ಶಿವಮೊಗ್ಗ : ನಗರದಲ್ಲಿ ಕರವೇ ಯುವಸೇನೆ ಹಾಗೂ ಆನಂದಣ್ಣ ಯಂಗ್ ಬ್ರಿಗೇಡ್ ವತಿಯಿಂದ ಪತ್ರಿಕಾ ಹಂಚಿಕೆದಾರರಿಗೆ, ಸಗಟು ವಾಹನ ಚಾಲಕರಿಗೆ, ಮಾನಸ ಶಾಲೆಯ ಶಿಕ್ಷಕ ವರ್ಗ ಸೇರಿದಂತೆ ಶಾಲಾ ಸಿಬ್ಬಂದಿಗಳಿಗೆ ಉಚಿತ “ಪುಡ್ ಕಿಟ್” ವಿತರಿಸಲಾಯಿತು.
ಏಕಕಾಲದಲ್ಲಿ ಮೂರು ಕಡೆ “ಪುಡ್ ಕಿಟ್ ವಿತರಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಕರವೇ ಕಿರಣ್ ರವರು ಕೋವಿಡ್-19 ಸಾಂಕ್ರಮಿಕ ಹರಡುವಿಕೆ ವ್ಯಾಪಕವಾಗಿ ಜನ ಸಮುದಾಯದವನ್ನು ಕಂಗೆಡಿಸಿದ್ದು ಬದುಕುಗಳು ಬದಲಾವಣೆಗೊಂಡಿದೆ ಅಲ್ಲದೆ ಅತಂತ್ರ ವ್ಯವಸ್ಥೆಗೆ ತಲುಪಿದೆ ಎಂದು ಅವರು ಹೇಳಿದರು
ಆನಂದಣ್ಣ ಯಂಗ್ ಬ್ರಿಗೇಡ್ ಸ್ಥಾಪನೆಯ ಬಗ್ಗೆ ವಿವರಿಸಿದ ಅವರು ಆನಂದಣ್ಣ ಕನ್ನಡಪರ ನಿಲುವುಗಳಿಗೆ ಬದ್ದರಾಗಿ ಸಾಕಷ್ಟು ವರುಷಗಳು ಕಾಲ ಸೇವೆ ಸಲ್ಲಿಸಿರುವ ಕನ್ನಡದ ದನಿಯಾಗಿದ್ದು ಅವರು ಹುಟ್ಟು ಹಬ್ಬದ ಈ ದಿನದಂದು ವಿವದ ರಂಗಗಳಲ್ಲಿ ಕೆಲಸ ನಿರ್ವಹಿಸುತ್ತಾ ಲಾಕ್ಡೌನ್ ನಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಬದುಕುಗಳಿಗೆ ಒಂದಿಷ್ಟು ನೆರವು ನೀಡಲು ಮುಂದಾಗಿರುವುದು ನಮ್ಮಗಳ ಆದ್ಯಕರ್ತವ್ಯವೆಂದು ತಿಳಿಸಿದರು.
ಗಾಂಧಿನಗರದ ಸೂರ್ಯಗಗನ ಪತ್ರಿಕಾಲಯದ ಮುಂದೆ ಸಗಟು ವಾಹನ ಚಾಲಕರಿಗೆ ಹಾಗೂ ಒಂದಿಷ್ಟು ಪತ್ರಿಕಾ ಹಂಚಿಕೆದಾರರಾದ ಶ್ರಮಜೀವಿಗಳಿಗೆ ಸೇರಿದಂತೆ ಆರ್.ಎಂ,ಎಲ್ ನಗರದಲ್ಲಿರುವ ಮಾನಸ ಶಾಲೆಯ ಶಿಕ್ಷಕರಿಗೆ ಮತ್ತು ಸಿಬ್ಬಂದಿಗಳಿಗೆ “ಪುಡ್ ಕಿಟ್” ಗಳನ್ನು ವಿತರಿಸಿ ಮನುಷ್ಯತ್ವವೇ ನಮ್ಮಗಳಿಗೆ ಮಾನದಂಡವಾಗಬೇಕು ಕೋರೊನಾ ಈ ಕಾಲದಲ್ಲಿ ಖಾಸಗಿ ಶಿಕ್ಷಕರು ವಂಚಿತರಾಗುತ್ತಿದ್ದಾರೆ ಹಾಗೂ ಸರಕಾರದ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದಾರೆ ಅಲ್ಲದೆ ತಾತ್ಸಾರತೆಗೆ ಒಳಗಾಗುತ್ತಿದ್ದಾರೆ ಅವರಿಗೆ ಸಿಗುವ ಸಂಬಳವು ಸಕಾಲದಲ್ಲಿ ಸಿಗದ ಹಂತದ ಪ್ರಸ್ತುತ ದಿನದಲ್ಲಿ ಅವರಿಗೆ ಸಹಾಯ ಹಸ್ತ ಅಗತ್ಯವಾಗಿದ್ದು ಇಂದು ಈ ವರ್ಗಗಳಿಗೆ ನೀಡುತ್ತಿರುವ “ಪುಡ್ ಕಿಟ್” ವಿತರಣೆಯು ತೃಪ್ತಿ ತಂದಿದೆ ಎಂದು ಕರವೇ ಕಿರಣ್ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕರವೇ ಕಿರಣ್, ಕಾರ್ಯಾಧ್ಯಕ್ಷರಾದ ಶಿವುಕುಮಾರ್. ಯುವ ಘಟಕದ ಅಧ್ಯಕ್ಷರಾದ ಜಯಪ್ಪ, ನಗರ ಅಧ್ಯಕ್ಷರಾದ ಹೇಮಂತ್, ಪತ್ರಿಕಾ ಸಂಚಾಲಕರಾದ ಹೆಚ್.ಎಸ್ ವಿಷ್ಣುಪ್ರಸಾದ್, ಪವನ್ ಕುಮಾರ್, ರಾಮಣ್ಣ, ಅನಿಲ್ ವರ್ಣೆಕರ್, ಮಾರ್ಗದರ್ಶಕರಾದ ಗಾರಾ,ಶ್ರೀನಿವಾಸ್ ರವರುಗಳು ಸೇರಿದಂತೆ ಮಾನಸ ಶಾಲೆಯ ಶಿಕ್ಷಕರು ,ಸಿಬ್ಬಂದಿಗಳು ಉಪಸ್ಥಿತರಿದ್ದರು.,

Leave a Reply

Your email address will not be published. Required fields are marked *