ಹೊನ್ನಾಳಿ,:ಪೆ-28- ಹೊನ್ನಾಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ದೇವನಾಯಕನಹಳ್ಳಿ ಗ್ರಾಮದ ಶಿವಮೊಗ್ಗದ ಮುಖ್ಯರಸ್ತೆ ಎಡಭಾಗದಲ್ಲಿರುವ ತಾಲೂಕು ಕುಂಚಿಟಿಗ ಸಮಾಜ ಮತ್ತು ದಾವಣಗೆರೆ,ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲಾ ಕುಂಚಿಟಿಗ ಸಮಾಜದವತಿಯಿಂದ ಸೋಮವಾರ 32ನೇ ವಿಜಯರಾಯ ಸಂಗಮೇಶ್ವ್ವರ ಜಯಂತಿ ಹಾಗೂ ಕುಂಚಿಟಿಗ ಸಮುದಾಯ ಭವನದ ಭೂಮಿ ಪೂಜೆ ನೇರವೇರಿಸಿ ಕಂದಾಯ ಸಚಿವ ಆರ್. ಆಶೋಕ್ ಮಾತನಾಡಿ
ಅನೇಕ ಸಂಕಷ್ಟಗಳ ಎದುರಿಸಿದ ಕುಂಚಿಟಿಗ ಸ್ವಾಮೀಜಿಗಳು ಕೃಷಿ ಮಾಡಿ ಮಠ ಕಟ್ಟಿ ಸಮಾಜ ಸಂಘಟಿಸಿದವರಾಗಿರುವರು.
ಯಾವುದೆ ಪೀಠದ ಸ್ವಾಮೀಜಿಗಳು ಹಾಗೂ ಸಮಾಜದ ಮುಖಂಡರು ತಮ್ಮ ಸಮಾಜದಲ್ಲಿನ ನೋಂದವರ ದ್ವನಿಯಾಗಿ ಕೆಲಸ ಮಾಡುವುದು ಅತೀ ಮುಖ್ಯವಾದ ಹಾಗೂ ಪವಿತ್ರವಾದ ಕಾರ್ಯ ವಾಗಲಿದೆ ಎಂದು ರಾಜ್ಯ ಸರ್ಕಾರದ ಕಂದಾಯ ಸಚಿವ ಆರ್. ಆಶೋಕ್ ಹೇಳಿದರು.
ತಾಲೂಕು ಕುಂಚಿಟಿಗ ಸಮಾಜ ಮತ್ತು ದಾವಣಗೆರೆ,ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲಾ ಕುಂಚಿಟಿಗ ಸಮಾಜದವತಿಯಿಂದ ನಗರದ ಶಿವಮೊಗ್ಗ ಮುಖ್ಯ ರಸ್ತೆಯ ಎಡಭಾಗದಲ್ಲಿ ಸೋಮವಾರ 32ನೇ ವಿಜಯರಾಯ ಸಂಗಮೇಶ್ವ್ವರ ಜಯಂತಿ ಹಾಗೂ ಕುಂಚಿಟಿಗ ಸಮುದಾಯ ಭವನದ ಭೂಮಿ ಪೂಜೆ ನೇರವೇರಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಪ್ರತಿಬಾನ್ವಿತ ಮಕ್ಕಳಿಗೆ ಐಎಎಸ್ ಮತ್ತು ಐಪಿಎಸ್ ವ್ಯಾಸಂಗ ಸೇರಿದಂತೆ ಇತರೆ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡುವ ಹಾಗೂ ಹಾಸ್ಟಲ್ ಸೌಲಭ್ಯ ಕಲ್ಪಿಸುವದರ ಮೂಲಕ ಸಮಾಜದ ಸಂಘಟನೆ ಇದು ಒಂದು ಶಕ್ತಿ ಹಾಗೂ ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರು ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ. ಸ್ವತಂತ್ರ ಪೂರ್ವದಲ್ಲಿ ಸಿರಿಗೆರೆ ಮಠಕ್ಕೆ ಬೆಳ್ಳಿಯ ಪಲ್ಲಕ್ಕಿ ಮತ್ತು ಸಿಂಹಾಸನವನ್ನು ಮೂರು ತಿಂಗಳ ಕಾಲ ನಮ್ಮ ತಂದೆಯವರು ಕಾಶಿಯಲ್ಲಿದ್ದುಕೊಂಡು ಪಲ್ಲಕ್ಕಿ ಮಾಡಿಸಿಕೊಂಡು ಬಂದಿದ್ದರು, ಮತ್ತು ಹೊನ್ನಾಳಿ ಪಟ್ಟಣದ ಮಧ್ಯೆ ಭಾಗದಲ್ಲಿರುವ ದನದ ಆಸ್ಪತ್ರೆಯನ್ನು ಸಹ ದಾನವಾಗಿ ಕೊಟ್ಟು ರಾಜ್ಯದ ಮೊದಲನೆಯ ಮುಖ್ಯಮಂತ್ರಿ ಚಂಗಲ್ ರಾಯ ರೆಡ್ಡಿಯವರನ್ನ ಕರಿಸಿ ಉದ್ಘಾಟನೆಯನ್ನು ಸಹ ನಮ್ಮ ಮನೆತನ ಮಾಡಿತ್ತು, ಅಂತಹ ಸುಸಂಸ್ಕೃತ ಮನೆತನದಲ್ಲಿ ಹುಟ್ಟಿದ ನಾವು
2500 ಎಕರೆ ಜಮೀನನ್ನ ಉಳುವವನೇ ಒಡೆಯ ಇಂದಿರಾ ಗಾಂಧಿಯ ಕಾಲದಲ್ಲಿ ಜನರಿಗೆ ಉಚಿತವಾಗಿ ಬಿಟ್ಟು ಕೊಟ್ಟ ಮನೆತನ ನಮ್ಮದು, ಯಾಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ ನಾವು ಕುಂಚಿಟಿಗ ಸಮಾಜಕ್ಕೆ ಜಾಗವನ್ನು ಉಚಿತವಾಗಿ ನೀಡಬೇಕಾಗಿತ್ತು, ಆರ್ಥಿಕ ಕಾರಣಾಂತರಗಳಿಂದ ಸಮಾಜದ ವತಿಯಿಂದ ಹಣವನ್ನು ಪಡೆದುಕೊಂಡು ಜಾಗವನ್ನು ಕೊಡಬೇಕಾಗಿ ಬಂತು ಅದು ಅನಿವಾರ್ಯ ಹಾಗೂ ನನಗೆ ದುಃಖವನ್ನು ಸಹ ತಂದಿದೆ ಎಂದು ಗುರುಗಳ ಎದುರುಗಡೆಯ ನೋವನ್ನು ತೋಡಿ ಕೊಂಡು ಶ್ರೀಗಳು ಮತ್ತು ಅಲ್ಲಿ ಸೇರಿರುವ ಕುಂಚಿಟಿಗ ಸಮಾಜದ ಬಾಂದವರ ಎದುರುಗಡೆ ಭಾವನಾತ್ಮಕವಾಗಿ ಡಿ ಜಿ ಶಾಂತನಗೌಡ್ರು ಸತ್ಯ ಸಂಗತಿಯನ್ನು ತಿಳಿಸಿದರು.
ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ ಹೊನ್ನಾಳಿ ಕುಂಚಿಟಿಗ ಸಮಾಜದವರು ನಿರ್ಮಿಸಲು ಮುಂದಾಗಿರುವ ಸಮೂದಾಯ ಭವನಕ್ಕೆ ಸರ್ಕಾರದಿಂದ 5 ಕೋಟಿ ರೂ.ಗಳನ್ನು ಅನುಧಾನ ಕೊಡಿಸಲು ಭರವಸೆ ನೀಡಿ ಮುಂದೆ ಅವಶ್ಯವಿರುವ ಕಟ್ಟಡಕ್ಕೆ ಸಮಾಜದೊಂದಿಗೆ ಚರ್ಚಿಸಿ ವಯಕ್ತಿಕವಾಗಿ ಧನ ಸಹಾಯ ಮಾಡುವದಾಗಿ ಹೇಳಿದರು. ಕುಂಚಿಟಿಗ ಸಮಾಜದ ಸ್ವಾಮೀಜಿಗಳು ತಮ್ಮ ಕಿರಿಯ ವಯಸ್ಸಿನಲ್ಲೇ ಸಮಾಜದಲ್ಲಿ ಒಡೆದ ಮನಸ್ಸುಗಳ ಕಟ್ಟುವ ಕೆಲಸವನ್ನು ಸವಾಲ್ ಆಗಿ ಸ್ವೀಕರಿಸಿ ಛಲದಂಕಮಲ್ಲನಂತೆ ಕಾರ್ಯನಿರ್ವಸಿದ್ದಾರೆ ಎಂದು ಬಣ್ಣಿಸಿದ ಶಾಸಕರು, ಶ್ರೀಗಳು ಬರಡು ಪ್ರದೇಶದಲ್ಲಿ ದಾಳಿಂಬೆ ಕೃಷಿ ಮಾಡಿ ಇತರ ರೈತರಿಗೆ ಪ್ರೇರಣೆಯಾಗಿದ್ದಾರೆಂದು ಬಣ್ಣಿಸಿದರು.
ಕೂಡಲಸಂಗಮದ ಪಂಚಮಸಾಲಿ ಜಯಮೃತುಂಜಯ ಸ್ವಾಮೀಜಿ ಮಾತನಾಡಿ ಒಂದು ಮಠದ ಸ್ವಾಮೀಜಿಗಳು ತಮ್ಮ ಸಂಪೂರ್ಣ ಬದುಕನ್ನು ಜನಾಂಗಕ್ಕೆ ಮೀಸಲಿಟ್ಟಿರುವವರೆಂದರೆ ಅದು ಕುಂಚಿಗ ಸ್ವಾಮೀಜಿ ಮಾತ್ರ ಎಂದು ಹೆಮ್ಮೆಯಿಂದ ಹೇಳಬೇಕಿದೆ. ಶಾಂತವೀರ ಸ್ವಾಮೀಜಿಗಳಲ್ಲಿ ಬಹುಜ್ಞಾನದ ಪಾಂಡಿತ್ಯ ಹಾಗೂ ಮುಂದಾಲೋಚನೆ ಇದ್ದು. ಹೊರ ರಾಜ್ಯದಲ್ಲೂ ಸಮಾಜ ಸಂಘಟಿಸಿದ ಹಿರಿಮೆ ಅವರದ್ದಾಗಿದೆ ಎಂದು ವಿವರಿಸಿದರು.
ಕನಕ ಗುರು ಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ ಹರಿದು ಹಂಚಿಹೋಗಿದ್ದ ಕುಂಚಿಟಿಗ ಸಮಾಜವನ್ನು ಸಂಘಟಿಸಿದ ಅವರು ಸ್ವಯಂ ಕೃಷಿ ಮಾಡಿ ಮಠ ಕಟ್ಟಿದ ಸ್ವಾಮೀಜಿ ಇದ್ದರೆ ಕುಂಚಿಟಿಗ ಸಮಾಜದ ಶಾಂತವೀರ ಸ್ವಾಮೀಜಿ, ಇವರು ಕರ್ನಾಟಕ ಉದ್ದಗಲಕ್ಕೂ ಸಂಚರಿಸಿ ಸಮಾಜ ಸಂಘಟನೆ ಮಾಡಿ ಅನೇಕ ಸಂಕಷ್ಟಗಳನ್ನು ಎದುರಿಸಿ ಈದೀಗ ಹೊಸದುರ್ಗದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಪೀಠದ ಅಭಿವೃದ್ದಿ ಕಾಮಾಗಾರಿ ಮುಂದಾಗಿದ್ದಾರೆ ಎಂದರು.
ಸಭೆಯ ಅಧ್ಯಕ್ತೆ ವಹಿಸಿದ ಕುಂಚಿಟಿಗ ಸಮಾಜದ ಅಧ್ಯಕ್ಷ ಸುರೇಶ್ ಮಾತನಾಡಿ 1992ರಲ್ಲೇ ಕುಂಚಿಟಿಗ ಸಮಾಜ ಸಂಘಟನೆಗೊಂಡು ನಳಂದ ವಿದ್ಯಾಸಂಸ್ಥೆ ಆರಂಬಿಸಿದ್ದು.ರೇಣುಕಾಚಾರ್ಯ ಸಚಿವರಾಗಿದ್ದ ಅವದಿಯಲ್ಲಿ ಶಾಲೆಗೆ ಸರ್ಕಾರದ ಅನುದಾನ ಕಲ್ಪಿಸಿದ್ದು.ಮಾಜಿ ಶಾಸಕ ಶಾಂತನಗೌಡ ತಮ್ಮ ಅವದಿಯಲ್ಲಿ 13 ಲಕ್ಷ ರೂ.ಗಳ ವೆಚ್ಚದಲ್ಲಿ 5 ರೂಂ ಗಳ ಕಟ್ಟಡಕ್ಕೆ ಅನುದಾನ ಕಲ್ಪಿಸಿದ್ದನ್ನು ಸ್ಮರಿಸಿ ಸಮಾಜದಲ್ಲಿ ರಾಜಕೀಯ ಬಾರದಿರಲಿ ಸಮಾಜ ಮೊತ್ತಷ್ಟು ಬಲಗೊಂಡು ಸಮೂದಾಯ ಭವನ ಮತ್ತು ಮಠಗಳ ನಿರ್ಮಾಣ ಮಾಡಲು ಸಮಾಜದವರು ಕೈಜೋಡಿಸಬೇಕು ಎಂದರು.
ಈ ಕಾರ್ಯಕ್ರಮದ ಸಾನಿಧ್ಯವನ್ನು ಹೊಸದುರ್ಗ ಕುಂಚಗಿರಿಯ ಕುಂಚಿಟಿಗ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರಿ ಜಗದ್ಗುರು ಡಾ. ಶಾಂತವೀರ ಮಹಾಸ್ವಾಮೀಜಿಗಳು ವಹಿಸಿದ್ದರು, ಕಾಗಿನಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಹಡಪದ ಹಪ್ಪಣ್ಣ ಸ್ವಾಮೀಜಿ,ಇಮ್ಮಡಿ ಸ್ವಾಮೀಜಿ,ಯಾದವ ಸ್ವಾಮೀಜಿ ಇದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ಕರ್ನಾಟಕ ಖನಿಜ ನಿಗಮ ನಿಯಮಿತ ಬೆಂಗಳೂರು ಇದರ ಅಧ್ಯಕ್ಷ ಎಸ್.ಲಿಂಗಮೂರ್ತಿ, ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ಡಿ.ಜಿ.ಶಾಂತನಗೌಡ, ಕೌಶಲ್ಯಾಭಿವೃದ್ದಿ ನಿಗಮ,À ಬೆಂಗಳೂರು ಅಧ್ಯಕ್ಷ ಮುರಳಿಧರ ಹಾಲಪ್ಪ ಗುತ್ತಿಗೆದಾರ ಸುಂಕದಕಟ್ಟೆ ನರಸಿಂಹಮೂರ್ತಿ,ರುದ್ರೇಶ್ ಕುಂಕವ, ರಾಜೇಶ್ ಜಿ. ಹರೀಶ್, ಸಮಾಜದ ಮುಖಂಡ ವರದರಾಜಪ್ಪ ಇನ್ನಿತರರು ಇದ್ದರು.