ಲೈಬ್ರರಿಗಳಿಗೆ ಕಡಿಮೆ ವಿದ್ಯುತ್ತಿನ ಬೆಳಕನ್ನು
ನೀಡಿ, ಮದ್ಯದಂಗಡಿಗಳಿಗೆ, ಬಾರ್ ಮತ್ತು
ರೆಸ್ಟೋರೆಂಟ್‍ಗಳಿಗೆ ಹೆಚ್ಚು ವಿದ್ಯುತ್ತಿನ
ಅಲಂಕಾರ ಮಾಡಿ ಜನರನ್ನು
ಸೆಳೆಯುತ್ತಿದ್ದೇವೆ. ಜನರು ದೈಹಿಕ
ಶ್ರಮವನ್ನು ಸಹ ಕಡಿಮೆ
ಮಾಡಿಕೊಳ್ಳುತ್ತಿದ್ದು, ಕ್ರೀಡೆಗಳಲ್ಲಿ, ಸಾಹಸ
ಯಾತ್ರೆಗಳನ್ನ, ನೃತ್ಯ, ನಡಿಗೆಯನ್ನು
ಮರೆಯುತ್ತಿದ್ದಾರೆ. ಇನ್ನೂ ಹದಿನೈದು
ವರ್ಷಗಳಾದರು ನಾವು ಶ್ರಮಪಟ್ಟು,
ಉತ್ತಮ ಸಮಾಜ ನಿರ್ಮಾಣ ಮಾಡಿ, ಮಕ್ಕಳನ್ನ
ಸತ್ಪ್ರಜೆಗಳನ್ನಾಗಿ ಮಾಡಬೇಕು ಎಂದು ಶ್ರೀ
ಎಚ್. ಕೆ. ವಿವೇಕಾನಂದರವರು ತಿಳಿಸಿದರು.
ಅವರು ರಾಜ್ಯಾದ್ಯಂತ 17 ಜಿಲ್ಲೆಗಳಲ್ಲಿ 7000 ಕ್ಕೂ
ಹೆಚ್ಚು ಕಿಲೋಮೀಟ್‍ರ್ ಜ್ಞಾನ ಭಿಕ್ಷಾ
ಪಾದಯಾತ್ರೆ ಮಾಡಿ ನೆಡೆದುಕೊಂಡು,
ಚಿತ್ರದುರ್ಗ ನಗರಕ್ಕೆ ಆಗಮಿಸಿದ ನಂತರ
ನಗರದ ತರಳಬಾಳು ನಗರದ ಒಂದನೇ
ಮುಖ್ಯರಸ್ತೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ
ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮ
ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ
“ಮಾದಕ ವಸ್ತುಗಳ ನಿಷೇದದ ಬಗ್ಗೆ”

ಸಾರ್ವಜನಿಕರಿಗೆ ಅರಿವು ಮೂಡಿಸುವ
ಕಾರ್ಯಕ್ರಮದಲ್ಲಿ ಮಾತನಾಡಿದರು.
ವೈದ್ಯಕೀಯ ರಂಗ ಹೆಚ್ಚು ವ್ಯವಹಾರಿಕವಾಗಿ
ಕೆಲಸ ಮಾಡುವಂತಾಗಿ,
ಮಾನವೀಯತೆಯನ್ನು ಮರೆಯುತ್ತಿದೆ, ಹಣ
ವಸೂಲಿ ಮುಖ್ಯ ಗುರಿಯಾಗಿಟ್ಟುಕೊಂಡು,
ಕೆಲವು ಆಸ್ಪತ್ರೆಗಳು ಕೆಲಸಮಾಡುತ್ತಿವೆ.
ಅವರನ್ನ ಬದಲಿಸಿ ಜನರ ಸೇವೆ ಮಾಡುವಂತಹ
ವೈದ್ಯರ ಸೈನ್ಯ ಸೃಷ್ಟಿಯಾಗಬೇಕಾಗಿದೆ. ಸತ್ಯ
ಮತ್ತು ಸುಳ್ಳಿನ ನಡುವೆ ಇರುವ ವ್ಯತ್ಯಾಸ
ಮತ್ತು ಶಕ್ತಿಯನ್ನ ಮಕ್ಕಳಿಗೆ ಅರಿವು
ಉಂಟುಮಾಡಬೇಕು. ಮಹಾತ್ಮ ಗಾಂಧಿಯವರ
ಚಿಂತನೆಗಳು, ಅಂಬೇಡ್ಕರ್‍ರವರ ಪುಸ್ತಕ
ಪ್ರೇಮ, ನಾವು ಜನರಿಗೆ ತೋರಿಸಿಕೊಡಬೇಕು.
ಅಭಿವೃದ್ಧಿ ಹೆಸರಿನಲ್ಲಿ ಮರ ಕಡಿಯುವುದು,
ಪ್ರಾಣಿ ಪಕ್ಷಿಗಳನ್ನು ನಾಶಮಾಡುವುದು,
ಪರಿಸರ ವಿರೋಧಿ ಚಟುವಟಿಕೆಗಳಿಂದ, ನಮ್ಮ
ಅನಾರೋಗ್ಯವು ಹೆಚ್ಚಾಗಿದೆ. ಸಿನಿಮಾ
ತಾರೆಯರು, ಕ್ರಿಕೆಟ್ ಆಟಗಾರರು, ದೃಶ್ಯ
ಮಾಧ್ಯಮಗಳಲ್ಲಿ ಜಾಹೀರಾತು
ಕೊಡಬೇಕಾದರೆ, ಜನರ ಆರೋಗ್ಯದ ಮೇಲೆ
ಏನು ಪರಿಣಾಮ ಬೀರುತ್ತದೆ ಎಂಬುದರ ಬಗೆಗೆ
ಗಮನವಿರಬೇಕು. ತಮ್ಮ ಹಣ ಸಂಪಾದನೆಗಾಗಿ
ಸಮಾಜದ ಸುಸ್ಥಿತಿಯನ್ನು, ಆರೋಗ್ಯವನ್ನು
ನಾಶ ಮಾಡಬಾರದು. ಸಮಾಜದಲ್ಲಿ
ಪತ್ರಕರ್ತರು, ಸ್ವಾಮೀಜಿಗಳು,
ರಾಜಕಾರಣಿಗಳು, ಉನ್ನತ ಮಟ್ಟದಲ್ಲಿರುವ
ಅಧಿಕಾರಿಗಳು, ರಾಷ್ಟ್ರಾಭಿಮಾನವನ್ನು,
ದೇಶಾಭಿಮಾನವನ್ನು, ಸದ್ಗುಣಗಳನ್ನು,

ಪ್ರತಿಷ್ಠಾಪಿಸಿಕೊಳ್ಳಬೇಕು. ಭ್ರಷ್ಟಾಚಾರದಿಂದ,
ಅನ್ಯಾಯದಿಂದ, ವಿಮುಖರಾಗಬೇಕು ಎಂದರು.
ಪ್ರತಿ ಗ್ರಾಮಗಳಲ್ಲೂ ಮದ್ಯಪಾನದ
ಅಂಗಡಿಗಳನ್ನ ತೆರೆದಿರುವುದರಿಂದ ಮಕ್ಕಳಿಗೆ
ಉತ್ತಮ ಪರಿಸರವಲ್ಲದಂತಾಗಿದೆ,
ಸ್ವಾತಂತ್ರ್ಯಕ್ಕಿಂತ ಮುಂಚೆ ಊರಾಚೆ ಇದ್ದಂಥ
ಮದ್ಯದಂಗಡಿಗಳನ್ನು ಸ್ವಾತಂತ್ರ್ಯದ
ನಂತರ ಈಗ ಊರಿನ ಮಧ್ಯೆ ತಂದಿಟ್ಟಿದ್ದೇವೆ
ಇದರಿಂದ ಮಕ್ಕಳಿಗೆ ಮದ್ಯಪಾನ, ತಂಬಾಕು
ಸೇವನೆ, ಮಾದಕ ವಸ್ತುಗಳಿಂದ ಆಗುವ
ದುಷ್ಪರಿಣಾಮಗಳನ್ನು ತಿಳಿಸಿಕೊಡಬೇಕು.
ವೈದ್ಯಕೀಯದಲ್ಲಿ ಸಾಕಷ್ಟು
ಬದಲಾವಣೆಗಳಾಗಿದ್ದರೂ ಸಹ
ಕಾಯಿಲೆಗಳನ್ನು ಕಡಿಮೆಯಾಗಲಿಲ,್ಲ ಹಿಂದೆ
ವೈದ್ಯಕೀಯ ವ್ಯವಸ್ಥೆ ಕಡಿಮೆ ಇದ್ದರೂ ಸಹ
ಜನರು ಹೆಚ್ಚು ಜೀವಿತಾವಧಿ ಹೊಂದಿರುತ್ತಿದ್ದರು,
ಈಗ ಜನಸಂಖ್ಯೆ ಆಧಾರದ ಮೇಲೆ ನಾವು
ಕಾರ್ಯಕ್ರಮಗಳ ಯಶಸ್ಸನ್ನ
ಕಂಡುಹಿಡಿಯಲು ಸಾಧ್ಯವಿಲ್ಲ, ಕಡಿಮೆ
ಜನರಿದ್ದರೂ ಸಹ ಉತ್ಕೃಷ್ಟವಾದ
ಚಿಂತನೆಗಳನ್ನ ಅಳವಡಿಸಿಕೊಂಡು,
ಇತರರನ್ನ ಬದಲಿಸಬಹುದು ಎಂದರು.
ಈಗ ಅಣ್ಣತಮ್ಮಂದಿರು, ಅಕ್ಕತಂಗಿಯರ
ಮಧ್ಯೆ, ಹಣ, ಆಸ್ತಿಯ ವ್ಯಾಮೋಹ ಹೆಚ್ಚಾಗಿ,
ಸಂಬಂಧಗಳ ಕೆಡುತ್ತಿವೆ, ಕೊಲೆಗಳು
ಹೆಚ್ಚಾಗುತ್ತಿವೆ, ಮಾನವೀಯ ಮೌಲ್ಯಗಳನ್ನು
ಪ್ರತಿಷ್ಠಾಪಿಸುವ ಕಾರ್ಯಗಳು
ವಿಜೃಂಭಿಸಬೇಕು. ಒಳ್ಳೆಯ ವಿಚಾರಗಳು,

ಒಳ್ಳೆಯ ಚಿಂತನೆಗಳನ್ನು,
ಹೆಮ್ಮರವನ್ನಾಗಿಸÀಬೇಕು. ಅಪರಾಧ
ಪ್ರವೃತ್ತಿಯನ್ನ, ಭ್ರಷ್ಟಾಚಾರವನ್ನ,
ಕೆಳಮಟ್ಟಕ್ಕೆ ಇಳಿಸಬೇಕು. ಮುಂದಿನ ಭವಿಷ್ಯ
ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಿದಾಗ
ಮಾತ್ರ, ದೇಶ ಸುಭದ್ರವಾಗಿರಲು ಸಾಧ್ಯ.
ಜನರು ಹುಟ್ಟನ್ನು, ಸಾವನ್ನು ಸಮಾನವಾಗಿ
ಸ್ವೀಕರಿಸಬೇಕು. ಸಾವಿಗೆ ಹೆದರುವ ಭಯ
ಹೆಚ್ಚಾಗುತ್ತಿರುವುದರಿಂದ, ವೈದ್ಯಕೀಯ
ಚಿಕಿತ್ಸೆ ವೆಚ್ಚಮಯವಾಗುತ್ತಿದೆ. ಕರೋನಾ
ನಿಗ್ರಹಕ್ಕೆ ವೈದ್ಯಕೀಯ ಸಲಹೆ ಜೊತೆಗೆ
ದೇಹವನ್ನು ಗಟ್ಟಿಗೊಳಿಸುವಂತಹ
ಕಾರ್ಯಕ್ರಮಗಳು ಹೆಚ್ಚಾಗಬೇಕು.
ಸುಖದ ಸುಪ್ಪತ್ತಿಗೆಯಲ್ಲಿ
ತೊಳಲಾಡುತ್ತಿರುವ ಜನರಿಗೆ ರೋಗ
ರುಜಿನಗಳು, ವೈರಸ್‍ಗಳು ಆಕ್ರಮಣ
ಮಾಡುತ್ತವೆ.
ಕಾರ್ಯಕ್ರಮದಲ್ಲಿ ಮಕ್ಕಳು ಮಾದಕ
ದ್ರವ್ಯಗಳಿಂದ ಆಗುವ ಅನಾಹುತಗಳ ಬಗ್ಗೆ
ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಿದರು ಹಾಗೂ
ಗಾಯನದ ಮುಖಾಂತರ ಗಾಂಧೀಜಿಯವರ
ಚಿಂತನೆಗಳನ್ನು, ಆಧ್ಯಾತ್ಮಿಕ
ಚಿಂತನೆಗಳನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಕೆಜೆವಿಎಸ್ ಜಿಲ್ಲಾಧ್ಯಕ್ಷರಾದ
ಡಾ. ಎಚ್. ಕೆ. ಎಸ್. ಸ್ವಾಮಿ, ಹಾಸ್ಯಸಾಹಿತಿ ಜಗನ್ನಾಥ್,
ಕೆಜೆವಿಎಸ್ ಉಪಾಧ್ಯಕ್ಷರಾದ ಜಯದೇವಮೂರ್ತಿ,
ನಂದಿ ಬೆಟ್ಟದ ತೋಟಗಾರಿಕೆ ಇಲಾಖೆಯ
ಗೋಪಲಯ್ಯ, ಆಕಾಶವಾಣಿ ಕಲಾವಿದರಾದ

ಗೋಂದಾಳಪ್ಪ, ವಿದ್ಯಾರ್ಥಿಗಳಾದ ಸ್ಫೂರ್ತಿ, ಕಾವ್ಯ,
ಗೀತ, ಸುರಕ್ಷಾ, ಜಾಹ್ನವಿ, ಕಿಶೋರ್,
ಹೆಚ್.ಎಸ್.ರಚನ, ಹೆಚ್.ಎಸ್. ಪ್ರೇರಣ, ವೇನಿಲಾ
ಹಾಜರಿದ್ದರು.

Leave a Reply

Your email address will not be published. Required fields are marked *