ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ
ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರು ಮಾ.05 ಮತ್ತು 06
ರಂದು ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ
ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ರೇಣುಕಾಚಾರ್ಯ ಅವರು ಮಾ.05 ರಂದು ಹೊನ್ನಾಳಿಯಿಂದ
ಹೊರಟು ಬೆಳಿಗ್ಗೆ 10.30ಕ್ಕೆ ಶಿಕಾರಿಪುರಕ್ಕೆ ತೆರಳಿ ಮಾಜಿ
ಮುಖ್ಯಮಂತ್ರಿಗಳ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿರುವ
ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸ.05 ಕ್ಕೆ
ಸವಳಂಗ ಗ್ರಾಮದಲ್ಲಿ ಗ್ರಾಮಸ್ಥರಿಂದ ಆಯೋಜಿಸಿರುವ
ಅಭಿನಂದನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸ.6.30ಕ್ಕೆ
ಹಳೆಮಳಲಿ ಗ್ರಾಮದಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ
ಭಾಗವಹಿಸುವರು.
ಮಾ.06 ರಂದು ಹೊನ್ನಾಳಿಯಿಂದ ಹೊರಟು ಬೆ.11ಕ್ಕೆ
ಹಳೆಗೊಲ್ಲರಹಳ್ಳಿ ಗ್ರಾಮದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ
ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸುವರು. ಬೆ.11.30ಕ್ಕೆ
ಅರಕೆರೆ ಗ್ರಾಮದಲ್ಲಿ ಸಿ.ಸಿ ರಸ್ತೆ ಕಾಮಗಾರಿ ಶಂಕುಸ್ಥಾಪನೆ
ನೆರವೇರಿಸುವರು. ಮ.12ಕ್ಕೆ ಸಿಂಗಟಗೆರೆ ಗ್ರಾಮದಲ್ಲಿ ಸಿ.ಸಿ ರಸ್ತೆ
ಕಾಮಗಾರಿ ಉದ್ಘಾಟನೆ ನೆರವೇರಿಸುವರು. ಮ.12.30ಕ್ಕೆ ತಿಮ್ಲಾಪುರ
ಗ್ರಾಮದಲ್ಲಿ ಗ್ರಾಮಸ್ಥರಿಂದ ಆಯೋಜಿಸಿರುವ ಅಭಿನಂದನಾ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.1.15ಕ್ಕೆ ಯರೇಹಳ್ಳಿ
ಗ್ರಾಮದಲ್ಲಿ ರಸ್ತೆ ಕಾಮಗಾರಿ ಉದ್ಘಾಟನೆ ನೆರವೆರಿಸುವರು. ಮ.02ಕ್ಕೆ
ನೆಲಹೊನ್ನೆ ಗ್ರಾಮದಲ್ಲಿ ಸಿ.ಸಿ ರಸ್ತೆ ಕಾಮಗಾರಿ ಶಂಕುಸ್ಥಾಪನೆ
ನೆರವೇರಿಸುವರು. ಮ.3ಕ್ಕೆ ಹೊನ್ನಾಳಿಗೆ ತೆರಳಿ ಅದೇ ದಿನ ರಾತ್ರಿ
08.30ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ
ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.