ವಿಭಾಗೀಯ ಡಾಕ್ ಅದಾಲತ್‍ನ್ನು ಜೂ.30 ರಂದು ಮಧ್ಯಾಹ್ನ
4 ಘಂಟೆಗೆ ಚಿತ್ರದುರ್ಗ ಅಂಚೆ ಅಧೀಕ್ಷಕರ ಕಚೇರಿ
ಕೋಟೆ ರಸ್ತೆ ಫಿಲ್ಟರ್ ಹೌಸ್ ಹತ್ತಿರ ಕಾಮನ ಬಾವಿ ಬಡಾವಣೆ ಇಲ್ಲಿ
ನಡೆಸಲಾಗುವುದು.
ಸಾರ್ವಜನಿಕರು ಮತ್ತು ಅಂಚೆ ಗ್ರಾಹಕರು ಅಂಚೆ
ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ಮತ್ತು
ಸಲಹೆಗಳನ್ನು ಜೂ.29 ರಂದು ಅಥವಾ ಅದಕ್ಕಿಂತ ಮುಂಚಿತವಾಗಿ
ಅಂಚೆ ಅಧೀಕ್ಷಕರ ಕಚೇರಿ ಇವರಿಗೆ ಮುಂದಿನ ಕ್ರಮಕ್ಕಾಗಿ
ತಲುಪುವಂತೆ ಕಳುಹಿಸಬೇಕು ಎಂದು ಚಿತ್ರದುರ್ಗ ಅಂಚೆ
ಅಧೀಕ್ಷಕ ಓ.ವಿರುಪಾಕ್ಷಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.