ಹೊನ್ನಾಳಿ : ನೇತ್ರದಾನದಲ್ಲಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕು ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು..
ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಮಾತನಾಡಿದ ಅವರು, ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ ಹೆಚ್ಚು ನೇತ್ರದಾನ ಮಾಡಿಸುವ ಗುರಿಯೊಂದಲಾಗಿದೆ ಎಂದ ರೇಣುಕಾಚಾರ್ಯ ಅವಳಿ ತಾಲೂಕಿನಾಧ್ಯಂತ ಐದು ಸಾವಿರಕ್ಕೂ ಹೆಚ್ಚು ಜನರಿಂದ ನೇತ್ರದಾನ ನೊಂದಾವಣಿ ಮಾಡಿಸುವ ಗುರಿಯೊಂದಲಾಗಿದೆ ಎಂದರು.
ಇಂದೂ ಕೂಡ ಐನೂರು ಜನರು ನೇತ್ರದಾನಕ್ಕೆ ನೊಂದಾವಣಿ ಮಾಡಿಸಿದ್ದು, ಅವಳಿ ತಾಲೂಕಿನಾಧ್ಯಂತ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.
ಮನುಷ್ಯ ಸತ್ತ ಮೇಲೆ ಆತನ ದೇಹ ಮಣ್ಣಾಲಿ ಮಣ್ಣಾಗಲಿದ್ದು, ಅದರ ಬದಲು ಪ್ರತಿಯೊಬ್ಬರೂ ನೇತ್ರದಾನ ಮಾಡುವ ಮೂಲಕ ಅಂದರ ಬಾಳಲ್ಲಿ ಬೆಳಕಾಗ ಬೇಕೆಂದು ಕರೆ ನೀಡಿದರು.
ಈಗಾಗಲೇ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ ಒಂದು ಸಾವಿರಕ್ಕೂ ಹೆಚ್ಚು ಜನರು ಹೆಸರು ನೇತ್ರದಾನಕ್ಕೆ ನೊಂದಾವಣಿ ಮಾಡಿಸಿದ್ದು, ಈಗಾಗಲೇ ಹಳ್ಳಿ ಹಳ್ಳಿಗಳಲ್ಲೂ ನೇತ್ರದಾನದ ನೊಂದಾವಣಿಯ ಅರ್ಜಿಗಳನ್ನು ನೀಡಲಾಗಿದೆ ಎಂದರು.
ಅವಳಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೂ ಭೇಟಿ ನೀಡುವುದರ ಜೊತೆಗೆ ಜನರಲ್ಲಿ ನೇತ್ರದಾನದ ಮಹತ್ವವನ್ನು ಸಾರುವ ಕೆಲಸ ಮಾಡುತ್ತೇನೆಂದ ರೇಣುಕಾಚಾರ್ಯ, ಪ್ರತಿಯೊಬ್ಬರು ನೇತ್ರದಾನ ಮಾಡಲು ಮುಂದಾಗ ಬೇಕೆಂದು ಕರೆ ನೀಡಿದರು.
ಒಬ್ಬರು ನೇತ್ರದಾನ ಮಾಡಿದರೇ ಅದರಿಂದ ಹತ್ತು ಜನ ಅಂದರ ಬಾಳಿಗೆ ಬೆಳಕಾಗಲಿದ್ದು ಜನರು ನೇತ್ರದಾನ ಮಾಡಲು ಮುಂದೆ ಬರುವಂತೆ ಕರೆ ನೀಡಿದರು…