ಹೊನ್ನಾಳಿ- ಪ್ರಬ್ರವರಿ 21 ಹಿರೇಕಲ್ಮಠ ಸಮುದಾಯಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹೊನ್ನಾಳಿ ಸೇವಾ ದೀಕ್ಷೆ ಸಮಾರಂಭ ಹಾಗೂ ಧರ್ಮಸಭೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದರ ದಿವ್ಯ ಸಾನಿಧ್ಯವನ್ನು ಡಾಕ್ಟರ್ ಒಡೆಯರ್ ಚೆನ್ನಮಲ್ಲಿಕಾರ್ಜುನ ಸ್ವಾಮಿಗಳು ಇದರ ಉದ್ಘಾಟನೆಯನ್ನು ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಚಾಲನೆಯನ್ನು ಕೊಡಲಾಯಿತು.
ಪ್ರಾಸ್ತಾವಿಕ ನುಡಿಯನ್ನು ಶರಣ ಕೆ ಬಿ ಪರಮೇಶ್ವರಪ್ಪ ಜಿಲ್ಲಾಧ್ಯಕ್ಷರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ದಾವಣಗೆರೆ ಯವರು ಮಾತನಾಡಿ ಹೊನ್ನಾಳಿ ತಾಲೂಕಿನ ಶರಣ ಸಾಹಿತ್ಯ ಪರಿಷತ್ತು ಸಂಘದ ವರು ಶರಣ ಸಾಹಿತ್ಯ ದ ಬಗ್ಗೆ ಪ್ರತಿಯೊಂದು ಹಳ್ಳಿಗಳಿಗೆ ತೆರಳಿ ಜನರಿಗೆ ವಿಷಯವನ್ನು ತಲುಪಿಸುವಂತೆ ಕೆಲಸ ಹೊನ್ನಾಳಿ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನವರು ಮಾಡುವಂತಾಗಬೇಕು ಎಂದು ಹೇಳಿದರು.

ಶರಣ ಪಿಎಂ ಸಿದ್ದಯ್ಯ ನಿಕಟಪೂರ್ವ ಅಧ್ಯಕ್ಷರು ರವರು ಅ ಭಾ ಶ ಸಾ ಪ ಸೇವಾದೀಕ್ಷೆಯನ್ನು ನೆರವೇರಿಸಿಕೊಟ್ಟರು.
ಶರಣ ಕೆಪಿ ದೇವೇಂದ್ರ ಯ್ಯ ಅಧ್ಯಕ್ಷರು ತಾಲೂಕು ಶರಣ ಸಾಹಿತ್ಯ ಪರಿಷತ್ ಹೊನ್ನಾಳಿ ತಾಲೂಕು ಘಟಕ ಹಾಗೂ ಪೂಜೆ ಶ್ರೀಗಳವರಿಂದ
( 1) ಮುಕ್ತಮನಸ್ಸಿನ ಮುಖಗಳು ಡಿ ಕೆ ಬರಮಪ್ಪ ಗೌಡ್ರು
(2 )ಒಕ್ಕಲು ನೆನಪು ಯುಎನ್ ಸಂಗನಾಳಮಠ( ಧನರಾಜಪ್ಪ ವ್ಯಕ್ತಿಯ ಚಿತ್ರ) ಕೃತಿಗಳನ್ನು ಬಿಡುಗಡೆ ಮಾಡಿದರು.
ಅಧ್ಯಕ್ಷರಾದ ಶರಣ ಕೆಪಿ ದೇವೇಂದ್ರ ನವರು ಮಾತನಾಡಿ ಶರಣ ಸಾಹಿತ್ಯ ಪರಿಷತ್ ಧರ್ಮಸಭೆಯು ಮಡಿವಾಳ ಮಾಚಿದೇವರ ಹುಟ್ಟಿದಹಬ್ಬ ದಿನದಂದು ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಇವರು ಕೂಡ ಬಸವಣ್ಣನವರ ಅನುಯಾಯಿಯಾಗಿದ್ದರು ಎಂದು ತಿಳಿಸಿದರು.
ಮಠದ ಶ್ರೀ ಅವರು ಮಾತನಾಡಿ ಆ ದರ್ಮಕ್ಕೆಸೇರಿ ನಮ್ಮ ಧರ್ಮಕ್ಕೆ ಸೇರಿ ಅಂತ ಯಾರಿಗೆ ಹೇಳುವುದಿಲ್ಲ ಪ್ರತಿಯೊಬ್ಬರು ಮನುಷ್ಯರಾಗಿ ಬಸವಣ್ಣನ ತತ್ವಗಳನ್ನು ಪಾಲಿಸುವಂತಾಗಬೇಕು ಎಂದು ತಿಳಿಸಿದರು.
ಉಪಸ್ಥಿತಿಯಲ್ಲಿ:- ಶರಣ ಕೆಪಿ ದೇವೇಂದ್ರಯ್ಯ ಅಧ್ಯಕ್ಷರು ತಾಲೂಕು ಶರಣ ಸಾಹಿತ್ಯ ಪರಿಷತ್ ಹೊನ್ನಾಳಿ, ಹೇಮಲತಾ ಕಾರ್ಯದರ್ಶಿ ,ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜಿಎಂ ಮುರಿಗೆಪ್ಪ ಗೌಡ, ರೈತರ ಮುಖಂಡರಾದ ಬಸವರಾಜಪ್ಪ ಶಿವಮೊಗ್ಗ, ಶರಣು ಶಕುಂತಲ ರಾಜಕುಮಾರ್, ಜಿಲ್ಲಾ ಪ್ರತಿನಿಧಿಗಳಾದ ಪಿಎಂ ಸಿದ್ದಯ್ಯ ಶರಣೆ ಶಾರದಾ ಕೊನ ಗಟಗಿ ,ಗೌರವ ಸಲಹೆಗಾರ ಶರಣ ಯು ಎನ್ ಸಂಗನಾಳಮಠ, ವಚನ ಗಾಯನ ಶರಣ ಕಡದಕಟ್ಟೆ ತಿಮ್ಮಣ್ಣ, ಶರಣ ಜಿ ಬಿ ಧನರಾಜ್ ಪ್ಪ, ಇನ್ನು ಮುಂತಾದ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರುಗಳು, ನಿರ್ದೇಶಕರುಗಳು ಅಭಿಮಾನಿಗಳು ಸಹ ಭಾಗಿಯಾಗಿದ್ದರು.
