ದಾವಣಗೆರೆ ಅ.9
ಕೋವಿಡ್ 19 ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರದ ಆದೇಶದಂತೆ ಮಾಸ್ಕ್ ಇಲ್ಲದೆ ನಗರ ಪ್ರದೇಶದಲ್ಲಿ ಸಂಚರಿಸುವವರಿಗೆ ರೂ 1000 ದಿಂದ 250 ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಾಸ್ಕ್ ಬಳಸದಿದ್ದರೆ ರೂ 500ರಿಂದ 250 ರೂಪಾಯಿ ದಂಡ ವಸೂಲಾತಿಗೆ ಸರ್ಕಾರ ಆದೇಶಿಸಿದ್ದು.
ಈ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಯವರು ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ನಗರದ ಅರಳಿಮರ ಸರ್ಕಲ್, ವಿದ್ಯಾನಗರ ಮುಖ್ಯ ರಸ್ತೆ, ಮಾಮಾಸ್ ಜಾಯಿಂಟ್ ರಸ್ತೆ, ಡೆಂಟಲ್ ಕಾಲೇಜ್ ರಸ್ತೆ, ಎಂಸಿಸಿ ಬಿಬ್ಲಾಕ್, ಕೃಷ್ಣಯ್ಯ ಶ್ರೇಷ್ಟಿ ಪಾರ್ಕ್ ಹಾಗೂ ಪ್ರಮುಖ ಹೊಟೇಲ್, ಜೀಮ್, ಬಟ್ಟೆ ಅಂಗಡಿ ಸೇರಿದಂತೆ ನಗರದ ಕೆಲವೆಡೆ ಜಿಲ್ಲಾಧಿಕಾರಿಗಳು ಸಂಚರಿಸಿ ಮಾಸ್ಕ್ ಹಾಕದೆ ಇರುವ ಸಾರ್ವಜನಿಕರಿಗೆ ಕೋವಿಡ್ ಬಗ್ಗೆ ಅರಿವು ಮೂಡಿಸಿ ಅವರಿಗೆ ಮಾಸ್ಕ್ ನೀಡಿ ರೂ 250 ದಂಡ ವಸೂಲಿ ಮಾಡಿದರು. ಒಟ್ಟು 350 ಮಂದಿಗೆ ಮಾಸ್ಕ್ ನೀಡಿ ದಂಡ ವಸೂಲಿ ಮಾಡಲಾಯಿತು.
ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಕೋವಿಡ್ 19 ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಂಕನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು ಇತ್ತಿಚಿಗೆ ಸರ್ಕಾರದ ಆದೇಶದಂತೆ ನಗರ ಪ್ರದೇಶದಲ್ಲಿ ರೂ 1000 ದಿಂದ 250 ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಾಸ್ಕ್ ಬಳಸದಿದ್ದರೆ ರೂ 500ರಿಂದ 250 ರೂಪಾಯಿ ದಂಡ ವಿಧಿಸಲು ಕ್ರಮ ಕೈಗ್ಗೊಳಲು ನಮಗೆ ಆದೇಶಿಸಿದ್ದಾರೆ.
ಒಟ್ಟು ಮಾರ್ಚ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆÉ ದಾವಣಗೆರೆ ನಗರದಲ್ಲಿ 84 ಲಕ್ಷ ದಂಡ ವಸೂಲಿಯಾಗಿದೆ ಎಂದರು
ಈ ಜಾಗೃತಿ ಅಭಿಯಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ನಗರ ಡಿವೈಎಸ್‍ಪಿ ನಾಗೇಶ್ ಐತಾಳ್, ಪೊಲೀಸ್ ಇಲಾಖಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.