ಹೊನ್ನಾಳಿ -ಮಾರ್ಚ್ :-2- ತಾಲೂಕಿನ ಯರೇಹಳ್ಳಿ ಹಾಗೂ ಚಿಕ್ಕ ಹಾಲಿವಾಣ ಗ್ರಾಮಕ್ಕೆ ಸಂಪರ್ಕವನ್ನು ಕಲ್ಪಿಸುವ ರಸ್ತೆಯಲ್ಲಿ ಇಂದು ಮಧ್ಯಾಹ್ನ ಸುಮಾರು 2-30ಕ್ಕೆ ಸರಿಯಾಗಿ ಹಗಲು ಹೊತ್ತಿನಲ್ಲಿ ತೆಂಗಿನ ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಕಾರಣ ಸುಮಾರು ಆರು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ, ಆ ಸಮಯಕ್ಕೆ ಸರಿಯಾಗಿ ಬಂದ ಹಾಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ ದಿನೇಶ್ ರವರ ಸಮಯ ಪ್ರಜ್ಞೆಯಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾಹುತ ಆಗಿಲ್ಲ ,ಸುತ್ತಮುತ್ತಲ ಗ್ರಾಮಸ್ಥರ ಸಹಕಾರದೊಂದಿಗೆ ಕಂಬಗಳನ್ನು ತೆರವಗೊಳಿಸಲಾಯಿತು ಎಂದು ಯಕ್ಕನಹಳ್ಳಿ ಗ್ರಾಮದ ಪ್ರತ್ಯೇಕ ದರ್ಶಿ ರಾಮಾಂಜನೇಯರವರು ದೂರವಾಣಿ ಮುಖಾಂತರ ಎಬಿಸಿ ನ್ಯೂಸ್ ನವರಿಗೆ ತಿಳಿಸಿದರು.