ದಾವಣಗೆರೆ ಅ.12
ಕೋವಿಡ್ 19 ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ
ಜಾಗೃತಿಯನ್ನು ಮೂಡಿಸಲು ಜಿಲ್ಲೆಯಾದ್ಯಂತ
ಪರಿಣಾಮಕಾರಿಯಾದ ಐಇಸಿ(ಮಾಹಿತಿ, ಶಿಕ್ಷಣ ಮತ್ತು ಸಂವಹನ)
ಚಟುವಟಿಕೆಗಳನ್ನು ಕೈಗೊಳ್ಳಲು ಕ್ರಿಯಾ
ಯೋಜನೆಯನ್ನು ಸಿದ್ದಪಡಿಸಬೇಕೆಂದು ಜಿ.ಪಂ ಸಿಇಓ ಪದ್ಮಾ
ಬಸವಂತಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿ ಜಿಲ್ಲಾ
ಮಟ್ಟದ ಅಧಿಕಾರಿಗಳಿಗೆ ಕೋವಿಡ್ 19 ನಿಯಂತ್ರಿಸಲು ಐಇಸಿ
ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕುರಿತು ಕ್ರಿಯಾ
ಯೋಜನೆ ಸಿದ್ದಪಡಿಸುವ ಸಂಬಂಧ ಪೂರ್ವಭಾವಿಯಾಗಿ
ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ
ಅವರು ಚುನಾವಣೆಯ ಸ್ವೀಪ್ ಚಟುವಟಿಕೆ ರೀತಿಯಲ್ಲಿ ಕೋವಿಡ್
ನಿಯಂತ್ರಣ ಹಿನ್ನೆಲೆ ಕೋವಿಡ್ ಜಾಗೃತಿ ಮೂಡಿಸಲು ಐಇಸಿ
ಚಟುವಟಿಕೆಗಳನ್ನು ಜಿಲ್ಲಾದ್ಯಂತ ಕೈಗೊಳ್ಳಬೇಕಿದ್ದು
ಸರ್ಕಾರದ ಸೂಚನೆಯಂತೆ ಇಲಾಖೆಗಳು ಕ್ರಿಯಾ
ಯೋಜನೆ ಸಿದ್ದಪಡಿಸಿ ಕಾರ್ಯಾರಂಭ ಮಾಡಬೇಕೆಂದರು.
ಎಲ್ಲಾ ಸರ್ಕಾರಿ ಕಚೇರಿಗಳ ಅಧಿಕೃತ ಪತ್ರಗಳ ಮೇಲೆ
ಮಾಸ್ಕ್ ಕಡ್ಡಾಯವಾಗಿ ಬಳಸಿ, ಅಂತರ ಕಾಯ್ದುಕೊಳ್ಳಿ ಹಾಗೂ
ಸ್ಯಾನಿಟೈಸರ್ ಬಳಸಿ ಈ ರೀತಿಯ ಜಾಗೃತಿ ಮೂಡಿಸುವ
ಘೋಷಣೆಗಳನ್ನು ಮುದ್ರಿಸಬೇಕು ಎಂದು ಇಲಾಖೆಗಳ
ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ, ಮೀನುಗಾರಿಕೆ, ಆರೋಗ್ಯ, ಶಿಕ್ಷಣ, ಆಯುಷ್, ಪಾಲಿಕೆ,
ಕಾರ್ಮಿಕ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ತಮ್ಮ ತಮ್ಮ
ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣ ಕುರಿತು
ಕರಪತ್ರಗಳು, ಪೋಸ್ಟರ್‍ಗಳು, ಗೋಡೆ ಬರಹ
ಮಾಡುವ ಮೂಲಕ ಮತ್ತು ತಮ್ಮ ವ್ಯಾಪ್ತಿಯ ವಾಟ್ಸಾಪ್,
ಇತರೆ ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ
ಮೂಡಿಸಬೇಕು. ಹಾಗೂ ಕೊರೊನಾಗೆ ಹೆಚ್ಚು
ಗುರಿಯಾಗುವಂತಹ ಗುಂಪುಗಳನ್ನು ಗುರುತಿಸಿ
ಜಾಗೃತಿ ಮೂಡಿಸುವ ಸಂಬಂಧ ಕ್ರಿಯಾ ಯೋಜನೆಯನ್ನು
ಎಲ್ಲ ಇಲಾಖೆಗಳು ಸಿದ್ದಪಡಿಸಿ ಸಲ್ಲಿಸಬೇಕು. ನಂತರ ಕ್ರಿಯಾ
ಯೋಜನೆಯಂತೆ ಕಾರ್ಯ ನಿರ್ವಹಿಸಿ ಪ್ರತಿದಿನ ಜಿ.ಪಂ ಗೆ ವರದಿ
ಸಲ್ಲಿಸಬೇಕೆಂದರು.
ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಗಳಲ್ಲಿ ಕೊರೊನ ನಿಯಂತ್ರಣ
ಜಾಗೃತಿ ಮೂಡಿಸಲು ದೊಡ್ಡ ಬ್ಯಾನರ್‍ಗಳು, ಬಸ್‍ಗಳ ಮೇಲೆ
ಮತ್ತು ಒಳಭಾಗದಲ್ಲಿ ಸ್ಟಿಕ್ಕರ್‍ಗಳು ಹಾಗೂ ಬಸ್ ಟಿಕೆಟ್‍ಗಳ
ಮೇಲೆ ಕೊರೊನ ನಿಯಂತ್ರಣ ಕುರಿತಾದ ಬರಹಗಳನ್ನು
ಮುದ್ರಿಸುವಂತೆ ಸೂಚಿಸಿದರು.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ
ಗಾಡಿಗಳಲ್ಲಿ ಕೊರೊನ ಜಾಗೃತಿ ಕುರಿತಾದ
ಹಾಡುಗಳು(ಜಿಂಗಲ್ಸ್) ಹಾಕುವ ವ್ಯವಸ್ಥೆ ಮಾಡಬೇಕು.
ಕೋರ್ಟ್ ಕಚೇರಿಯಲ್ಲಿ ಸಹ ಗೋಡೆ ಬರಹ, ಕರಪತ್ರದ
ಮೂಲಕ ಹಾಗೂ ಕಾನೂನು ಸೇವಾ ಪ್ರಾಧಿಕಾರದ
ಕಾರ್ಯಕ್ರಮಗಳ ಮೂಲಕ ಸಹ ಜಾಗೃತಿ
ಮೂಡಿಸಬೇಕೆಂದರು.
ನಗರದ ರಾಮ್ &ಚಿmಠಿ; ಕೋ, ಗುಂಡಿ ವೃತ್ತಗಳಲ್ಲಿ ಹಾಗೂ
ಇತರೆ ಚಾಟ್ಸ್ ಅಂಗಡಿಗಳ ಬಳಿ ಸಂಜೆ ಹೊತ್ತು ಜನರು ಸಾಮಾಜಿಕ
ಅಂತರ ಪಾಲಿಸದಿರುವುದು ಕಂಡು ಬಂದಿದ್ದು ಅಂತಹ
ಪ್ರದೇಶಗಳಲ್ಲಿ ಹೆಚ್ಚಿನದಾಗಿ ಜಾಗೃತಿ ಮೂಡಿಸುವ ಹಾಗೂ
ಪೋಸ್ಟರ್‍ಗಳ ಮೂಲಕ ಅಥವಾ ಮೈಕ್ ಘೋಷಣೆ
ಮೂಲಕ ಅರಿವು ಮೂಡಿಸಬೇಕೆಂದರು.
ಹೋಂ ಐಸೋಲೇಷನ್ ನಿಯಮಗಳು ಜೊತೆಗೆ
ಕೊರೊನಾ ಪಾಸಿಟಿವ್ ಬಂದವರಿಗೆ ಆತ್ಮಸ್ಥೈರ್ಯ ತುಂಬಿ
ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಕುರಿತು ಜಾಗೃತಿ
ಮೂಡಿಸುವ ಕೆಲಸ ಆಗಬೇಕು. ಗ್ರಾಮೀಣ ಭಾಗದಲ್ಲಿ ಸಹ
ಜಾಗೃತಿ ಹೆಚ್ಚಿಸಬೇಕು, ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ
ಗ್ರಾಮಸಭೆಗಳು ನಡೆಯಬೇಕು ಎಂದ ಅವರು ಕೋವಿಡ್
ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ
ಮನೆಗಳಲ್ಲಿ ಪಲ್ಸ್ ಆಕ್ಸಿಮೀಟರ್ ಇಟ್ಟುಕೊಳ್ಳುವುದು ಒಳಿತು
ಎಂದರು.
ಎಲ್ಲಿ ನೋಡಿದರೂ ಕೋವಿಡ್ ನಿಯಂತ್ರಣ ಕ್ರಮಗಳಾದ ಮಾಸ್ಕ್
ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಮತ್ತು ಕೈ
ಸ್ವಚ್ಚವಾಗಿಟ್ಟುಕೊಳ್ಳುವುದರ ಕುರಿತು ಎಚ್ಚರಿಸುವಂತಹ
ಪೋಸ್ಟರ್, ಚಿತ್ರಗಳು, ಸಂದೇಶಗಳು ಕಾಣುವಂತೆ ಐಇಸಿ
ಚಟುವಟಿಕೆ ಜಿಲ್ಲಾದ್ಯಂತ ಆಗಬೇಕು.
ಪದ್ಮಾ ಬಸವಂತಪ್ಪ ಜಿ.ಪಂ. ಸಿಇಓ
ಸಭೆಯಲ್ಲಿ ಡಿಡಿಪಿಐ ಪರಮೇಶ್ವರಪ್ಪ, ಕೃಷಿ ಜಂಟಿ ನಿರ್ದೇಶಕ
ಶ್ರೀನಿವಾಸ್ ಚಿಂತಾಲ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ನಟರಾಜ್,
ಆರ್‍ಸಿಹೆಚ್‍ಓ ಡಾ.ಮೀನಾಕ್ಷಿ, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ
ಎಸ್.ಆರ್. ಗಂಗಪ್ಪ, ಆಯುಷ್ ಅಧಿಕಾರಿ ಡಾ.ಶಂಕರೇಗೌಡ,
ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ಡಿವೈಎಸ್‍ಪಿ ನಾಗೇಶ್ ಐತಾಳ್ ಸೇರಿದಂತೆ
ಇತರೆ ಅಧಿಕಾರಿಗಳು ಕೋವಿಡ್ ಜಾಗೃತಿ ಕುರಿತು ತಾವು
ಪೂರ್ವಭಾವಿಯಾಗಿ ತಯಾರಿಸಿದ ಕ್ರಿಯಾ ಯೋಜನೆ ಬಗ್ಗೆ
ವಿವರಣೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು
ಹಾಜರಿದ್ದರು.