ಗದಗ ಜಿಲ್ಲೆ ಗದಗ ನಗರದಲ್ಲಿ ದಿನಾಂಕ 11/ 11 /20 21ರಂದು ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ ದಿಂದ ಶೈಕ್ಷಣಿಕ ಮತ್ತು ಸಾಮಾಜಿಕ ಜಾತಿ ಜನಗಣತಿ ವರದಿ ಪಟ್ಟಿಯನ್ನು ಬೇಗನೆ ಬಿಡುಗಡೆಗೊಳಿಸಬೇಕೆಂದು ಗದಗಿನ ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರಾದ ಎಂ ಡಿ ಲಕ್ಷ್ಮಿ ನಾರಾಯಣ್ ಮತ್ತು ಹಿಂದುಳಿದ ವರ್ಗದ ಒಕ್ಕೂಟದ ರಾಜ್ಯಾಧ್ಯಕ್ಷರಾದ ರಾಮಚಂದ್ರಪ್ಪನವರ ನೇತೃತ್ವದಲ್ಲಿ ಗದಗಿನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ.

,ಅಲ್ಲಿಂದ ಸುಮಾರು 2ರಿಂದ 3ಸಾವಿರ ಹಿಂದುಳಿದ ವರ್ಗದ ಸಮಾಜದ ಮುಖಂಡರುಗಳು ಮತ್ತು ಕಾರ್ಯಕರ್ತರು ಪಾದಯಾತ್ರೆಯ ಮಾಡುವುದರ ಮುಖಾಂತರ ಪಕ್ಷಾತೀತವಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ತೆರಳಿ ಆಫೀಸ್ ಮುಂದುಗಡೆ ಮೂರು ಗಂಟೆಗಳ ಕಾಲ ಸತ್ಯಾಗ್ರಹವನ್ನು ನಡೆಸುತ್ತಿರುವುದನ್ನು ಗಮನಿಸಿ,
ಆ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ತಕ್ಷಣ ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಲು ಬಂದಾಗ ,ಎಂ .ಡಿ .ಲಕ್ಷ್ಮಿ ನಾರಾಯಣ್ ರವರು ಮಾತನಾಡಿ, ಇಂಥ ಹೋರಾಟವನ್ನು ಮಾಡುತ್ತಿರುವುದ ಇದು ಮೊದಲಲ್ಲ, ಗದಗ್ ಜಿಲ್ಲೆಯಲ್ಲಿ ಮಾಡುತ್ತಿರುವುದು ಹತ್ತನೆಯ ಜಿಲ್ಲೆಯಾಗಿದೆ. ರಾಜ್ಯದಲ್ಲಿರುವ ಪ್ರತಿಯೊಂದು ಜಿಲ್ಲೆಗಳಲ್ಲಿ ಹಿಂದುಳಿದ ವರ್ಗದ ಜಾತಿ ಜನಗಣತಿ ವರದಿ ಪಟ್ಟಿಯನ್ನು ತಕ್ಷಣ ಬಿಡುಗಡೆ ಗೊಳಿಸುವ ಪರವಾಗಿ ಹೋರಾಟ ಮಾಡಲಾಗುವುದು ಎಂದು ಮಾತನ್ನು ಮುಂದುವರಿ

ಸಿ,ಶೈಕ್ಷಣಿಕ ಮತ್ತು ಸಾಮಾಜಿಕ ನ್ಯಾಯದಡಿಯಲ್ಲಿ ಜಾತಿಗಣತಿ ವಾರು ಪಟ್ಟಿಯ ವರದಿಯನ್ನು ರಾಜ್ಯದ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರ ಸರ್ಕಾರ ಕೂಡಲೇ ಬಿಡುಗಡೆಗೊಳಿಸಬೇಕು. ಬಿಡುಗಡೆ ಮಾಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆಯನ್ನು ನೀಡಿ. ಗದಗಿನ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಉಪಸ್ಥಿತಿಯಲ್ಲಿ ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರಾದ ಎಂ ಡಿ ಲಕ್ಷ್ಮಿ ನಾರಾಯಣ್ ಮತ್ತು ಹಿಂದುಳಿದ ಒಕ್ಕೂಟದ ರಾಜ್ಯಾಧ್ಯಕ್ಷರಾದ ರಾಮಚಂದ್ರಪ್ಪನವರು ,ಗದಗಿನ ಜಿಲ್ಲಾಧ್ಯಕ್ಷ ಪಕೀರಪ್ಪ ಇನ್ನೂ ಅನೇಕ ಮುಖಂಡರುಗಳು ಹಿಂದುಳಿದ ವರ್ಗದ ಸಮುದಾಯದ ಹೋರಾಟಗಾರರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *