ಟಿವಿಯೆದುರು ಕೂತು ಅದೇ ಹಳಸಲು ಜೋಕುಗಳ, ಅಸಂಬದ್ಧ ಮಾತುಗಳ ಕಾರ್ಯಕ್ರಮಗಳನ್ನು 2-3 ಗಂಟೆ ನೋಡಿದರೆ ಏನೂ ಅನ್ನಿಸುವುದಿಲ್ಲ! ಸಾಮಾಜಿಕ ಜಾಲತಾಣಗಳಲ್ಲಿ ಗಂಟೆಗಟ್ಟಲೆ ಸಮಯ ವ್ಯರ್ಥಮಾಡಲು ಬೇಸರವೆನಿಸುವುದಿಲ್ಲ! ಹಾಗಾಗಿ ಯಾವ ಕೆಲಸ ನಮಗೆ ಮುಖ್ಯ ಎಂದು ನಿರ್ಧರಿಸಿಕೊಂಡು ಅದಕ್ಕೆ ಮಹತ್ವ ಕೊಡುವುದು ಬಹುಮುಖ್ಯ. ಇಲ್ಲದಿದ್ದರೆ ಬೇರೆಬೇರೆ ಕೆಲಸಗಳಲ್ಲಿ ಸೋರಿಹೋಗುವ ಸಮಯವನ್ನು ಹೇಗೆ ಉಪಯೋಗಿಸುವುದು ಎಂದೇ ಗೊತ್ತಾಗುವುದಿಲ್ಲ. ಕಷ್ಟದ ಕೆಲಸಗಳಿಗಿಂತ ಸುಲಭವಾದ ಕೆಲಸಗಳೆಡೆ ಆಕರ್ಷಿತವಾಗುವುದು ಮನಸ್ಸಿನ ಸ್ವಭಾವ. ಅದಕ್ಕೆ ತಕ್ಕಂತೆ ತಾಳಹಾಕಿದರೆ ನಾವು ಮಾಡಬೇಕು ಅಂದುಕೊಂಡ ಕೆಲಸಗಳೆಲ್ಲ ಹಾಗೆಯೇ ಉಳಿದುಬಿಡುತ್ತವೆ.
ಬಹುಶಃ, ಯಶಸ್ವಿ ಮತ್ತು ಅಯಶಸ್ವಿ ವ್ಯಕ್ತಿಗಳ ನಡುವೆ ಇರುವ ವ್ಯತ್ಯಾಸವೆಂದರೆ ಅದೇ! ಸಾಧಕರು ಮುಖ್ಯ ವಿಷಯಗಳಿಗೆ ಮಹತ್ವ ಕೊಡುತ್ತಾರಷ್ಟೇ ಅಲ್ಲ, ದಿನದಿನದ ಕೆಲಸವನ್ನು ನಿಗದಿತ ಸಮಯ ಹೊಂದಿಸಿಕೊಳ್ಳುವುದರ ಮೂಲಕ ಅಂದಂದೇ ಮುಗಿಸಿಬಿಡುತ್ತಾರೆ.
ಜೀನಿಯಸ್ ಎನಿಸಿಕೊಂಡವರು, ಅದ್ಭುತ ‘ಐಕ್ಯೂ’ ಇರುವವರು ಮಾತ್ರವೇ ಯಶಸ್ವಿ ವ್ಯಕ್ತಿಗಳಾಗುತ್ತಾರೆ ಎಂಬುದನ್ನು ಸುಳ್ಳುಮಾಡಿ ಅಪರೂಪದ ಸಾಧನೆಗೈದ ಸಾಧಾರಣ ವ್ಯಕ್ತಿಗಳೆಲ್ಲರೂ ಅನುಸರಿಸಿದ ಮಾರ್ಗ ಇದೇ!
ದೊಡ್ಡ ಗುರಿಯೊಂದನ್ನು ಇಟ್ಟುಕೊಳ್ಳುವುದು, ಮತ್ತು ದಿನವೂ ಅದನ್ನು ತಲುಪಲು, ಯಾವ ಅಡೆತಡೆ ಬಂದರೂ, ನಿರಂತರವಾಗಿ ಕೆಲಸ ಮಾಡುವುದು!
ನಮ್ಮ ಗುರಿಯೆಡೆಗೆ ಲಕ್ಷ್ಯ ಹರಿಸಿದಾಗ ಮುಖ್ಯವಲ್ಲದ ವಿಷಯಗಳ ಬಗ್ಗೆ ಗಮನ ಕೊಡಲು ಹೋಗಬಾರದು. ಯಾವುದಾದರೂ ಮುಲಾಜಿಗೆ ಸಿಕ್ಕು ನಾವು ನಮಗಿಷ್ಟವಿಲ್ಲದ ಕೆಲಸ ಮಾಡುತ್ತಿರುತ್ತೇವೆ. ಆದರೆ ನಮಗೆ ಯಾವುದು ಮುಖ್ಯವೋ ಅದನ್ನು ಮಾಡಿ ಮುಗಿಸಲು ಬೇಡದ ಅಷ್ಟು ಪ್ರಮುಖವಲ್ಲದ ವಿಚಾರಗಳನ್ನು ಕೈ ಬಿಡುವುದು ಅನಿವಾರ್ಯ. ಮುಖ್ಯಪರೀಕ್ಷೆ ಒಂದು ವಾರವಿರುವಾಗ ದೊಡ್ಡಪ್ಪನ ಮಗಳ ಮದುವೆ ಏನಾದರೂ ಬಂದರೆ ಹೋಗಬೇಕೆಂದಿಲ್ಲ. ಪರೀಕ್ಷೆ ಮುಗಿದ ಮೇಲೂ ಹೋಗಿ ಮಾತಾಡಿಸಿಕೊಂಡು ಬರಬಹುದು. ನಮಗೆ ನಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇದ್ದರೆ ಯಾರೂ ಏನೂ ಅಂದುಕೊಳ್ಳುವುದಿಲ್ಲ. ಇದೊಂದು ಉದಾಹರಣೆ ಮಾತ್ರ.!!