• ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯದಲ್ಲಿ Stp/tSP ಕಾಯ್ದೆಯನ್ನು ಜಾರಿಗೊಳಿಸಿ ಆ ಜನಾಂಗದ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ. ಈ ಕಾಯ್ದೆ ಪ.ಜಾ / ಪ.ಪಂ.ಗಳ ಪಾಲಿಗೆ ಐತಿಹಾಸಿಕವಾಗಿರುತ್ತದೆ.
• ೨೦೦೮-೦೯ರಿಂದ ೨೦೧೨-೧೩ನೇ ಸಾಲಿನವರೆಗೆ ಈ ಯೋಜನೆಯಡಿಯಲ್ಲಿ ೨೨,೨೬೧ ಕೋಟಿ ರೂ.ಗಳು ವೆಚ್ಚ ಮಾಡಿದ್ದು, ನಮ್ಮ ರ‍್ಕಾರದ ಅವಧಿಯಲ್ಲಿ ೮೮,೩೯೫ ಕೋಟಿ ರೂ. ಗಳನ್ನು ಒದಗಿಸಲಾಗಿದೆ.
• ನಮ್ಮ ಸರ್ಕಾರವು, “ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕವನ್ನು ಜಾರಿಗೆ ತಂದಿರುತ್ತದೆ.
• ಸಮಾಜ ಕಲ್ಯಾಣ ಇಲಾಖೆಗೆ ೨೦೦೮ರಿಂದ ೨೦೧೩ರ ಅವಧಿಯಲ್ಲಿ ೯,೫೪೨ ಕೋಟಿ ರೂ. ಹಣ ಒದಗಿಸಿದ್ದು, ನಮ್ಮ ಸರ್ಕಾರವು ೨೩,೭೯೮ ಕೋಟಿ ರೂ. ಹಣವನ್ನು ಒದಗಿಸಿರುತ್ತದೆ.
• ೨೦೦೮ರಿಂದ ೨೦೧೩ರ ಅವಧಿಯಲ್ಲಿ ೧೯೬ ವಸತಿ ಶಾಲೆಗಳನ್ನು ಪ್ರಾರಂಭಿಸಿದ್ದು, ನಮ್ಮ ಸರ್ಕಾರವು ಹೋಬಳಿಗೊಂದು ವಸತಿ ಶಾಲೆಯ ಪರಿಕಲ್ಪನೆಯಲ್ಲಿ ೨೭೦ ಹೊಸ ವಸತಿ ಶಾಲೆಗಳನ್ನು ಹಾಗೂ ೨೦೦ ಹೊಸ ಮೆಟ್ರಿಕ್ ನಂತರದ ವಿದ್ಯರ‍್ಥಿನಿಲಯಗಳನ್ನು ಪ್ರಾರಂಭಿಸಿರುತ್ತದೆ. ಇದರಿಂದ ೭೪,೩೦೦ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಪ್ರವೇಶಾವಕಾಶ ಕಲ್ಪಿಸಲಾಗಿದೆ.
• ೨೦೦೮ರಿಂದ ೨೦೧೩ರ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ೮೭೩ ಹುದ್ದೆಗಳಿಗೆ ನೇಮಕಾತಿ ಮಾಡಿದ್ದು, ನಮ್ಮ ಸರ್ಕಾರವು ೩೫೬೧ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಲು ಕ್ರಮ ಕೈಗೊಂಡಿರುತ್ತದೆ.
• ೨೦೦೮ರಿಂದ ೨೦೧೩ರ ಅವಧಿಯಲ್ಲಿ ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡಗಳನ್ನು ನಿರ‍್ಮಾಣ ವiತ್ತು ದುರಸ್ತಿ/ಉನ್ನತೀಕರಣಕ್ಕಾಗಿ ಒಟ್ಟು ೫೬೦ ಕೋಟಿ ರೂ. ಗಳನ್ನು ಒದಗಿಸಿದ್ದು, ನಮ್ಮ ಸರ್ಕಾರವು ೧,೪೯೪ ಕೋಟಿ ರೂ. ಗಳನ್ನು ಮಂಜೂರು ಮಾಡಿರುತ್ತದೆ.
• ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೂಲಕ ಹಿಂದಿನ ಸರ್ಕಾರ ೪೩೫ ಕೋಟಿ ರೂ. ವೆಚ್ಚದಲ್ಲಿ ೬೯ ವಸತಿ ಸಂಕೀರ್ಣಗಳನ್ನು ನಿರ್ಮಾಣ ಮಾಡಿತ್ತು. ನಮ್ಮ ಸರ್ಕಾರವು ೧,೫೩೭ ಕೋಟಿ ರೂ. ವೆಚ್ಚದಲ್ಲಿ, ೧೨೯ ವಸತಿ ಶಾಲಾ ಸಂಕೀರ್ಣಗಳನ್ನು ನಿರ್ಮಾಣ ಮಾಡಿರುತ್ತದೆ. ಇದಲ್ಲದೆ ೧೬ ವಿಶ್ವವಿದ್ಯಾಲಯಗಳಲ್ಲಿ ಪ.ಜಾ/ಪ.ಪಂ.ದವರ ಸ್ನಾತಕೋತ್ತರ ವಸತಿನಿಲಯ ನಿರ್ಮಾಣಕ್ಕಾಗಿ ೧೧೬ ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
• ಪ.ಜಾ/ಪ.ಪಂ.ದವರು ನಡೆಸುವ ಶಿಕ್ಷಣ ಮತ್ತು ಧಾರ‍್ಮಿಕ ಸಂಸ್ಥೆಗಳಲ್ಲಿ ಕಟ್ಟಡ ನಿರ‍್ಮಾಣಕ್ಕಾಗಿ ೨೦೦೮-೦೯ ರಿಂದ ೨೦೧೨-೧೩ರವರೆಗೆ ೪ ಸಂಸ್ಥೆಗಳಿಗೆ ೧೧ ಕೋಟಿ ರೂ. ಬಿಡುಗಡೆ ಮಾಡಿದ್ದು, ನಮ್ಮ ಸರ್ಕಾರವು ೧೮೬ ಸಂಘ ಸಂಸ್ಥೆಗಳಿಗೆ ೮೬ ಕೋಟಿ ರೂ. ಗಳನ್ನು ಬಿಡುಗಡೆ ಮಾಡಿರುತ್ತದೆ.
• ಪ.ಜಾ/ಪ.ಪಂ. ಸಮುದಾಯಗಳಲ್ಲಿ ಅಲೆಮಾರಿ/ ಅರೆ ಅಲೆಮಾರಿ/ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ೭೨ ಸಮುದಾಯಗಳನ್ನು ಗುರುತಿಸಿ ಅವರ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿ ಗಾಗಿ ೨೨೨ ಕೋಟಿ ರೂ. ಒದಗಿಸಲಾಗಿದ್ದು, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
• ಪ.ಜಾ/ಪ.ಪಂ.ಗಳ ವಿದ್ಯಾರ್ಥಿಗಳಿಗೆ ಹಿಂದಿನ ಸರ್ಕಾರವು ೨೫೦ ರೂ.ನಿಂದ ೬೫೦ ರೂ.ರವರೆಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ದರವನ್ನು ನಮ್ಮ ಸರ್ಕಾರವು ೬೬೦ ರೂ.ರಿಂದ ೧,೩೫೦ ರೂ. ರವರೆಗೆ ಹೆಚ್ಚಿಸಿರುತ್ತದೆ.
• ಪ್ರಥಮ ದರ್ಜೆಯಲ್ಲಿ ಪ್ರಥಮ ಬಾರಿ ಉತ್ತೀರ್ಣರಾದ ಪ.ಜಾ/ಪ.ಪಂ.ಗಳ ವಿದ್ಯಾರ್ಥಿಗಳಿಗೆ ಹಿಂದಿನ ಸರ್ಕಾರ ೭೫೦ ರೂ. ರಿಂದ ೧೦,೦೦೦ ರೂ. ರವರೆಗೆ ಪ್ರೋತ್ಸಾಹ ಧನ ನೀಡುತ್ತಿದ್ದು, ನಮ್ಮ ಸರ್ಕಾರ, ೭,೦೦೦ ರೂ. ರಿಂದ ೩೫,೦೦೦ ರೂ. ರವರೆಗೆ ನೀಡುತ್ತಿದೆ.
• ೫೫.೭೭ ಲಕ್ಷ ಮೆಟ್ರಿಕ್ ಪೂರ್ವ ಮತ್ತು ೧೮.೨೨ ಲಕ್ಷ ಮೆಟ್ರಿಕ್ ನಂತರದ ಪ.ಜಾ/ಪ.ಪಂ.ಗಳ ವಿದ್ಯಾರ್ಥಿಗಳಿಗೆ ಅನುಕ್ರಮವಾಗಿ ೫೭೭ ಕೋಟಿ ರೂ. ಹಾಗೂ ೧,೮೪೩ ಕೋಟಿ ರೂ.ಗಳ ಡೇ-ಸ್ಕಾಲರ್ ವಿದ್ಯಾರ್ಥಿ ವೇತನ ಮಂಜೂರು ಮಾಡಿದ್ದು, ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿ ಶಿಕ್ಷಣಕ್ಕೆ ಸಹಾಯ ಮಾಡಲಾಗಿದೆ.
• ವಿದೇಶಗಳಲ್ಲಿ ಉನ್ನತ ವ್ಯಾಸಂಗಕ್ಕೆ ಹಿಂದಿನ ಸರ್ಕಾರವು ೧೫ ವಿದ್ಯರ‍್ಥಿಗಳನ್ನು ನಿಯೋಜಿಸಿದ್ದು, ನಮ್ಮ ಸರ್ಕಾರವು ೧೯೭ ಪ.ಜಾ/ಪ.ಪಂ.ಗಳ ವಿದ್ಯಾರ್ಥಿಗಳನ್ನು ನಿಯೋಜಿಸಿರುತ್ತದೆ.
• ಪ.ಜಾ/ಪ.ಪಂ.ಗಳ ಜನಾಂಗದವರಿಗೆ ಸ್ಮಶಾನ ಭೂಮಿ ಒದಗಿಸಲು/ ಅಭಿವೃದ್ಧಿಗಾಗಿ ವಿಶೇಷ ಆದ್ಯತೆ ನೀಡಿ, ೫೩.೬೫ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
• ಡಾ|| ಬಿ.ಆರ್. ಅಂಬೇಡ್ಕರ್ / ಡಾ|| ಬಾಬು ಜಗಜೀವನರಾಂ ಮತ್ತು ಮಹರ್ಷಿ ವಾಲ್ಮೀಕಿ ಭವನಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ೨೦೦೮-೦೯ ರಿಂದ ೨೦೧೨-೧೩ರವರೆಗೆ ೨೩೩ ಕೋಟಿ ರೂ. ವೆಚ್ಚದಲ್ಲಿ ೧,೭೦೮ ಭವನಗಳನ್ನು ನಿರ್ಮಿಸಿದ್ದು, ನಮ್ಮ ಸರ್ಕಾರವು ೮೪೦ ಕೋಟಿ ರೂ. ಗಳನ್ನು ೮,೧೯೯ ಭವನಗಳ ನಿರ್ಮಾಣಕ್ಕಾಗಿ ಬಿಡುಗಡೆ ಮಾಡಲಾಗಿದೆ.
• ನಮ್ಮ ಸರ್ಕಾರ ವಿವಿಧ ಅಭಿವೃದ್ಧಿ ನಿಗಮದಿಂದ ಪ.ಜಾ/ಪ.ಪಂ.ದ ಫಲಾನುಭವಿಗಳು ಪಡೆದ ೫೮೧ ಕೋಟಿ ರೂ. ಸಾಲವನ್ನು ಮನ್ನಾ ಮಾಡಿ, ೨.೨೩ ಲಕ್ಷ ಫಲಾನುಭವಿಗಳನ್ನು ಋಣಮುಕ್ತರನ್ನಾಗಿ ಮಾಡಿದೆ.
• ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ೨೦೦೮ ರಿಂದ ೨೦೧೩ರ ಅವಧಿಯಲ್ಲಿ ೮೬೪ ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟು ೪೯,೦೪೦ ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ನಮ್ಮ ಸರ‍್ಕಾರದ ಅವಧಿಯಲ್ಲಿ ಒಟ್ಟು ೬೭,೬೦೦ ಕೊಳವೆ ಬಾವಿಗಳನ್ನು ಕೊರೆದಿದ್ದು, ಇದಕ್ಕಾಗಿ ಒಟ್ಟು ೧೧೦೯ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.
• ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ೨೦೦೮-೦೯ ರಿಂದ ೨೦೧೨-೧೩ರ ಅವಧಿಯಲ್ಲಿ ೧,೭೦,೮೩೭ ಫಲಾನುಭವಿಗಳು ಸಾಲ ಸೌಲಭ್ಯವನ್ನು ಪಡೆದಿದ್ದು, ನಮ್ಮ ಸರ್ಕಾರವು ೩,೦೪,೭೨೭ ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸಿರುತ್ತದೆ.
• ಪ.ಜಾ/ಪ.ಪಂ.ಗಳ ಉದ್ದಿಮೆದಾರರಿಗೆ ಶೇ.೪ ರಷ್ಟು ಬಡ್ಡಿದರಲ್ಲಿ ಹಿಂದಿನ ಸರ್ಕಾರ ೯೯೮ ಫಲಾನುಭವಿಗಳಿಗೆ ೨೮೬.೪೯ ಕೋಟಿ ರೂ. ಸಾಲ ಹಾಗೂ ೩೦.೬೭ ಕೋಟಿ ರೂ. ಬಡ್ಡಿ ಸಹಾಯಧನ ನೀಡಿರುತ್ತದೆ.
ನಮ್ಮ ಸರ್ಕಾರವು ಈ ಕಾರ್ಯಕ್ರಮದಡಿ ಸಾಲದ ಗರಿಷ್ಠ ಮಿತಿಯನ್ನು ೧೦ ಕೋಟಿ ರೂ. ವರೆಗೆ ಹೆಚ್ಚಿಸಿ, ರಾಷ್ಟ್ರೀಕೃತ ಬ್ಯಾಂಕುಗಳಿಗೂ ವಿಸ್ತರಿಸಿ, ೧,೫೯೭ ಉದ್ದಿಮೆದಾರರಿಗೆ ೯೦೮ ಕೋಟಿ ರೂ. ಸಾಲ ಮತ್ತು ೧೨೧ ಕೋಟಿ ರೂ. ಬಡ್ಡಿ ಸಹಾಯಧನ ನೀಡಿದೆ.
• ಡಾ|| ಬಾಬು ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಅಡಿಯಲ್ಲಿ ೨೬,೧೬೩ ಚರ‍್ಮ ಕುಶಲ ಕರ್ಮಿಗಳಿಗೆ ೨೧೦ ಕೋಟಿ ರೂ. ವೆಚ್ಚದಲ್ಲಿ ಆರ್ಥಿಕ ನೆರವು ನೀಡಲಾಗಿದೆ.
• ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದಿಂದ ೧,೧೧೪ ತಾಂಡಗಳಲ್ಲಿ ೩೭೬ ಕೋಟಿ ರೂ.ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
• ಭೋವಿ ಜನಾಂಗ ಮತ್ತು ಸಫಾಯಿ ಕರ್ಮಚಾರಿ ಅಭಿವೃದ್ಧಿಗಾಗಿ ಪ್ರತ್ಯೇಕ ಎರಡು ನಿಗಮಗಳನ್ನು ಪ್ರಾರಂಭಿಸಲಾಗಿದೆ.
• ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ.ಜಾ/ಪ.ಪಂ.ಗಳ ಕಾಲೋನಿಗಳಲ್ಲಿ ಮೂಲಭೂತ ಸೌರ‍್ಯಗಳನ್ನು ಒದಗಿಸಲು ಹಿಂದಿನ ಸರ್ಕಾರ ೮೬೫ ಕೋಟಿ ರೂ. ಬಿಡುಗಡೆ ಮಾಡಿದ್ದು, ನಮ್ಮ ಸರ್ಕಾರ ೧,೩೬೦ ಕೋಟಿ ರೂ.ಗಳನ್ನು ಕಾಲೋನಿಗಳ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದೆ.