ವ್ಯಕ್ತಿಯು ಸತತವಾಗಿ ನಕಾರಾತ್ಮಕ ಸ್ಪಂದನಗಳ ಸಂಪರ್ಕದಲ್ಲಿದ್ದರೆ ಅವನ ಮೇಲೆ ಕೆಟ್ಟ ಪರಿಣಾಮವಾಗುತ್ತದೆ ಮತ್ತು ಪರಿಣಾಮಸ್ವರೂಪ ಸಮಾಜದ ಹಾನಿಯಾಗುವುದರೊಂದಿಗೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ವಾತಾವರಣವು ಕಲುಷಿತವಾಗುತ್ತದೆ. ಇದನ್ನು ತಡೆಗಟ್ಟಲು ನಾವು ಆಧ್ಯಾತ್ಮಿಕ ಸ್ಪಂದನಗಳನ್ನು ಮತ್ತು ಅವುಗಳ ನಮ್ಮ ಜೀವನದ ಮೇಲಿನ ಪರಿಣಾಮ ಇವುಗಳ ಕುರಿತು ಸ್ವತಃಕ್ಕೆ ಪ್ರಬೋಧನೆ ಮಾಡುವುದು ಆವಶ್ಯಕವಾಗಿದೆ. ಅದರೊಂದಿಗೆ ನಾವು ನಿತ್ಯನಿಯಮದಿಂದ ಸಾಧನೆಯನ್ನು ಮಾಡಿದರೆ ನಮ್ಮತ್ತ ಸಕಾರಾತ್ಮಕತೆಯು ಆಕರ್ಷಿತವಾಗುತ್ತದೆ ಮತ್ತು ಫಲಸ್ವರೂಪ ನಮ್ಮಷ್ಟಕ್ಕೆ ನಾವೇ ಹೆಚ್ಚೆಚ್ಚು ಸಾತ್ತ್ವಿಕ ಉಪಾಯವನ್ನು ಆಯ್ಕೆ ಮಾಡುತ್ತೇವೆ, ಎಂದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಶ್ರೀ. ಶಾನ್ ಕ್ಲಾರ್ಕ್ ಇವರು ಪ್ರತಿಪಾದಿಸಿದರು. ಅವರು ಯಾರ್ಕ್, ಯು.ಕೆ.ಯಲ್ಲಿ ಆಯೋಜಿಸಲಾದ ‘6 ನೇ ಇಂಟರ್‌ನ್ಯಾಶನಲ್ ಕಾನ್ಫರೆನ್ಸ್ ಆಫ್ ದಿ ಇಂಟರನ್ಯಾಶನಲ್ ನೆಟ್‌ವರ್ಕ ಫಾರ್ ದಿ ಸ್ಟಡೀಜ್ ಆಫ್ ಸ್ಪಿರಿಚ್ಯುವ್ಯಾಲಿಟಿ’ ಈ ವೈಜ್ಞಾನಿಕ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ಪರಿಷತನ್ನು ‘ಇಂಟರನ್ಯಾಶನಲ್ ನೆಟ್‌ವರ್ಕ ಫಾರ್ ದಿ ಸ್ಟಡೀಜ್ ಆಫ್ ಸ್ಪಿರಿಚ್ಯುವ್ಯಾಲಿಟಿ (INSS) ಇನ್ ಅಸೋಸಿಯೆಟ್ ವಿಥ್ ಯಾರ್ಕ ಸೆಂಟ್ ಜಾನ್ ಯುನಿವರ್ಸಿಟಿ, ಯಾಕ್, ಯು.ಕೆ.’ ಈ ಸಂಸ್ಥೆಯು ಆಯೋಜಿಸಿತ್ತು. ಅವರು ‘ಹೌ ಬಿಝನೆಸ್ ಆಂಡ್ ಫ್ರೋಫೆಶನಲ್ ಪ್ರ್ಯಾಕ್ಟಿಸ್ ಆಫೆಕ್ಟ್ ಸೊಸೈಟಿ ಆಟ್ ಎ ಸ್ಪಿರಿಚ್ಯುವಲ್ ಲೆವಲ್’ ಈ ಸಂಶೋಧನಾ ಪ್ರಬಂಧವನ್ನು ಪ್ರಸ್ತುತ ಪಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ಈ ಸಂಶೋಧನಾ ಪ್ರಬಂಧದ ಲೇಖಕರಾಗಿದ್ದು ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ ಇವರು ಸಹಲೇಖಕರಾಗಿದ್ದಾರೆ.
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ವೈಜ್ಞಾನಿಕ ಪರಿಷತ್ತಿನಲ್ಲಿ ಪ್ರಸ್ತುತ ಪಡಿಸಿದ ಇದು 74 ನೇ ಸಂಶೋಧನಾ ಪ್ರಬಂಧವಾಗಿತ್ತು. ಇದಕ್ಕೂ ಮೊದಲು ವಿಶ್ವವಿದ್ಯಾಲಯವು ೧೫ ರಾಷ್ಟ್ರೀಯ ಮತ್ತು ೫೮ ಅಂತರ್‌ರಾಷ್ಟ್ರೀಯ ವೈಜ್ಞಾನಿಕ ಪರಿಷತ್ತುಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಪಡಿಸಿದೆ. ಇವುಗಳ ಪೈಕಿ 5 ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ವಿಶ್ವವಿದ್ಯಾಲಯಕ್ಕೆ ‘ಸರ್ವೋತ್ಕೃಷ್ಠ ಸಂಶೋಧನಾ ಪ್ರಬಂಧ’ ಪ್ರಶಸ್ತಿಯು ಪ್ರಾಪ್ತವಾಗಿದೆ.
ಶ್ರೀ ಶಾನ್ ಕ್ಲಾರ್ಕ ಇವರು ಮಾತನಾಡುತ್ತಾ, ಸಮಾಜದ ಕಲ್ಯಾಣಕ್ಕಾಗಿ ೭೦ ಮತ್ತು ೮೦ ರ ದಶಕಗಳಲ್ಲಿ ಉದ್ಯೋಗಕ್ಷೇತ್ರದಲ್ಲಿ ‘ಶಾಶ್ವತ ವಿಕಾಸ’ (Sustainable development) ಮತ್ತು ‘ಔದ್ಯೋಗಿಕ ಸಾಮಾಜಿಕ ಜವಾಬ್ದಾರಿ’ (Corporate Social Responsibility (CSR)) ಈ ೨ ಮಹತ್ವಪೂರ್ಣ ಚಳುವಳಿಗಳು ಪ್ರಾರಂಭವಾದವು. ಹೀಗಿದ್ದರೂ ಇಂದು ಸಮಾಜದ ಸ್ಥಿತಿಯನ್ನು ನೋಡಿದರೆ ಅಧಿಕಾರದಲ್ಲಿನ ವ್ಯಕ್ತಿಗಳ ಚಾರಿತ್ರ್ಯ, ಭ್ರಷ್ಟಾಚಾರ, ಲಾಲಸೆ, ಶಿಕ್ಷಣದ ಅಭಾವ, ಪ್ರಯತ್ನಗಳಲ್ಲಿನ ಸಾತತ್ಯತೆಯ ಅಭಾವ, ಒಗ್ಗಟ್ಟಿನ ಪ್ರಯತ್ನಗಳ ಅಭಾವ ಇವುಗಳಂತಹ ಅಂಶಗಳಿಂದ ಈ ಚಳುವಳಿಗಳ ಫಲನಿಷ್ಪತ್ತಿಯು ಕಡಿಮೆ ಇದೆ. ಈ ಚಳುವಳಿಯು ಆರಂಭವಾಗಿ ೫೦ ವರ್ಷಗಳು ಕಳೆದರೂ ಇಂದು ನಮ್ಮ ಸುತ್ತಮುತ್ತಲೂ ನೋಡಿದರೆ ನಮಗೆ ಯಾವತ್ತೂ ಆಗದಿದ್ದಷ್ಟು ದೊಡ್ಡ ಪ್ರಮಾಣದಲ್ಲಿ ಪರಿಸರದಲ್ಲಿನ ಕೆಟ್ಟ ಪರಿವರ್ತನೆ, ಯುದ್ಧದ ಛಾಯೆ ಇವುಗಳಂತಹ ಆಪತ್ಕಾಲವನ್ನು ನಿರ್ಮಿಸುವ ಸಂಕಟಗಳು ಭಯಪಡಿಸುವುದು ಕಂಡು ಬರುತ್ತದೆ. ಇವೆಲ್ಲವನ್ನು ನೋಡಿದರೆ ಎಲ್ಲರಿಗೂ, ಮನುಕುಲದಿಂದ ಏನಾದರೂ ತಪ್ಪುಗಳಾಗುತ್ತಿವೆಯೇ ? ಎಂಬ ಪ್ರಶ್ನೆ ಮೂಡುವುದು ಸಹಜವಾಗಿದೆ. ಇದರಲ್ಲಿ ಧರ್ಮಪಾಲನೆಯ ಅಭಾವ’ ಇದೇ ತಪ್ಪಾಗುವುದರ ಹಿಂದಿನ ಅಂಶವಾಗಿದೆ. ಆದಿ ಶಂಕರಾಚಾರ್ಯರು ‘ಧರ್ಮ’ ಈ ಸಂಜ್ಞೆಯ ಮುಂದಿನ ವ್ಯಾಖ್ಯೆಯನ್ನು ಮಾಡಿದ್ದಾರೆ. ಅದು ಮುಂದಿನ 3 ಕಾರ್ಯಗಳನ್ನು ಮಾಡುತ್ತದೆ :
ಅ. ಸಮಾಜವ್ಯವಸ್ಥೆಯನ್ನು ಉತ್ತಮ ಸ್ಥಿತಿಯಲ್ಲಿಡುವುದು.
ಆ. ಪ್ರತಿಯೊಂದು ಪ್ರಾಣಿಮಾತ್ರರ ಐಹಿಕ ಉನ್ನತಿಯನ್ನು ಸಾಧಿಸುವುದು.
ಇ. ಆಧ್ಯಾತ್ಮಿಕ ಉನ್ನತಿಯನ್ನೂ ಸಾಧ್ಯ ಮಾಡಿಕೊಡುವುದು.
ಸದ್ಯದ ಸ್ಥಿತಿಯಲ್ಲಿ ಔದ್ಯೋಗಿಕ ಆಚಾರಸಂಹಿತೆಯ ವೈಚಾರಿಕ ನೇತೃತ್ವದ ಗಮನ ಅಂಶ ಕ್ರ. ‘ಅ.’ ಮತ್ತು ‘ಆ.’ ಇವುಗಳ ಕಡೆಗಿದೆ ; ಆದರೆ ಯಾವುದೇ ಅಂಶ ಕ್ರ. ‘ಇ.’ (ಆಧ್ಯಾತ್ಮಿಕ ಉನ್ನತಿ)ಯ ಕಡೆಗೆ ಗಮನವಿಲ್ಲ. ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಮಾಡಬೇಕಾದ ಪ್ರಯತ್ನಗಳ ಅಂತರ್ಗತ ನಮ್ಮ ಜೀವನ ಮತ್ತು ನಾವು ಏನೆಲ್ಲ ಮಾಡುತ್ತೇವೆಯೋ ಅದರಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುವುದು ಮತ್ತು ನಕಾರಾತ್ಮಕತೆಯನ್ನು ಕಡಿಮೆ ಮಾಡುವುದು’, ಒಂದು ಮಹತ್ವದ ಪ್ರಯತ್ನವಾಗಿದೆ’ ಎಂದು ಹೇಳಿದರು.
ಅನಂತರ ಶ್ರೀ. ಕ್ಲಾರ್ಕ ಇವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಬಳಸಿ ಮಾಡಲಾದ ವಿಫುಲ ಸಂಶೋಧನೆಗಳಲ್ಲಿನ ೨ ಪ್ರಯೋಗಗಳ ಕುರಿತು ಮಾಹಿತಿಯನ್ನು ನೀಡಿದರು.
ಮೊದಲ ಪ್ರಯೋಗವು ಉಡುಪುಗಳ ಕುರಿತಾಗಿತ್ತು. ಈ ಪ್ರಯೋಗದಲ್ಲಿ ಓರ್ವ ಮಹಿಳೆಯು ಮುಂದಿನ 7 ಪ್ರಕಾರಗಳ ಉಡುಪುಗಳನ್ನು ಕ್ರಮದಿಂದ ಪ್ರತಿಯೊಂದನ್ನು 30 ನಿಮಿಷಗಳ ಕಾಲ ಧರಿಸಿದ್ದಳು – 1. ‘ವೈಟ್ ಇವನಿಂಗ್ ಗೌನ್’ (ಪಾದದತನಕ ಇರುವ ಬಿಳಿ ನಿಲುವಂಗಿ), 2. ‘ಬ್ಲ್ಯಾಕ್ ಟ್ಯೂಬ್ ಟಾಪ್ ಡ್ರೆಸ್’ (ಆಫ್ ಶೋಲ್ಡರ್’, ಅಂದರೆ ಭುಜಗಳ ಕಡೆಗೆ ತೆರೆದಿರುವ ಕಪ್ಪು ಬಣ್ಣದ ಪಾಶ್ಚಾತ್ತ್ಯ ಉಡುಪು) 3. ಕಪ್ಪು ಟಿ-ಶರ್ಟ ಮತ್ತು ಕಪ್ಪು ಪ್ಯಾಂಟ್, 4. ಬಿಳಿ ಟಿ-ಶರ್ಟ ಮತ್ತು ಬಿಳಿ ಪ್ಯಾಂಟ್, 5. ಸಲವಾರ-ಕುರ್ತಾ, 6. ಆರು ಗಜದ ಸೀರೆ ಮತ್ತು 7. ಒಂಬತ್ತುಗಜದ ಸೀರೆ. ಅವಳು ಪ್ರತಿಯೊಂದು ಉಡುಪನ್ನು ಧರಿಸುವ ಮೊದಲು ಮತ್ತು ಧರಿಸಿದ ನಂತರ ‘ಯು.ಎ.ಎಸ್.’ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಆ ಮಹಿಳೆಯು ಮೊದಲ 4 ಉಡುಪುಗಳನ್ನು ಧರಿಸಿದ ನಂತರ ಅವಳಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಹೆಚ್ಚಳವಾಗಿರುವುದು ಸ್ಪಷ್ಟವಾಯಿತು. ಅನಂತರದ 3 ಉಡುಪುಗಳನ್ನು ಧರಿಸಿದ ನಂತರ ಮಾತ್ರ ಅವಳಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಇಳಿಕೆಯಾಯಿತು. ಉಡುಪು ಕ್ರ. 2 ಮತ್ತು 4 ಇವುಗಳು ಒಂದೇ ರೀತಿಯದ್ದಾಗಿದ್ದವು, ಕೇವಲ ಬಣ್ಣಗಳಲ್ಲಿ ವ್ಯತ್ಯಾಸವಿತ್ತು. ಆದರೂ ಮಹಿಳೆಯು ಉಡುಪು ಕ್ರ. 3 (ಕಪ್ಪು ಬಣ್ಣದ ಉಡುಪು) ಧರಿಸಿದ್ದಾಗ ಉಡುಪು ಕ್ರ. 4 ರ ತುಲನೆಯಲ್ಲಿ ಅವಳಲ್ಲಿ ಬಹಳಷ್ಟು ಹೆಚ್ಚು ನಕಾರಾತ್ಮಕ ಊರ್ಜೆಯು ಕಂಡು ಬಂದಿತು. ಇದು ವೈಶಿಷ್ಟ್ಯಪೂರ್ಣವಾಗಿದೆ. ಮಹಿಳೆಯಲ್ಲಿ ಸಕಾರಾತ್ಮಕ ಊರ್ಜೆಯು ಕೇವಲ ಅವಳು ಕೊನೆಯ ೩ ಉಡುಪುಗಳನ್ನು ಧರಿಸಿದಾಗ ಕಂಡು ಬಂದಿತು. ಈ ಪ್ರಯೋಗದಿಂದ, ಉಡುಪುಗಳ ವಿಧ ಮತ್ತು ಬಣ್ಣ ಇವುಗಳ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ (ಊರ್ಜೆಯ) ಸ್ತರದಲ್ಲಿ ಪರಿಣಾಮವಾಗುತ್ತದೆ; ಆದರೆ ಉಡುಪುಗಳನ್ನು ತಯಾರಿಸುವ ಕಂಪನಿಗಳು ಮತ್ತು ಸಂಬಂಧಿತ ಉದ್ಯಮಿಗಳು (ಫ್ಯಾಶನ್ ಡಿಝೈನರ್) ಇದರ ಬಗ್ಗೆ ಸಂಪೂರ್ಣವಾಗಿ ಅಜ್ಞಾನಿಗಳಾಗಿರುತ್ತಾರೆ. ಎರಡನೇಯ ಪ್ರಯೋಗದಲ್ಲಿ ನಾಲ್ಕು ಪ್ರಕಾರಗಳ ಸಂಗೀತದಿಂದ ವ್ಯಕ್ತಿಯ ಮೇಲಾದ ಪರಿಣಾಮವನ್ನು ಯು.ಎ.ಎಸ್. ಉಪಕರಣದ ಸಹಾಯದಿಂದ ಅಳೆಯಲಾಯಿತು.
ಶಾಶ್ವತ ವಿಕಾಸ ಮತ್ತು ವ್ಯಾವಸಾಯಿಕ ಸಾಮಾಜಿಕ ಜವಾಬ್ದಾರಿ ಇವುಗಳ ಆಚೆಗೆ ‘ಆಧ್ಯಾತ್ಮಿಕ ಪರಿಣಾಮ’ ಹೆಸರಿನ ಒಂದು ಅಂಶವಿದೆ ಮತ್ತು ಹೊಸ ಉತ್ಪಾದನೆಗಳ ಮತ್ತು ಸೇವೆಗಳನ್ನು ನಿರ್ಮಿಸುವಾಗ ಅವುಗಳನ್ನು ಗಮನಕ್ಕೆ ತೆಗೆದುಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ, ಎಂಬುದನ್ನು ಈ ಸಂಶೋಧನಾ ಪ್ರಬಂಧದ ಮಾಧ್ಯಮದಿಂದ ರೇಖಾಂಕಿತ ಮಾಡಲಾಯಿತು.(ಒತ್ತು ನೀಡಲಾಯಿತು) ಉದ್ಯೋಗ ಮತ್ತು ಉಪಭೋಗಿಸುವವ ಈ ಎರಡೂ ಘಟಕಗಳ ಕುರಿತು ತಿಳುವಳಿಕೆ ಇರುವುದು ಆವಶ್ಯಕವಾಗಿದೆ; ಏಕೆಂದರೆ ಸತತವಾಗಿ ನಕಾರಾತ್ಮಕ ಸ್ಪಂದನಗಳ ಸಂಪರ್ಕದಲ್ಲಿದ್ದರೆ ಅದರ ವ್ಯಕ್ತಿಯ ಮೇಲೆ ಕೆಟ್ಟ ಪರಿಣಾಮವಾಗುತ್ತದೆ. ಪರಿಣಾಮಸ್ವರೂಪ ಸಮಾಜದ ಹಾನಿ, ಹಾಗೆಯೇ ವಾತಾವರಣದಲ್ಲಿ ಆಧ್ಯಾತ್ಮಿಕ ಪ್ರದೂಷಣೆಯಾಗುತ್ತದೆ. ಇದನ್ನು ತಡೆಗಟ್ಟಲು ಪ್ರತಿನಿತ್ಯ ಸಾಧನೆಯನ್ನು ಮಾಡುವುದೇ ಉಪಾಯವಾಗಿದೆ, ಎಂದು ಸಹ ಶ್ರೀ. ಕ್ಲಾರ್ಕ ಇವರು ಕೊನೆಗೆ ಹೇಳಿದರು.
ತಮ್ಮ ಸವಿನಯ
ಶ್ರೀ. ರೂಪೇಶ ರೇಡಕರ
ಸಂಶೋಧನೆ ವಿಭಾಗ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
(ಸಂಪರ್ಕ : 95615 74972)