ಹೊನ್ನಾಳಿ ಪುರಸಭೆ ವ್ಯಾಪ್ತಿಯಲ್ಲಿ ಕೇಂದ್ರ ಹಾಗೂ ರಾಜ್ಯ
ಸರ್ಕಾರದ ಸಹಯೋಗದೊಂದಿಗೆ ಮ್ಯಾನುವೆಲ್ ಸ್ಕ್ಯಾವೆಂಜರ್‍ಗಳ
ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಹೊನ್ನಾಳಿ
ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.
     ಮ್ಯಾನುಯಲ್ ಸ್ಕ್ಯಾವೆಂಜಿಂಗ್ ನಿμÉೀಧ ಮತ್ತು ಪುನರ್ವಸತಿ
ಕಾಯಿದೆ-2013 ರಲ್ಲಿ ತಿಳಿಸಿರುವಂತೆ, ಯಾವುದೇ ವ್ಯಕ್ತಿಯು
ಆಧುನಿಕ ಸಲಕರಣೆಗಳಿಲ್ಲದ ಕೈಯಿಂದ ಮಲವನ್ನು
ಸ್ವಚ್ಛಗೊಳಿಸುವ ಸಾಗಿಸುವ ಕೆಲಸದಲ್ಲಿ ತೊಡಗಿರುವುದು. ಒಣ
ಶೌಚಾಲಯದಿಂದ ಅಥವಾ ತೆರೆದ ಚರಂಡಿಯಿಂದ ಮಲವನ್ನು ಕೈಯಿಂದ
ಸ್ವಚ್ಛಗೊಳಿಸುವುದು. ಶೌಚಾಲಯಕ್ಕೆ ಹೊಂದಿಕೊಂಡಿರುವ ಸಿಂಗಲ್
ಪಿಟ್‍ನ ಮ್ಯಾನುವಲ್ (ಯಂತ್ರ ಉಪಯೋಗಿಸದೇ) ಬರಿ ಕೈಯಿಂದ

ಸ್ವಚ್ಛತೆ ಮಾಡುವುದು ಈ ಚಟುವಟಿಕೆಗಳಲ್ಲಿ ತೊಡಗಿರುವವರು
ಹೊನ್ನಾಳಿ ಪುರಸಭೆ ಆರೋಗ್ಯ ವಿಭಾಗದಲ್ಲಿ ಫೆ.14 ರ ಒಳಗಾಗಿ
ಸ್ವಯಂ ಘೋಷಣೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಆದರೆ ಪುರಸಭೆ, ಸರ್ಕಾರಿ ಮತ್ತು ಖಾಸಗಿ ಕಛೇರಿಗಳಲ್ಲಿ ಕಸ
ಗುಡಿಸುವವರು ಅಥವಾ ಸ್ಯಾನಿಟರಿ/ಸ್ವಚ್ಛ ಮಾಡುವ ಕೆಲಸಗಾರರು
ಸಫಾಯಿ ಕರ್ಮಚಾರಿಗಳಾಗಿದ್ದು, ಇವರು ಮ್ಯಾನುವಲ್
ಸ್ಕ್ಯಾವೆಂಜರ್‍ಗಳು ಅಲ್ಲ.
     ನೋಂದಣಿ ಮಾಡಿಸಿಕೊಳ್ಳಲು ಬರುವಾಗ ಸಂಬಂಧಪಟ್ಟವರು
ಎರಡು ಪಾಸ್ ಪೆÇೀರ್ಟ್ ಅಳತೆಯ ಭಾವಚಿತ್ರ. ಬ್ಯಾಂಕ್ ಪಾಸ್‍ಪುಸ್ತಕದ
ಜೆರಾಕ್ಸ್ ಪ್ರತಿ(ಮೂಲ ಪ್ರತಿಯೊಂದಿಗೆ). ಆಧಾರ್ ಕಾರ್ಡ್‍ನ ಜೆರಾಕ್ಸ್
ಪ್ರತಿ (ಮೂಲ ಪ್ರತಿಯೊಂದಿಗೆ). ಚುನಾವಣಾ ಗುರುತಿನ
ಚೀಟಿ/ಪಡಿತರ ಚೀಟಿ/ಬಿ.ಪಿ.ಎಲ್ ಕಾರ್ಡ್(ಮೂಲ ಪ್ರತಿಯೊಂದಿಗೆ). ಕುಟುಂಬ
ಸದಸ್ಯರನ್ನೊಳಗೊಂಡ ಭಾವಚಿತ್ರ. ಮ್ಯಾನುವಲ್ ಸ್ಕ್ಯಾವೆಂಜಿಂಗ್
ವೃತ್ತಿಯಲ್ಲಿ ತೊಡಗಿರುವ ಬಗ್ಗೆ ಪ್ರಮಾಣ ಪತ್ರಗಳೊಂದಿಗೆ
ಸಮೀಕ್ಷೆಗೆ ಹಾಜರಾಗುವಂತೆ ಪುರಸಭೆ ಅಧ್ಯಕ್ಷರು,
ಉಪಾಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *