ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ
ಕಾರ್ಯದರ್ಶಿಗಳಾದ ಎಂ.ಪಿ.ರೇಣುಕಾಚಾರ್ಯರವರು ಮೇ 6
ರಿಂದ 9 ರವರೆಗೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಮೇ 6 ರ ಬೆಳಿಗ್ಗೆ 10 ಗಂಟೆಗೆ ಹೊನ್ನಾಳಿಯಿಂದ ಹೊರಟು
10.30 ಕ್ಕೆ ಸವಳಂಗ ತಲುಪಿ ಗ್ರಾಮದ ಪ್ರಾಥಮಿಕ ಆರೋಗ್ಯ
ಕೇಂದ್ರಕ್ಕೆ ಭೇಟಿ ನೀಡಿ, ಕೋವಿಡ್ 19 ಸೋಂಕಿತರ ಚಿಕಿತ್ಸೆಗೆ
ತೆಗೆದುಕೊಂಡಿರುವ ಕ್ರಮಗಳ ಪರಿಶೀಲನೆ ನಡೆಸುವರು.
ಬೆಳಿಗ್ಗೆ 11.30 ಕ್ಕೆ ಬೆಳಗುತ್ತಿಗೆ ಆಗಮಿಸಿ ಗ್ರಾಮದ ಪ್ರಾಥಮಿಕ
ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಕೋವಿಡ್ 19 ಸೋಂಕಿತರ
ಚಿಕಿತ್ಸೆಗೆ ತೆಗೆದುಕೊಂಡಿರುವ ಕ್ರಮಗಳ ಪರಿಶೀಲನೆ
ನಡೆಸುವರು. ಮಧ್ಯಾಹ್ನ 12.30 ಕ್ಕೆ ಕತ್ತಿಗೆ ಗ್ರಾಮಕ್ಕೆ
ಆಗಮಿಸಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ
ನೀಡಿ, ಕೋವಿಡ್ 19 ಸೋಂಕಿತರ ಚಿಕಿತ್ಸೆಗೆ ತೆಗೆದುಕೊಂಡಿರುವ
ಕ್ರಮಗಳ ಪರಿಶೀಲನೆ ನಡೆಸುವರು. ಮಧ್ಯಾಹ್ನ 1 ಕ್ಕೆ
ಮಾದನಬಾವಿ ಗ್ರಾಮಕ್ಕೆ ಆಗಮಿಸಿ ಮೊರಾರ್ಜಿ ದೇಸಾಯಿ ವಸತಿ
ಶಾಲೆಯಲ್ಲಿನ ಕೋವಿಡ್ ಸೆಂಟರ್‍ಗೆ ಭೇಟಿ ನೀಡಿ ಕೋವಿಡ್ 19
ಸೋಂಕಿತರ ಚಿಕಿತ್ಸೆಗೆ ತೆಗೆದುಕೊಂಡಿರುವ ಕ್ರಮಗಳ
ಪರಿಶೀಲನೆ ನಡೆಸುವರು. ಸಂಜೆ 4 ಗಂಟೆಗೆ ಹೊನ್ನಾಳಿಗೆ
ಆಗಮಿಸಿ ಹೊನ್ನಾಳಿ ತಾಲ್ಲೂಕು ವರ್ತಕರೊಂದಿಗೆ ಸಭೆ
ನಡೆಸುವರು. ಸಂಜೆ 5 ಗಂಟೆಗೆ ನ್ಯಾಮತಿಗೆ ಆಗಮಿಸಿ ನ್ಯಾಮತಿ
ತಾಲ್ಲೂಕು ವರ್ತಕರೊಂದಿಗೆ ಸಭೆ ನಡೆಸುವರು. ಸಂಜೆ 7
ಗಂಟೆಗೆ ಪ್ರಯಾಣಿಸಿ ಅಲ್ಲಿಯೇ ವಾಸ್ತವ್ಯ ಮಾಡುವರು.
ಮೇ 7, 8 ಮತ್ತು 9 ರಂದು ಕಾರ್ಯಕ್ರಮಗಳು
ಯಥಾವತ್ತಾಗಿ ಮುಂದುವರೆಯಲಿವೆ ಎಂದು
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳ ವಿಶೇಷ
ಕರ್ತವ್ಯಾಧಿಕಾರಿ ಕೆ.ರುದ್ರೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *