ಸಾಮಾನ್ಯವಾಗಿ ಜನರಿಗೆ ಕರೋನದ ಬಗ್ಗೆ
ದೃಶ್ಯ ಮಾದ್ಯಮಗಳಲ್ಲಿ ನೋಡಿದಂಥ
ದೃಶ್ಯಗಳು ಮನಸ್ಸಿನಲ್ಲಿ
ಭÀಯವನ್ನುಂಟುಮಾಡುತ್ತಿವೆ.
ರೋಗಕ್ಕಿಂತ ರೋಗದ ಹೆಸರು
ಕೇಳಿದರೇ ಸಾಕು ಜನರು ಭಯ
ಭೀತರಾಗುತ್ತಾರೆ. ಅವರಿಗೆ ವೈಜ್ಞಾನಿಕ
ಜ್ಞಾನ ತುಂಬಿ,
ದೈರ್ಯವಂತರನ್ನಾಗಿಸಬೇಕು. ದೃಶ್ಯ
ಮಾಧ್ಯಮಗಳಲ್ಲಿ ಬರುವ ವೈದ್ಯರ
ಸಂದರ್ಶನಗಳು, ಜನರನ್ನ ಹೆಚ್ಚು
ಮಾನಸಿಕವಾಗಿ ಗಟ್ಟಿ ಮಾಡುತ್ತಿವೆ. ಅಂತಹ
ಕಾರ್ಯಕ್ರಮವನ್ನು ಜನರು ಹೆಚ್ಚು
ವೀಕ್ಷಿಸುವಂತೆ ಮಾಡಬೇಕಾಗಿದೆ ಎಂದು
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ.
ಎಚ್. ಕೆ. ಎಸ್. ಸ್ವಾಮಿ ನುಡಿದರು.
ಅವರು ನಗರದ ತರಳಬಾಳು ನಗರದ
ಒಂದನೇ ಮುಖ್ಯರಸ್ತೆಯಲ್ಲಿ ಕರ್ನಾಟಕ ಜ್ಞಾನ
ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮ
ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ
“ಕರೋನ ಬಗ್ಗೆ ಭಯ ಬೇಡ” ಬಗ್ಗೆ
ಜನಜಾಗೃತಿ ಕಾರ್ಯಕ್ರಮದಲ್ಲಿ
ಮಾತನಾಡಿದರು.
ಕರೋನ ಬಂದಿದೇ ಎಂದ ತಕ್ಷಣ ಜನರು
ತಮ್ಮ ಕುಟುಂಬದ ಬಗ್ಗೆ, ತಮ್ಮ
ಪ್ರೀತಿಪಾತ್ರರ ಬಗ್ಗೆ, ಮಕ್ಕಳ ಬಗ್ಗೆ, ಆಸ್ತಿ
ಅಡವುಗಳ ಬಗ್ಗೆ,
ಯೋಚಿಸಲಾರಂಬಿಸುತ್ತಾರೆ. ಎಲ್ಲಿ
ಎಲ್ಲವನ್ನೂ ಕಳೆದುಕೊಳ್ಳುತ್ತೇವೋ
ಎಂಬ ಭಯ ಹುಟ್ಟಿಕೊಳ್ಳುತ್ತದೆ.
ಆಸ್ಪತ್ರೆಗಳಿಗೆ ಹೋದಾಗ ಯಾವ ರೀತಿ
ಔಷಧಿಗಳು ದೊರೆÀಯುತ್ತವೆ,
ನಮ್ಮನ್ನು ಚೆನ್ನಾಗಿ
ನೋಡಿಕೊಳ್ಳುತ್ತಾರೋ, ಇಲ್ಲೋವೋ,
ವೈದ್ಯರು ಸಿಗುತ್ತಾರೋ ಇಲ್ಲವೋ,
ಔಷಧಿಗಳು ವೆಚ್ಛ, ಆಮ್ಲಜನಕದ
ಚಿಂತೆ, ಈಗೇ ನಾನಾ ತರಹದ
ಯೋಚನೆಗಳಿಂದ ರೋಗಿ ಮತ್ತು
ಅವರ ಕುಟುಂಬ ನಿತ್ರಾಣಗೊಳ್ಳುತ್ತಿದೆ.
ಅವರಿಗೆ ದೈರ್ಯ ತುಂಬುವ
ಕೆಲಸವಾಗಬೇಕು ಎಂದರು.
ಈಗ ಲಾಕ್ ಡೌನ್
ತೆರವುಗೊಳಿಸುತ್ತಿರುವುದರಿಂದ,
ಜನರು ತುಂಬ ಜನ ಬೇಜವಾಬ್ದಾರಿತನ
ನಡೆದುಕೊಂಡು, ಮಾಸ್ಕ್‍ಗಳನ್ನು
ಬಿಸಾಕಿ, ಗುಂಪು ಸೇರಿ, ಮದುವೆಗಳನ್ನು
ಮಾಡಿ, ನಗರಗಳ ಕಡೆ ಮರು ವಲಸೆ
ಮಾಡಿ, ಕರೋನ ಮತ್ತೆ ನಮ್ಮ ಮೇಲೆ
ಆಕ್ರಮಣ ಮಾಡುವಂತೆ
ಮಾಡುತ್ತಿದ್ದಾರೆ. ಅದಕ್ಕಾಗಿ ನಾವು
ಜನರನ್ನ ಅವಿರತವಾಗಿ
ಜಾಗೃತಗೊಳಿಸುತ್ತಿರಬೇಕು. 3 ನೇ
ಅಲೆ ಬರದಂತೆ ನಾವು ತಡೆಯಲು
ಪ್ರÀಯತ್ನಿಸಬೇಕಾಗಿದೆ. ಆದಷ್ಟು ನಾವು
ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು,
ಸ್ಯಾನಿಟೈಸರ್ ಬಳಸುವುದನ್ನ
ವರ್ಷಪೂರ್ತಿ ಅನುಸರಿಸಲೇಬೇಕು. 5
ವರ್ಷದ ಮಕ್ಕಳಿಗೆ ಮಾಸ್ಕ್ ಧರಿಸುವುದು
ಕಷ್ಟಕರ. ಹಾಗಾಗಿ ನಾವು ಮಕ್ಕಳನ್ನು
ಬಹಳ ಎಚ್ಚರಿಕೆಯಿಂದ, ಸಾಮಾಜಿಕ
ಅಂತರದಲ್ಲಿಟ್ಟು ಬೆಳೆಸಬೇಕಾಗಿದೆ,
ಶಾಲೆಗಳು ಪ್ರಾರಂಭವಾದಾಗ ಸಾಮಾಜಿಕ
ಅಂತರವಿಟ್ಟುಕೊಂಡು, ಮಕ್ಕಳನ್ನ
ಕಾಪಾಡಿಕೊಳ್ಳಬೇಕಾಗಿದೆ ಎಂದರು.
ಮಕ್ಕಳು ಭಯ ಬೇಡ, ಎಚ್ಚರಿಕೆ
ಇರಲಿ ಎಂಬ ಮುಖವಾಡಗಳನ್ನು ಧರಿಸಿ,
ಜನರಿಗೆ ಭಯ ಬೇಡ, ಅಂತರವಿರಲಿ,
ಮಾಸ್ಕ್ ಧರಿಸಿ ಎಂಬ ಸಂದೇಶವನ್ನು
ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ
ರೀತಿಯ ಮುಖವಾಡಗಳನ್ನು,
ಭಿತ್ತಿಪತ್ರ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ
ಹೆಚ್.ಎಸ್.ರಚನ ಮತ್ತು ಹೆಚ್.ಎಸ್. ಪ್ರೇರಣ
ಕರೋನ ಬಗ್ಗೆ ಗೀತೆಗಳನ್ನ ಹಾಡಿದರು. ಗೀತಾ,
ಸುರಕ್ಷಾ, ಅಂಶುಲ್, ಶಶಿ, ರಕ್ಷಿತ ಹಾಜರಿದ್ದರು.