ವಿಶ್ವದಲ್ಲಿ ಪ್ರತಿ ವರ್ಷ ಜೂನ್ 25 ರಂದು ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು 1989 ರಿಂದಲೂ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಹಲವಾರು ವ್ಯಕ್ತಿಗಳು, ಸಮುದಾಯಗಳು ಮತ್ತು ಪ್ರಪಂಚದಾದ್ಯಂತ ವಿವಿಧ ಸಂಸ್ಥೆಗಳು, ಈ ಜಾಗತಿಕ ಆಚರಣೆಯನ್ನು ಬೆಂಬಲಿಸಿ ಮಾದಕವಸ್ತುಗಳಿಂದ ಸಮಾಜಕ್ಕೆ ಆಗುವ ಪ್ರಮುಖ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಪ್ರಮುಖ ಗುರಿಯಾಗಿದೆ.
ವಿಶ್ವವ್ಯಾಪಿ ಮಾದಕ ವ್ಯಸನವನ್ನು ತಡೆಯುವ ಗುರಿಯೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದ್ದು, ಮಾದಕ ವಸ್ತುಗಳನ್ನು ಬಳಸುವುದರಿಂದಾಗುವ ಪರಿಣಾಮಗಳ ಕುರಿತಂತೆ ಎಲ್ಲಾ ದೇಶಗಳಲ್ಲೂ ಅನೇಕ ಕಾರ್ಯಕ್ರಮಗಳು, ಉಪನ್ಯಾಸಗಳು, ವಿಚಾರ ಸಂಕಿರಣ ಏರ್ಪಡಿಸುವ ಮೂಲಕ ಮಾಹಿತಿ ನೀಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ “ಮಾದಕ ವಸ್ತುಗಳ ಬಗ್ಗೆ ಸತ್ಯ ಸಂಗತಿ ಹಂಚಿಕೊಳ್ಳಿ-ಜೀವ ಉಳಿಸಿ” ಎಂಬ ಘೋಷವಾಕ್ಯದಡಿ ದಿನಾಚರಣೆ ಆಚರಿಸಲಾಗುತ್ತಿದೆ.
ನಿಜ ಜೀವನದಲ್ಲಿ ನಡೆದಿರುವ ನೈಜ ಘಟನೆಗಳ ಉದಾಹಣೆಗಳನ್ನು ಬಿತ್ತರಿಸುವ ಮೂಲಕ ಮಾದಕ ವಸ್ತುಗಳನ್ನು ತ್ಯಜಿಸುವಂತೆ (moಣivಚಿಣioಟಿ) ‘ಜಾಗತೀಕ ಉತ್ತೇಜನ’ವಾಗುವಂತೆ ಜನತೆಗೆ ಸಹಕಾರ ನೀಡಲಾಗುತ್ತದೆ. ಪ್ರಪಂಚದಾದ್ಯಂತ ಜನರಿಗೆ ಈ ವಿಷಯವಾಗಿ ಅರ್ಥೈಸಿ ಅವರ ಸಹಾಯದಿಂದ ಮಾದಕ ವಸ್ತುಗಳ ಬಳಕೆ ನಿಯಂತ್ರಣ ಸಾಧಿಸುವುದು ಈ ಕಾರ್ಯಕ್ರಮದ ನಿಲುವಾಗಿದೆ.
ವ್ಯಸನ (ಚಿಜಜiಛಿಣioಟಿ): ವ್ಯಸನ ಎನ್ನುವುದು ಒಂದು ಸಂಕೀರ್ಣವಾದ ಸಮಸ್ಯೆ. ತಾತ್ಕಾಲಿಕ ಆನಂದ ನೀಡುವ ಮಾದಕ ದ್ರವ್ಯಗಳ (ಮದ್ಯ, ಗಾಂಜ, ಸಿಗರೇಟ್ ಹಾಗೂ ಬಹುತರದ ಡ್ರಗ್ ) ಅವಲಂಬನೆಗೆ ಒಳಗಾಗುವುದನ್ನು ವ್ಯಸನ ಎನ್ನಬಹುದು. ಇದು ದೈಹಿಕ, ಮಾನಸಿಕ, ಸಾಮಜಿಕ ಹಾಗೂ ಆರ್ಥಿಕ ಕೌಟಂಬಿಕ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ.
ವ್ಯಸನವು ಆಯ್ಕೆಯೇ?: ಕುತೂಹಲ, ಸ್ನೇಹಿತರ ಒತ್ತಡ, ಗೆಳೆಯರ ಗುಂಪಿನಲ್ಲಿ ಒಂದಾಗಬೇಕೆಂಬ ಭಾವನೆ, ಮನೆಯ ವಾತಾವರಣ, ಮನೆಯವರ ವಿರುದ್ಧ ಸಿಡಿದೇಳುವ ಅಥವಾ ತಿರಿಗು ಬೀಳುವ ಒಂದು ಕೃತ್ಯವೆಂಬ ಭಾವಿಸಿ, ಹೀಗೆ ಅನೇಕ ಕಾರಣಗಳಿಗಾಗಿ ಜನರು ಮಾದಕ ವಸ್ತುಗಳ ಸೇವನೆ ಆರಂಬಿಸುತ್ತಾರೆ. ವಾಸ್ತವವೆಂದರೆ ವ್ಯಸನಿಗಳಾಗಲು ವಂಶವಾಹಿ ಮತ್ತು ಸುತ್ತಮುತ್ತಲಿನ ವಾತಾವರಣ ಹೆಚ್ಚಿನ ಕಾರಣವಾಗಿರಬಹುದು.
ಭಾರತದಲ್ಲಿ ಮಾದಕ ದ್ರವ್ಯಗಳನ್ನು ಮೂರು ವಿಭಾಗಗಳಲ್ಲಿ ವರ್ಗೀಕರಿಸಬಹುದು
 ಕಾನೂನು ಬದ್ಧ ಮಾದಕವಸ್ತುಗಳು – ಮದ್ಯ ಮತ್ತು ತಂಬಾಕು /ಸಿಗರೇಟ್
 ಅಕ್ರಮ ಮಾದಕ ವಸ್ತುಗಳು ಮತ್ತು ವಿನೋದ ಉಂಟುಮಾಡುವ ಡ್ರಗ್ಸ್
 ಅಂಗಡಿಗಳಲ್ಲಿ ದೊರೆಯುವ ಅಥವಾ ವೈದ್ಯರು ಸೂಚಿಸಿದ ಔಷಧಗಳು
ಮಾದಕ ದ್ರವ್ಯ ವ್ಯಸನ (ಡ್ರಗ್ ಅಡಿಕ್ಷನ್): ಧೂಮಪಾನ, ಗಾಂಜಾ ಮುಂತಾದವುಗಳನ್ನು ಸೇದುವುದು, ಇಂಜೆಕ್ಷನ್ ಚುಚ್ಚಿಕೊಳ್ಳುವುದು, ಜಗಿಯುವುದು ಮತ್ತು ಕುಡಿಯುವುದು ಮುಂತಾಗಿ ಅನೇಕ ವಿಧದಲ್ಲಿ ಮಾದಕ ದ್ರವ್ಯಗಳನ್ನು ಬಳಸಲಾಗುತ್ತದೆ.
ಇದನ್ನು ಸೇವಿಸಿದರೆ ಮಾತ್ರ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಈ ವ್ಯಸನಕ್ಕೆ ದಾಸರಾದವರು ಭಾವಿಸಿರುತ್ತಾರೆ. ಅದರ ಹೊರತಾಗಿ ಬದುಕಲು ಸಾಧ್ಯವೇ ಇಲ್ಲ ಎಂಬಷ್ಟು ಮಟ್ಟಿಗೆ ಈ ಚಟಕ್ಕೆ ಅವಲಂಬಿತರಾಗುತ್ತಾರೆ.
ಮಾದಕ –ವ್ಯಸನವು ಗಂಭೀರವಾದ ಭಾವನಾತ್ಮಕ , ದೈಹಿಕ ಮತ್ತು ಸಾಮಾಜಿಕ ಸಂಬಂಧಗಳ ಸಮಸ್ಯೆಗಳಿಗೆ ಕಾರಣವಾಗಬಹುದು.
ಒತ್ತಾಯಕ್ಕೋ, ಶೈಕ್ಷಣಿಕ ಅಥವಾ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಒಲವಿನಿಂದಲೋ ಅಥವಾ ಅವರಲ್ಲಿನ ಒತ್ತಡ ಹಾಗೂ ಸಮಸ್ಯೆಗಳನ್ನು ಮರೆಯಲೆಂದೋ ಮಾದಕ – ದ್ರವ್ಯಗಳನ್ನು ಉಪಯೋಗಸಲು ಪ್ರಾರಂಭಿಸುತ್ತಾರೆ. ಕ್ರಮೇಣ ಡ್ರಗ್ಸ್ ಬಳಕೆಯಿಂದ ಮಿದುಳಿನಲ್ಲಿ ಬದಲಾವಣೆ ಉಂಟಾಗಿ ವ್ಯಕ್ತಿಗಳು ಮಾದಕ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಸುವಂತೆ ಮಾಡುತ್ತದೆ. ಅಂತವರು ಅದರ ಸೇವೆನೆಯನ್ನು ನಿಯಂತ್ರಣ ಮಾಡಲಾಗದೆ ಹೋಗುತ್ತಾರೆ. ವ್ಯಕ್ತಿಗಳು ಅದರ ಮನೋಸಾಮಥ್ರ್ಯ ಕಳೆದುಕೊಳ್ಳುತ್ತಾರೆ. ಈ ಹವ್ಯಾಸದಿಂದ ಹೊರಬರಬೇಕೆಂದು ನಿಜವಾಗಿ ಬಯಸಿದರೂ ಸಾಧ್ಯವಾಗದೇ, ಮತ್ತೆ ಮತ್ತೆ ಅದರೆಡೆಗೆ ಆಕರ್ಷಿತರಾಗುತ್ತಾರೆ.
ದೀರ್ಘಕಾಲದ ಡ್ರಗ್ಸ್ ಸೇವನೆಯಿಂದ ಮಿದುಳಿನ ಕ್ರಿಯೆಗಳಾದ ಕಲಿಕೆ, ತೀರ್ಪು, ನಿರ್ಧಾರ , ವರ್ತನೆ ನಿಯಂತ್ರಣ ಮುಂತಾದವುಗಳ ನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆ ಮತ್ತು ಬೇರೆ ರೀತಿಯ ಮಾನಸಿಕ ಅಸ್ವಸ್ಥತೆಗಳಿಗೆ ಒಳಗಾಗಬಹುದು.
ಹವ್ಯಾಸವು ವ್ಯಸನಕ್ಕೆ ತಿರುಗಿರುವುದನ್ನು ಹೀಗೆ ಗುರುತಿಸಿ:
 ನೀವು ಮೊದಲಿಗಿಂತಲೂ ಹೆಚ್ಚು ಮಾದಕ ವಸ್ತುಗಳನ್ನು ಬಳಸುತ್ತೀದ್ದೀರಾ ಎನ್ನುವುದನ್ನು ಗಮನಿಸಿ.
 ಮಾದಕ ದ್ರವ್ಯ ಸೇವಿಸದೆ ದಿನವನ್ನು ಕಳೆಯುವುದು ಸಾಧ್ಯವೇ ಇಲ್ಲ ಎಂಬ ಕಲ್ಪನೆ ನಿಮ್ಮಲ್ಲಿ ಉಂಟಾಗುವುದು.
 ನೀವು ಮುಂದಿನ ಅಥವಾ ಹೆಚ್ಚಿನ ಪ್ರಮಾಣದ ಮಾದಕ ವಸ್ತುಗಳನ್ನು ಸೇವಿಸುವುದಕ್ಕೆ ನೆಪ ಹುಡುಕುತ್ತೀರಾ ಎಂದರೆ
 ನಿಮ್ಮ ದಿನನಿತ್ಯದ ಕೆಲಸಗಳನ್ನು ಮಾಡುವುದಕ್ಕೆ ಮಾದಕ ವಸ್ತು ಸಹಾಯ ಮಾಡುತ್ತದೆ ಹಾಗೂ ಹೆಚ್ಚು ಆನಂದದಾಯಕವಾಗುತ್ತದೆ ಎಂದು ಅನಿಸಿದರೆ.
 ನಿಮ್ಮ ಕುಟುಂಬ , ಸ್ನೇಹಿತರು ಅಥವಾ ಮನೆ ಹಾಗೂ ಹೊರಗಿನ ಕೆಲಸಗಳ ಜವಾಬ್ದಾರಿಯು ಕುರಿತು ಸರಿಯಾಗಿ ಗಮನ ನೀಡಲು ಸಾಧ್ಯವಾಗುವುದಿಲ್ಲ.
 ನಿಮ್ಮ ಡ್ರಗ್ –ಚಟವನ್ನು ಇತರರಿಂದ ಮರೆಮಾಚಲು ಬಯಸುತ್ತೀರಿ. ನಿಮಗೆ ಈ ಹವ್ಯಾಸ ಇರುವುದನ್ನು ಹೇಳಲು ನಿರಾಕರಿಸುತ್ತೀರಿ ಅಥವಾ ನೀವು ತೆಗೆದುಕೊಳ್ಳುವುದಕ್ಕಿಂತಲೂ ಕಡಿಮೆ ಪ್ರಮಾಣವನ್ನು ಹೇಳುತ್ತೀರಿ.
 ನಿಮ್ಮ ಹವ್ಯಾಸದ ಕುರಿತಾಗಿ ತಪ್ಪಿತಸ್ಥಭಾವನೆ ಅಥವಾ ನಾಚಿಕೆ ಉಂಟಾಗುತ್ತದೆ ಹಾಗೂ ಕೆಲವು ವೇಳೆ ಇದನ್ನು ಬಿಟ್ಟುಬಿಡಲು ಯೋಚಿಸುತ್ತೀರಿ. ಆದರೆ ನಿರ್ಧಾರವನ್ನು ಮುಂದೂಡುತ್ತಲೆ ಇರುತ್ತೀರಿ.
ಮದ್ಯಪಾನ ದುರಾಚಾರ (ದುರ್ಬಳಕೆ): (ಆಲ್ಕೊಹಾಲ್ ಅಬ್ಯೂಸ್) : ಯಾವ ವ್ಯಕ್ತಿಗೆ ಕುಡಿತವನ್ನು ಒಮ್ಮೆ ಆರಂಭಿಸಿದರೆ ಮತ್ತೆ ನಿಲ್ಲಿಸಲು ಆಗುವುದಿಲ್ಲೋ ಅವರನ್ನು ಕುಡಿತದ ಚಟದಿಂದ ನರಳುತ್ತಿರುವವರು ಎಂದು ಹೇಳಲಾಗುತ್ತದೆ. ಭಾರತದಲ್ಲಿ 30% ಪುರುಷ ಮತ್ತು 5% ಮಹಿಳೆಯರು ನಿರಂತರವಾಗಿ ಮದ್ಯಪಾನ ಮಾಡುತ್ತಾರೆಂದು ಅಂದಾಜಿಸಲಾಗಿದೆ.
ಅಧ್ಯಯನವೊಂದರ ಪ್ರಕಾರ 1980 ರ ದಶಕದಲ್ಲಿ ಮೊದಲ ಬಾರಿಗೆ ಕುಡಿತ ಪ್ರಾರಂಭಿಸುವವರ ವಯಸ್ಸು ಸರಾಸರಿ 28 ವರ್ಷ ಆಗಿತ್ತು. ಈಗ ಇದು 17 ವರ್ಷಕ್ಕೆ ಬಂದಿಳಿದಿದೆ. ಎಲ್ಲಾ ಮದ್ಯಪಾನೀಯಗಳು ಈಥೈಲ್ ಆಲ್ಕೊಹಾಲಿನ ಗುಣ ಹೊಂದಿದ್ದು, ಅವುಗಳಲ್ಲಿರುವ ಮೂಡ್ – ಬದಲಾಯಿಸುವ ಅಂಶವು ದೇಹದ ಮೇಲೆ ಹಲವು ರೀತಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿಯೊಂದು ಮದ್ಯಪಾನೀಯವರಲ್ಲಿ ಈಥೈಲ್ ಆಲ್ಕೊಹಾಲ್ ಪ್ರಮಾಣ ಮಾತ್ರ ಬೇರೆ-ಬೇರೆಯಾಗಿರುತ್ತದೆ.
ಮದ್ಯ- ವುಸನದ ಕುರಿತಾದ ಕೆಲವು ವಾಸ್ತವಾಂಶಗಳು:
 ಮದ್ಯ ಸೇವಿಸುವ ಪ್ರತಿ ಇಬ್ಬರಲ್ಲಿ ಒಬ್ಬನು ತೀವ್ರವಾಗಿ ಈ ವ್ಯಸನಕ್ಕೆ ಬಲಿಯಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (Wಊಔ) ಅಂದಾಜಿಸಿದೆ.
 ಮದ್ಯ ಸೇವಿಸುವ ವ್ಯಕ್ತಿಗಳು ಮದ್ಯ ಸೇವಿಸದ ವ್ಯಕ್ತಿಗಳಿಗಿಂತ ಮೂರು ಪಟ್ಟು ಹೆಚ್ಚು ಗಂಭೀರ ಅನಾರೋಗ್ಯಕ್ಕೊಳಗಾಗುವ ಸಾಧ್ಯತೆಯಿದೆ.
 ಭಾರತದ ಆಸ್ಪತ್ರೆಗಳಲ್ಲಿ ದಾಖಲಾಗುವ ಪ್ರತಿ ಐದು ರೋಗಿಗಳಲ್ಲಿ ಒಬ್ಬರು ನೇರವಾಗಿ ಮದ್ಯವದ್ಯಸನಕ್ಕೆ ಸಂಬಂಧಿಸಿದವರಾಗಿರುತ್ತಾರೆ.
 ಮದ್ಯ ಸೇವನೆ ಮಾಡುವವರು ಹಿಂಸೆಗಳಲ್ಲಿ ತೊಡಗುವ ಸಾಧ್ಯತೆ ಹೆಚ್ಚು ಅದರಲ್ಲೂ ಅವರ ಸಂಗಾತಿಗಳೊಂದಿಗೆ ಈ ಸಾಧ್ಯತೆ ಅಧಿಕ. ಈ ರೀತಿಯ ಹಿಂಸೆಯು ದೈಹಿಕವಾಗಿ, ಮಾನಸಿಕವಾಗಿ, ಲೈಂಗಿಕವಾಗಿ ಅಥವಾ ಆರ್ಥಿಕವಾಗಿಯೂ ಕೂಡ ನಡೆಯಬಹುದು.
 ಮದ್ಯಪಾನ ವ್ಯಸನಕ್ಕೆ ದಾಸರಾದವರು ಆತ್ಮಹತ್ಯೆ ಪ್ರಯತ್ನ ಮಾಡಬಹುದು ಅಥವಾ ಅಪಾಯಕಾರಿಯಾದ ಲೈಂಗಿಕ ವರ್ತನೆ ತೋರಬಹುದು. ಅಥವಾ ಹೆಚ್‍ಐವಿ ಸೋಂಕು, ಕ್ಷಯ, ಅನ್ನನಾಳದ ಕ್ಯಾನ್ಸರ್ (ಈooಜ ಠಿiಠಿe ಛಿಚಿಟಿಛಿeಡಿ), ಲಿವರ್ ಸಮಸ್ಯೆ ಮತ್ತು ಇನ್ನಿತರ ಕಾಯಿಲೆಗಳು, ಕರುಳಿನ ಹುಣ್ಣು ಉಂಟಾಗಬಹುದು.
ಮದ್ಯವು ಮಾನವನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ : ಲಿವರ್ ಸಮಸ್ಯೆ, ಮಿದುಳಿನ ಜೀವಕೋಶಗಳ ಕುಗ್ಗುವಿಕೆ, ಖಿನ್ನತೆ, ಕಿರಿಕಿರಿ ಅಥವಾ ಮನಸ್ಥಿತಿ ಬದಲಾಣೆ, ಅಧಿಕ ರಕ್ತದೊತ್ತಡ, ಲೈಂಗಿಕ ದೌರ್ಬಲ್ಯ, ಭ್ರೂಣಕ್ಕೆ ತೊಂದರೆ, ಕ್ಯಾನ್ಸರ್‍ನಿಂದಗಬಹುದಾದ ಅಪಾಯದ ಹೆಚ್ಚಳ, ಹೃದಯ ಸ್ನಾಯುಗಳ ದೌರ್ಬಲ್ಯ ಮತ್ತು ಪಾಶ್ರ್ಚವಾಯುವಿನ ತೊಂದರೆ, ಅಜೀರ್ಣ ತೊಂದರೆಗಳು, ಅಕಾಲಿಕ ಮುಪ್ಪು ಉಂಟಾಗುತ್ತದೆ.
ವ್ಯಸನವನ್ನು ಸೂಚಿಸುವ ಇನ್ನಿತರ ಕೆಲವು ಸೂಚಕಗಳು : ವ್ಯಕ್ತಿಯು ಮಾದಕ ವಸ್ತುವಿನ ಬಗ್ಗೆ ಯಾವಾಗಲು ಯೋಚಿಸುತ್ತಿದ್ದರೆ-(ನಾನು ಮತ್ತೆ ಯಾವಾಗ ಕುಡಿಯುತ್ತೇನೆ /ಧೂಮಪಾನ ಮಾಡುತ್ತೇನೆ ,ಇದರ ಬದಲಿಗೆ ಏನನ್ನು ತೆಗೆದುಕೊಳ್ಳಲಿ, ಅದನ್ನು ಎಲ್ಲಿಂದ ಪಡೆಯಲಿ? ಹೇಗೆ ಪಡೆಯಲಿ? ಇತ್ಯದಿ ಚಿಂತನೆಗಳು.) ವಿತ್‍ಡ್ರಾವಲ್ ಲಕ್ಷಣಗಳು (ತಿiಣhಜಡಿಚಿತಿಚಿಟ sಥಿmಠಿಣoms) – ವ್ಯಕ್ತಿಯು ಒಂದಷ್ಟು ದಿನ ಮಾದಕ ವಸ್ತುಗಳನ್ನು ಸೇವಿಸದೇ ಇದ್ದಾಗ ಅವರಲ್ಲಿ ನಡುಕು, ಕಿರಿಕಿರಿ, ತೀವ್ರ ಬಯಕೆ ಉಂಟಾಗಿ, ಮಾನಸಿಕ ಹಾಗೂ ಭಾವನಾತ್ಮಕ ಅಂಶಗಳ ಮೇಲೆ ಪರಿಣಾಮ ಬಿರುತ್ತದೆ. ನಿಯಂತ್ರಣದ ಕೊರತೆ–ಇಡೀ ದಿನ ಮಾದಕ ವಸ್ತುಗಳನ್ನು ತೆಗೆದುಕೊಳ್ಳದೆ ಇರಬೇಕೆಂದು ನಿರ್ಧರಿಸಿ, ಅದಕ್ಕೆ ಬದ್ದರಾಗದೆ ವಿಫಲರಾಗುವುದು. ಬಯಕೆ-ಮಾದಕ ವಸ್ತುಗಳನ್ನು ತೆಗೆದುಕೋಳ್ಳುವ ತೀವ್ರವಾದ ಬಯಕೆ. ನಿರಂತರ ಸೇವೆಯಿಂದ ತನಗೆ ಹಾಗೂ ಸುತ್ತ-ಮುತ್ತಲಿನವರಿಗೆ ತೊಂದರೆಯಾಗುವುದನ್ನು ತಿಳಿದಿದ್ದೂ ಅದನ್ನು ಮುಂದುವರಿಸುವುದು.
ಆಪ್ತ ಸಮಾಲೋಚನೆ (ಛಿouಟಿseಟಟiಟಿg) ಪಡೆದು ವ್ಯಸನದಿಂದ ಮುಕ್ತರಾಗಬಹುದು:
ಮದ್ಯ ಸೇವನೆಯಿಂದ ಹೊರಬರುವ ಮೊದಲ ಹೆಜ್ಜೆ ಎಂದರೆ ನಿಮಗೆ ತೊಂದರೆಯಿದೆ ಎನ್ನುವುದನ್ನು ಒಪ್ಪಿಕೊಳ್ಳುವುದು ಮತ್ತು ಸಹಾಯ ಪಡೆಯುವುದು. ವ್ಯವಸವು ಮಧುಮೇಹ ಅಥವಾ ಅಧಿಕರಕ್ತದೊತ್ತಡದಂತೆ ನಿರಂತರವಾಗಿ ಕಾಡುವ, ಮತ್ತೆ ಮತ್ತೆ ಮರುಕಳಿಸಬಹುದಾದ ಅಸ್ವಸ್ಥತೆ. ಚಿಕಿತ್ಸೆಯ ನಂತರ ವ್ಯಸನ ಮರುಕಳಿಸಿತು ಎಂದರೆ ಚಿಕಿತ್ಸೆ ವಿಫಲಾಯಿತೆಂದಲ್ಲ’ ಬದಲಿಗೆ ಆ ವ್ಯಕ್ತಿಗೆ ಮಾದಕ ವಸ್ತುವಿನ ವ್ಯಸನದಿಂದ ಹೊರಬರಲು ಹೆಚ್ಚಿನ ಸಹಾಯನ ಅಗತ್ಯವಿದೆ ಎಂದರ್ಥ.
ಮದ್ಯವ್ಯಸನದ ಚಿಕಿತ್ಸೆ ಗುರಿಗಳು: ರೋಗಿಯು ಮದ್ಯವನ್ನು ಬಳಸದಂತೆ ತಡೆಯುವುದು ಮತ್ತು ಮದ್ಯಮುಕ್ತವಾದ, ಅವರು ಇಚ್ಛಿಸಿದ ಹೊಸ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಸಹಾಯ ಮಾಡುವುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ /ಸಮುದಾಯ ಆರೋಗ್ಯ ಕೇಂದ್ರ/ತಾಲ್ಲೂಕು ಆಸ್ಪತ್ರೆ/ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ ಅಥವಾ ಆರೋಗ್ಯ ಸಹಾಯವಾಣಿ ‘104’ಗೆ ಕರೆ ಮಾಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಆರೋಯ ವಿಭಾಗದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *