ದಾವಣಗೆರೆಯ ಹೆಸರಾಂತ ಸಾಂಸ್ಕೃತಿಕ ಸಂಸ್ಥೆ ಚಿರಂತನ, ಯುನೈಟೆಡ್ ಕಿಂಗ್ ಡಮ್ ನಕನ್ನಡಿಗರು ಯುಕೆ ಹಾಗ ಬೆಂಗಳೂರಿನ ಎಸ್.ಎಸ್.ಬಿ. ಸೇವಾ ಫೌಂಡೇಷನ್ ಸಹಯೋಗದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆನ್ ಲೈನ್ ನಲ್ಲಿ ಆಯೋಜಿಸಲಾಗಿತ್ತು. ಭಾರತ ಹಾಗೂ ಯುನೈಟೆಡ್ ಕಿಂಗ್ ಡಮ್ ನ ನೂರಕ್ಕೂ ಹೆಚ್ಚು ಕುಟುಂಬಗಳು ಎರಡೂ ದೇಶಗಳ ಕಾಲಮಾನಗಳ ಅಂತರದ ನಡುವೆಯೂ ಯೋಗಾಭ್ಯಾಸವನ್ನು ಮಾಡುವುದರ ಮುಖಾಂತರ ಹೊಸ ದಾಖಲೆ ಬರೆದರು.
ಮುಖ್ಯ ಅತಿಥಿಗಳಾಗಿ ಬ್ರಿಟೀಷ್ ಡೆಪ್ಯೂಟಿ ಹೈ ಕಮೀಷನರ್ ಜರ್ಮಿ ಫಿಲ್ಮೋರ್ ಬೋರ್ಡ್ ಹಾಗೂ ಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರು ಮತ್ತು ಐಜಿಪಿ ವಿಫುಲ್ ಕುಮಾರ್ ಭಾಗವಹಿಸಿದ್ದರು.
ಯುಕೆ.ಯ ಕುಟುಂಬಗಳು ಅಂದು ಯೋಗ ಶಿಬಿರದಲ್ಲಿ ಪಾಲ್ಗೊಂಡರೆ ಭಾರತದ ಕುಟುಂಬಗಳಿಗೆ ಚಿರಂತನದ ಯೋಗ ಶಿಬಿರ ಮೊದಲ ದಿನವಾಗಿತ್ತು.
6 ದಿನಗಳ ಉಚಿತ ಯೋಗ ಶಿಬಿರವನ್ನು ಅಂತರರಾಷ್ಟ್ರೀಯ ಯೋಗ ಗುರು ಡಾ. ಭಾಗೀರಥಿ ಕನ್ನಡತಿಯವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು. ತಮ್ಮ ವಿಶಿಷ್ಟವಾದ ಶೈಲಿ, ಸುಲಲಿತವಾಗಿ ಹರಿಯುವ ಯೋಗ ಹಾಗೂ ಮುಖಅಯವಾಗಿ ಆನ್ಲೈನ್ ನಲ್ಲೂ ಎದುರಿಗೆ ನಿಂತಂತೆ ಯೋಗ ಮಾಡಿಸುವುದು ಹಾಗೂ ಸ್ಪಷ್ಟವಾಗಿ ಸೂಚನೆಗಳನ್ನು ನೀಡುವುದು ಭಾಗೀರಥಿಯವರ ವಿಶೇಷತೆ.


ಜರ್ಮಿಪಿಲ್ಮೋರ್ ಬೆಡ್ಫೊರ್ಡ ಮಾತನಾಡಿ, ಕೋವಿಡ್-19 ಸಾಂಕ್ರಾಮಿಕ ವಿಶ್ವದ ಎಲ್ಲಾ ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದೆ. ನಮ್ಮ ದೈಹಿಕ, ಮಾನಸಿಕ ಆರೋಗ್ಯದ ಮೇಲೂ ಗಭೀರ ಪರಿಣಾಮವನ್ನೇ ಬೀರಿದೆ. ಉತ್ತಮ ಜೀವನಕ್ಕಾಗಿ ಯೋಗ ಅತ್ಯಗತ್ಯ. ಯುಕೆಯಲ್ಲಿ ಹೆಚ್ಚಿನ ಜನರು ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಹೆಚ್ಚಿನ ಜನರು ಯೋಗ ತರಬೇತಿಗಳಲ್ಲಿ ಭಾಗವಹಿಸುತ್ತಿದ್ದಾರೆ. 10 ಸಾವಿರ ಯೋಗ ಶಿಕ್ಷಕರು ತರಬೇತಿಯ್ನು ನೀಡುತ್ತಿದ್ದಾರೆ. ಇದು ಅತ್ಯುತ್ತಮ ಸಂಗತಿಯಾಗಿದ್ದು, ಆರೋಗ್ಯ¬ಕರ ಜೀವನಕ್ಕೆ ಉತ್ತಮ ಕೊಡುಗೆಯಾಗಿದೆ ಎಂದರು.
ವಿಪುಲ್ ಕುಮಾರ್ ಮಾತನಾಡಿ, ತುಂಬಾ ಕಷ್ಟದ ಸಮಯದಲ್ಲಿ ನಾವಿದ್ದೇವೆ. ಹೀಗಾಗಿ ಸುರಕ್ಷೆ ನಮ್ಮ ಮೊದಲ ಆದ್ಯತೆಯಾಗಬೇಕು. ಮನಸ್ಸನ್ನು ಶಾಂತವಾಗಿರಿಸುವುದು. ಅತ್ಯುತ್ತಮ ಪ್ರದರ್ಶನ ನೀಡುವುದು ಪ್ರತಿಯೊಬ್ಬರ ವೃತ್ತಿ ಬದುಕಿನಲ್ಲಿ ಅತ್ಯಂತ ಮುಖ್ಯ ವಿಚಾರವಾಗಿರುತ್ತದೆ. ಇದಕ್ಕಾಗಿ ತುಂಬಾ ಸಹಾಯ ಮಾಡುತ್ತದೆ ಎಂದ ಅವರು ಬದುಕಿನ ಅನುಭವಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.
ಬಳಿಕ ಯೋಗ ಗುರು ಡಾ. ಭಾಗೀರಥಿ ಕನ್ನಡತಿ ಅವರು ಸುಮಾರು ಒಂದು ಗಂಟೆ ಯೋಗ ತರಬೇತಿ ನೀಡಿದರು. ದೀಪಾ ರಾವ್ ಅವರ ಯೋಗದ ಮಹತ್ವವನ್ನು ವಿವರಿಸುತ್ತಾ ಕಾರ್ಯಕ್ರಮ ಆರಂಭಿಸಿ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದರು.
ಚಿರಂತನ ಅಕಾಡೆಮಿಯಿಂದ ಹೊಸ ಶಿಬಿರದ ಆರಂಭದ ಕುರಿತು ಸಂತಸ ವ್ಯಕ್ತಪಡಿಸಿರುವ ಕನ್ನಡಿಗರು ಯುಕೆ ಕಾರ್ಯಕಾರಿ ಸಮಿತಿಯ ಗಣಪತಿ ಭಟ್ ಅವರು ಬೆಂಗಳೂರಿನ ಡೆಪ್ಯೂಟಿ ಹೈ ಕಮೀಷನರ್ ಜರ್ಮಿ ಪಿಲ್ಮೋರ್ ಬೆಡ್ಫೊರ್ಡ್, ಯೋಗ ಗುರು ಡಾ. ಭಾಗೀರಥಿ ಕನ್ನಡತಿ ಅವರನ್ನು ಹಾಗೂ ಕನ್ನಡಿಗರು ಯುಕೆಯ ಕಾರ್ಯಕಾರಿ ಸಮಿತಿ ಸದಸ್ಯೆ ಪವಿತ್ರಾ ಅವರು ಐಜಿಪಿ ವಿಫುಲ್ ಕುಮಾರ್ ಅವರನ್ನು ಪರಿಚಯಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ರಾಜೀವ್ ಮೇತ್ರಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *