ರಾಜ್ಯ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರಾಗಿ ಎಂ.ಡಿ ಲಕ್ಷ್ಮೀ ನಾರಾಯಣರವರು ಸುಮಾರು 2012 ರಿಂದ 2021ರವರೆಗೆ ಇಲ್ಲಿಯವರೆಗೂ ಹಗಲು-ಇರುಳು ರಾಜ್ಯದ್ಯಂತ ಸುತ್ತಾಡಿ, ಸುಮಾರು ಒಂಬತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸಂಘಟನೆ ಮಾಡುತ್ತಿದ್ದ ಹಿರಿಯ ವಯಸ್ಸಿನ ಮುಗ್ಧ ಮನಸ್ಸಿನ ತಾಳ್ಮೆಯಿಂದ ಅಹವಾಲುಗಳನ್ನು ಸ್ವೀಕರಿಸುತ್ತಾ, ರಾಜ್ಯ ದೇವಾಂಗ ಸಮಾಜದ ನಾಯಕರಾಗಿ ,ಮತ್ತು ನೇಕಾರ ಸಮಾಜ ನಾಯಕರಾಗಿ,
ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕರಾಗಿ ಸೇವೆಯನ್ನು ಸಲ್ಲಿಸಿದಂತಹ ಎಂ.ಡಿ ಲಕ್ಷ್ಮಿ ನಾರಾಯಣ್ ರವರು 3 ನಾಲ್ಕುದಿನಗಳ ಹಿಂದೆ ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಿಡೀರ್ ರಾಜೀನಾಮೆ ಕೊಟ್ಟಿರುವುದು ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಮೂಡಿಸಿದೆ.
ಇವರ ರಾಜೀನಾಮೆಗೆ ಯಾರು ಒತ್ತಡವಿದೆಯೇ?,ಒತ್ತಡವಿದ್ದರೆ ಯಾವ ಕಾರಣಕ್ಕೆ, ಸುಮಾರು ಒಂಬತ್ತು ವರ್ಷ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯಾದ್ಯಂತ ಸುತ್ತಾಡಿ ಸೇವೆಯನ್ನು ಮಾಡಿದ್ದು, ಕೆಲವರಿಗೆ ಸಹಿಸಿಕೊಳ್ಳಲ್ಲಿಕ್ಕೆ ಆಗುತ್ತಿಲ್ಲವೇ? ಎನ್ನುವ ಯಕ್ಷಪ್ರಶ್ನೆ ಹಾಗೆ ಉಳಿದುಕೊಳ್ಳುತ್ತದೆ.
ಸುಮಾರು ರಾಜ್ಯದಂತ 60ರಿಂದ 61 ಕ್ಷೇತ್ರದಲ್ಲಿ 30ರಿಂದ 40 ಸಾವಿರ ದೇವಾಂಗ, ನೇಕಾರ ಸಮಾಜ ಹಾಗೂ 102 ಹಿಂದುಳಿದ ವರ್ಗದ ಸಮಾಜದ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತದೆ. ಹಾಗಾಗಿ ಎಂ ಡಿ ಲಕ್ಷ್ಮಿ ನಾರಾಯಣ್ ರವರನ್ನು ಕಾಂಗ್ರೆಸ್ ಪಕ್ಷ ಇವರನ್ನು ಬಳಸಿಕೊಂಡರೆ ಪಕ್ಷಕ್ಕೆ ಒಳಿತಾಗುತ್ತದೆ. ಕಾಂಗ್ರೆಸ್ ಪಕ್ಷ ಇವರ ಸೇವೆ ಇಷ್ಟೆ ಸಾಕು ಎನ್ನುವುದಾದರೆ ಪಕ್ಷಕ್ಕೆ ಬಿಟ್ಟ ವಿಚಾರ,
ರಾಜ್ಯಾದ್ಯಂತ 102 ಹಿಂದುಳಿದ ವರ್ಗದ ನಾಯಕರು ಮತ್ತು ಸಮಾಜದ ಮುಖಂಡರುಗಳು ಮುಂದಿನ ನಡೆಯ ಬಗ್ಗೆ ಚರ್ಚೆಯು ರಾಜ್ಯದ್ಯಂತ ಗುಸು ಗುಸು ಮಾತುಗಳು ಕೇಳಿಬರುತ್ತಿವೆ, ಇವರನ್ನು ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಸ್ಥಾನದಿಂದ ತಗೆದರೆ ಇದಕ್ಕೆ ಪರ್ಯಾಯವಾಗಿ ಯಾವ ಸ್ಥಾನವನ್ನು ಕಲ್ಪಿಸಬಹುದು!ಮಾಡದೇ ಇದ್ದರೆ , ಈ ಸಮಾಜಗಳು ಯಾವ ಕಡೆ ಮುಖ ಮಾಡುತ್ತದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ? ಹಾಗಾಗಿ ಕೆಪಿಸಿಸಿ ರಾಜ್ಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ. ಕೆ ಶಿವಕುಮಾರ್ ಅವರು ಯಾವ ಕ್ರಮ ಕೈಗೊಳ್ಳಬಹುದು ಎಂದು ಸಮುದಾಯದವರು ನಿರೀಕ್ಷೆಯಲ್ಲಿದ್ದಾರೆ.
ಇದು ರಾಜ್ಯ ಹಿಂದುಳಿದ ಶೋಷಿತ ವರ್ಗದವರ ಜನ ಅಭಿಪ್ರಾಯವಾಗಿದೆ.
ಶ್ರೀ ಎಂ ಡಿ ಲಕ್ಷ್ಮಿ ನಾರಾಯಣ್ ರವರ ಮುಂದಿನ ನಡೆಯನ್ನು ಕಾದು ನೋಡೋಣ?