ಹೊನ್ನಾಳಿ ; ನೂರಾರು ಕೆರೆಗಳನ್ನು ನಿರ್ಮಾಣ ಮಾಡಿ ಹಾಗೂ ವ್ಯಾಪಾರ ವಹಿವಾಟಿಗೆಗೆ ಪೇಟೆಗಳನ್ನು ನಿರ್ಮಾಣ ಮಾಡಿ, ಅತ್ಯಂತ ಯೋಜನಾಬದ್ದÀವಾಗಿ ಬೃಹತ್ ಬೆಂಗಳೂರನ್ನು ನಿರ್ಮಿಸಿದ ಕೀರ್ತಿ ನಾಡ ಪ್ರಭು ಕೆಂಪೆಗೌಡರಿಗೆ ಸಲ್ಲುತ್ತದೆ ಎಂದು ಗ್ರೇಡ್ 2 ತಹಸೀಲ್ದಾರ್ ಸುರೇಶ್ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ ನಾಡಪ್ರಭು ಕೆಂಪೆಗೌಡರ 512 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಇಡೀ ವಿಶ್ವದಲ್ಲೇ ಬೆಂಗಳುರು ಗುರುತಿಸಿಕೊಂಡಿದ್ದರೆ ಅದಕ್ಕೆ ಕಾರಣ ಧೀಮಂತ ರಾಜ ಹಾಗೂ ಸಹೃದಯಿ ಕೆಂಪೆಗೌಡ ಎಂದರೆ ತಪ್ಪಾಗಲಾರದು ಎಂದ ಅವರು ಅವರ ಆಡಳಿತದಲ್ಲಿ ಕೋಟೆ ಕೊತ್ತಲಗಳು,ಕೆರೆ ಕಟ್ಟೆಗಳು ಹಾಗೂ ಕಲ್ಯಾಣಿಗಳನ್ನು ಕಟ್ಟಿಸಿದ್ದರು,ಈಗ ಅವುಗಳು ಕಣ್ಮರೆಯಾಗಿವೆ,ಈಗ ಕೆಂಪೆಗೌಡರ ಸವಿ ನೆನಪಿಗಾಗಿ ಅವುಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.


ನಾಡಪ್ರಭು ಕೆಂಪೆಗೌಡ ಅವರ ಆದರ್ಶ ಹಾಗೂ ಮೌಲ್ಯಗಳನ್ನು ನಾಡಿನ ಜನತೆಗೆ ಪರಿಚಯಿಸಬೇಕಾದ ಜವಬ್ದಾರಿ ನಮ್ಮೇಲರ ಮೇಲಿದೆ ಎಂದ ಅವರು ಒಂದು ಸುಂದರವಾದ ನಗರವನ್ನು ಹೇಗೆ ನಿರ್ಮಾಣ ಮಾಬೇಕೆಂಬುದನ್ನು ಕೆಂಪೆಗೌರಿಂದ ಕಲಿಯಬೇಕು.ಅಂದಿನ ಕಾಲದಲ್ಲಿ ಯಾವುದೇ ಆಧುನಿಕ ಪರಿಕರಗಳು ಇಲ್ಲದಿದ್ದರೂ ಅತ್ಯಂತ ವ್ಯವಸ್ಥಿತವಾಗಿ ನಗರ ನಿರ್ಮಾಣ ಮಾಡಿದರು. ಅವರನ್ನು ಜಗತ್ತಿನ ಮೊದಲ ಇಂಜಿನಿಯರ್ ಎಂದು ಕರೆದರೂ ತಪ್ಪಿಲ್ಲ ಎಂದ ಅವರು, ಕೆಂಪೆಗೌಡರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸುವ ಬದಲು ಅವರ ಸಾಧನೆU ಹಾಗೂ ಪ್ರಯತ್ನಗಳನ್ನು ಯುವಕರಿಗೆ ತಿಳಿಸಬೇಕು ಆಗ ಅವರು ಅಸಹ ಅವರ ಹಾದಿಯಲ್ಲೆ ನಗರ ನಿರ್ಮಾಣದಂತಹ ಯೋಜನೆಗಳನ್ನು ತರುವ ಬಗ್ಗೆ ಯೋಚಿಸಬಹುದು ಎಂದರು.
ಶಿರಸ್ತೆದಾರ್ ಸುಬಾಶ್,ಪತ್ರಕರ್ತ ಶ್ರೀನಿವಾಸ್, ಪ್ರಥಮ ದರ್ಜೆ ಸಾಹಾಯಕ ರವಿಕುಮಾರ್ ರಾಜಸ್ವ ನಿರೀಕ್ಷಿಕ ರಮೇಶ್,ಮಂಜುನಾಥ್,ನಾಗರಾಜ್ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *