ಕ್ರಮ
ಕರ್ನಾಟಕ ವಿಧಾನಸಭಾ ಪರಿಷತ್ತು-ಸ್ಥಳೀಯ ಪ್ರಾಧಿಕಾರ
ಕ್ಷೇತ್ರಗಳಿಂದ ಆಯ್ಕೆಯಾಗುವ ಸದಸ್ಯರುಗಳ ದ್ವೈವಾರ್ಷಿಕ
ಚುನಾವಣೆಗಳ ದಿನಾಂಕ ಈಗಾಗಲೇ ನಿಗದಿಯಾಗಿದ್ದು, ಚುನಾವಣೆ
ಪ್ರಕ್ರಿಯೆಗಳು, ನಿಷ್ಪಕ್ಷಪಾತವಾಗಿ ಮತ್ತು ಶಾಂತಿಯುತವಾಗಿ
ನಡೆಯುವ ಸಲುವಾಗಿ ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನು
ತಡೆಗಟ್ಟಲು ಹಾಗೂ ಅಬಕಾರಿ ಇಲಾಖೆಯಿಂದ ಜರುಗಿಸಬೇಕಾಗಿರುವ ಜಾರಿ
ಮತ್ತು ತನಿಖಾ ಕಾರ್ಯಗಳಿಗೆ ಸಂಬಂಧಿಸಿದಂತೆ ಮುಂಜಾಗ್ರತಾ
ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಅನಧಿಕೃತ ಸ್ಥಳಗಳಲ್ಲಿ ತಯಾರಿಸಲ್ಪಡುವ ಮತ್ತು ಮಾರಾಟ
ಮಾಡಲಾಗುವ ಅಕ್ರಮ, ಮಕಲಿ, ಕಲಬೆರಿಕೆ ಮದ್ಯ ಮತ್ತು
ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಕ್ರಮ ಅಬಕಾರಿ ಪದಾರ್ಥಗಳ
ಸೇವನೆಯಿಂದ ಆರೋಗ್ಯದ ಮೇಲೆ ಗಂಭೀರ ಸ್ವರೂಪದ
ಪರಿಣಾಮವಾಗುವುದರೊಂದಿಗೆ ಜೀವ ಕಳೆದುಕೊಳ್ಳುವ
ಸಂಭವವಿರುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಅನಧಿಕೃತ
ಸ್ಥಳಗಳಲ್ಲಿ ತಯಾರಿಸಲ್ಪಡುವ ಮತ್ತು ಮಾರಾಟ ಮಾಡಲಾಗುವ
ಅಕ್ರಮ, ನಕಲಿ ಕಲಬೆರಿಕೆ ಮದ್ಯ ಮತ್ತು ಕಳ್ಳಭಟ್ಟಿ ಸಾರಾಯಿ
ಹಾಗೂ ಇತರೆ ಅಕ್ರಮ ಅಬಕಾರಿ ಪದಾರ್ಥಗಳನ್ನು ಸೇವಿಸಬಾರದು.
ಇಂತಹ ಕೃತ್ಯಗಳು ಕಂಡು ಬಂದಲ್ಲಿ ಈ ಕೆಳಕಂಡ ವ್ಯಾಪ್ತಿಯ
ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ಹಾಗೂ ಕೃತ್ಯಕ್ಕೆ
ಸಂಬಂಧಿಸಿದಂತೆ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಿಗೂ ಹಾಗೂ
ತಹಶೀಲ್ದಾರರಿಗೂ ಮಾಹಿತಿ ನೀಡಬೇಕು. ಮಾಹಿತಿದಾರರ ಹೆಸರು
ಇತ್ಯಾದಿ ವಿವರಗಳನ್ನು ಗೌಪ್ಯವಾಗಿಡಲಾಗುವುದು.
1. ಅಬಕಾರಿ ಉಪ ಆಯುಕ್ತರ ಕಚೇರಿ, ದಾವಣಗೆರೆ ಕಚೇರಿ (ಜಿಲ್ಲಾ ವ್ಯಾಪ್ತಿ)
ದೂರವಾಣಿ ಸಂಖ್ಯೆ 08192-235316, ಮೊಬೈಲ್ ಸಂಖ್ಯೆ 9449597061,
9449597064
2. ಅಬಕಾರಿ ಉಪ ಅಧೀಕ್ಷಕರ ಕಚೇರಿ, ದಾವಣಗೆರೆ ಉಪ ವಿಭಾಗ
(ದಾವಣಗೆರೆ, ಹರಿಹರ ಮತ್ತು ಜಗಳೂರು ತಾಲ್ಲೂಕು ವ್ಯಾಪ್ತಿ)
ದೂರವಾಣಿ ಸಂಖ್ಯೆ 08192-225042, ಮೊಬೈಲ್ ಸಂಖ್ಯೆ 9449597064,
9449597065
3. ಅಬಕಾರಿ ಉಪ ಅಧೀಕ್ಷಕರ ಕಚೇರಿ, ಹೊನ್ನಾಳಿ ಉಪ ವಿಭಾಗ (ಹೊನ್ನಾಳಿ,
ನ್ಯಾಮತಿ ಮತ್ತು ಚನ್ನಗಿರಿ ತಾಲ್ಲೂಕು ವ್ಯಾಪ್ತಿ) ದೂರವಾಣಿ ಸಂಖ್ಯೆ
08192-295202, ಮೊಬೈಲ್ ಸಂಖ್ಯೆ 9449597066, 9449597067
4. ಅಬಕಾರಿ ನೀರಿಕ್ಷಕರ ಕಚೇರಿ, ದಾವಣಗೆರೆ ವಲಯ ನಂ.1 (ದಾವಣಗೆರೆ
ವಲಯ ನಂ.1 ವ್ಯಾಪ್ತಿ) ದೂರವಾಣಿ ಸಂಖ್ಯೆ 08192-224177, ಮೊಬೈಲ್
ಸಂಖ್ಯೆ 7795323230, 9448532551
5. ಅಬಕಾರಿ ನೀರಿಕ್ಷಕರ ಕಚೇರಿ, ದಾವಣಗೆರೆ ವಲಯ ನಂ.2 (ದಾವಣಗೆರೆ
ವಲಯ ನಂ.2 ವ್ಯಾಪ್ತಿ) ದೂರವಾಣಿ ಸಂಖ್ಯೆ 08192-221150, ಮೊಬೈಲ್
ಸಂಖ್ಯೆ 9448532551, 9902030272
6. ಅಬಕಾರಿ ನೀರಿಕ್ಷಕರ ಕಚೇರಿ, ಹರಿಹರ ವಲಯ (ಹರಿಹರ ಮತ್ತು
ಜಗಳೂರು ವ್ಯಾಪ್ತಿ) ದೂರವಾಣಿ ಸಂಖ್ಯೆ 08192-242166, ಮೊಬೈಲ್
ಸಂಖ್ಯೆ 8861411339, 8762501349
7. ಅಬಕಾರಿ ನೀರಿಕ್ಷಕರ ಕಚೇರಿ, ಹೊನ್ನಾಳಿ ವಲಯ (ಹೊನ್ನಾಳಿ ಮತ್ತು
ನ್ಯಾಮತಿ ತಾಲ್ಲೂಕು ವ್ಯಾಪ್ತಿ) ದೂರವಾಣಿ ಸಂಖ್ಯೆ 08192-252120,
ಮೊಬೈಲ್ ಸಂಖ್ಯೆ 9449686222, 8762501349, 7829119288
8. ಅಬಕಾರಿ ನೀರಿಕ್ಷಕರ ಕಚೇರಿ, ಚನ್ನಗಿರಿ ವಲಯ (ಚನ್ನಗಿರಿ ತಾಲ್ಲೂಕು
ವ್ಯಾಪ್ತಿ) ದೂರವಾಣಿ ಸಂಖ್ಯೆ 08192-229445, ಮೊಬೈಲ್ ಸಂಖ್ಯೆ 9380891915,
8792763238
ಈ ಮೇಲಿನ ಆಯಾ ವ್ಯಾಪ್ತಿಯ ಅಧಿಕಾರಿಗಳನ್ನು
ಸಂಪರ್ಕಿಸಬೇಕೆಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್
ಬಿ.ಶಿವಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.