ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ದರ 100 ರೂಪಾಯಿ ಏರಿಕೆಯಾಗಿರುವುದು ಖಂಡಿಸಿ- ತಟ್ಟೆ ಜಾಗಟೆ ಬಾರಿಸಿ ಸಿಹಿ ಹಂಚಿ ಅಣಕು ಸಂಭ್ರಮಾಚರಣೆ
ದೇಶಾದ್ಯಂತ ಪೆಟ್ರೋಲ್ ದರ ಏರಿಕೆಯನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ನಗರದಲ್ಲಿ ಪೆಟ್ರೋಲ್ ಬಂಕ್ ಮುಂಭಾಗ ಕೇಂದ್ರ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ತಟ್ಟೆ ಜಾಗಟೆ ಶಂಕು ಗಳನ್ನು ಬಾರಿಸಿ ಪೆಟ್ರೋಲ್ ಬಂಕಿಗೆ ಬರುವ ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ನೀಡುವ ಮುಖಾಂತರ ಅಣಕು ಸಂಭ್ರಮಾಚರಣೆಯನ್ನು ಆಚರಿಸಲಾಯಿತು
ಇದೇನಾ ಅಚ್ಚೆ ದಿನ್ ದಿನ್ ಆಯೆ ಗಾ ಪೆಟ್ರೋಲ್ ದರದಲ್ಲಿ ಶತಕ ಬಾರಿಸಿದ ನರೇಂದ್ರ ಮೋದಿಗೆ ಅಭಿನಂದಿಸುತ್ತದೆ
ಕೂಡಲೇ ರಾಷ್ಟ್ರಪತಿಗಳು ಇಂತಹ ಕೋವಿಡ್ ನಂತಹ ವಿಪತ್ತು ಪರಿಸ್ಥಿತಿಯಲ್ಲೂ ಪೆಟ್ರೋಲ್ ದರದಲ್ಲಿ ಶತಕ ಬಾರಿಸಿದ ಸನ್ಮಾನ್ಯ ಪ್ರಧಾನ ಮಂತ್ರಿಗಳಿಗೆ ಯಾವುದಾದರೂ ಭೂಷಣ ಅಥವಾ ಯಾವುದಾದರೂ ಚಕ್ರ ವೀರ ಪ್ರಶಸ್ತಿಗಳನ್ನು ನೀಡಲಿ ಎಂದು ಯುವ ಕಾಂಗ್ರೆಸ್ ಆಗ್ರಹಿಸಿದೆ
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಪಿ ಗಿರೀಶ್ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್ , ಮಹಾನಗರ ಪಾಲಿಕೆ ಸದಸ್ಯರಾದ ಎಚ್.ಸಿ. ಯೋಗೀಶ್, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್ , ಗ್ರಾಮಂತರ ಅಧ್ಯಕ್ಷ ಈಟಿ ನಿತಿನ್ , ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ . ಎಸ್ ಕುಮಾರೇಶ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಗಳಾದ ಆರ್ ಕಿರಣ್ , ಟಿವಿ ರಂಜಿತ್, ಪದಾಧಿಕಾರಿಗಳಾದ ಎಂ ರಾಹುಲ್ ಸಂದೀಪ್ ಮೊದಲಿಯಾರ್, ವೆಂಕಟೇಶ್ ಕಲ್ಲೂರು, ಪವನ್, ರಾಕೇಶ್, ವಿ ಶರತ್, ಗೋವಿಂದ ವರ್ಮ, ಪ್ರಜ್ವಲ್, ಇತರರು ಇದ್ದರು