ಹೊನ್ನಾಳಿ ಜ;- 1 ತಾಲೂಕು ಆಫೀಸ್ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹೊನ್ನಾಳಿ ಇವರ ವತಿಯಿಂದ ಅಮರಶಿಲ್ಪಿ ಜಕಣಾಚಾರಿಯವರ ಜಯಂತೋತ್ಸವವನ್ನು ಹೊನ್ನಾಳಿ ತಾಲೂಕಿನ ಶಾಸಕರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ರವರು ಅಮರಶಿಲ್ಪಿ ಜಕಣಾಚಾರಿಯವರ ಭಾವ ಚಿತ್ರಕ್ಕೆ ಪುಷ್ಪ ನಮನ ಮಾಡುವುದರ ಮೂಲಕ ಗೌರವ ಸಮರ್ಪಣೆಯನ್ನು ಸಲ್ಲಿಸಿದರು.
ಎಂಪಿ ರೇಣುಕಾಚಾರ್ಯ ನಂತರ ಮಾತನಾಡಿ ಅಮರಶಿಲ್ಪಿ ಜಕಣಾಚಾರಿ ಅವರು ಕಲ್ಲಿನ ಕೆತ್ತನೆ ಕೆಲಸವನ್ನು ಮಾಡುತ್ತಿದ್ದರು. ಒಂದು ಕಲ್ಲಿಗೆ ಮೂರ್ತಿಗೆ ದೇವರ ಸ್ವರೂಪ ಬರಬೇಕಾದರೆ ಶಿಲ್ಪಿಯ ಕತ್ತನೆಯ ಕೆಲಸ ಮಹತ್ತರವಾದದ್ದು ಎಂದು ವಿಶ್ವಕರ್ಮ ಸಮಾಜದ ಬಾಂಧವರನ್ನು ಸ್ಮರಿಸುತ್ತ ನಿಮ್ಮ ಸಮಾಜದ ಕೊಡುಗೆ ಮಹತ್ತರವಾದದ್ದು ಅಮರಶಿಲ್ಪಿ ಜಕಣಾಚಾರಿ ಅವರು ನಿಮ್ಮ ಸಮಾಜದಲ್ಲಿ ಹುಟ್ಟಿ ಪ್ರತಿಯೊಂದು ಸಮಾಜವೂ ಕೂಡ ಪೂಜ್ಯ ಭಾವನೆಯಿಂದ ನೋಡುವಂತಾಗಿದೆ ಎಂದು ತಿಳಿಸಿದರು.
ಉಪಸ್ಥಿತಿಯಲ್ಲಿ ಶಾಸಕರಾದ ಎಂಪಿ ರೇಣುಕಾಚಾರ್ಯ, ತಾಲೂಕ್ ದಂಡಾಧಿಕಾರಿಗಳಾದ ಬಸನಗೌಡ ಕೋಟೂರ್ ,ಪುರಸಭೆಯ ಮುಖ್ಯ ಅಧಿಕಾರಿಯ ಪಂಪಾಪತಿ ನಾಯಕ ಸಿಡಿಪಿಒ ಮಹಾಂತೇಶ್ ಪೂಜಾರ್, ಪುರಸಭೆಯ ಅಧ್ಯಕ್ಷ ಹೋಬಳಿದಾರ್ ಬಾಬು ,ತಾಲೂಕ್ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಪಾಲಾಕ್ಷ ಚಾರಿ, ಕಾರ್ಯದರ್ಶಿಗಳಾದ ರುದ್ರಾಚಾರಿ, ಖಜಾಂಚಿ ಅಶೋಕ ಚಾರ್, ಗೋಪಿ ಸಿಂಗಟಗೆರೆ , ಶಾಂತಾ ಚಾರಿ ,ಪ್ರಭಾಚಾರಿ, ಶಿಲ್ಪಿಗಳಾದ ಕೋಟೇಶ ಚಾರ್ , ಷಣ್ಮುಖಚಾರ್ ಇನ್ನು ಮುಂತಾದ ಸಮಾಜದ ಮುಖಂಡರು ಗಳು ಸಹ ಭಾಗಿ ಯಾಗಿದ್ದರು.
