ಹೊನ್ನಾಳಿ; ವೃತ್ತಿಯಲ್ಲಿ ನಿವೃತ್ತ ಬೆಸ್ಕಾಂ ಇಂಜಿನೀಯರಾಗಿದ್ದ ಇತ್ತಿಚ್ಚಿಗೆ ನಿಧಾನರಾದ ಹೊನ್ನಾಳಿ ಎಲ್‍ಎಸ್ ವೈಶ್ಯರ್‍ರವರು ತಮ್ಮ ದೇಹವನ್ನು 60 ನೇ ವರ್ಷದಲ್ಲೆ ವಿಜ್ಞಾನದ ವಿದ್ಯಾರ್ಥಿಗಳ ಅಧ್ಯಯಕ್ಕೆ ದಾನ ಮಾಡಿದ್ದು ಉತ್ತಮ ಕಾರ್ಯವಾಗಿದೆ ಎಂದು ಸಿರಿಗನ್ನಡ ವೇದಿಕಿಯ ಅಧ್ಯಕ್ಷರು ಹಾಗು ಸಾಹಿತಿಗಳಾದ ಯು ಎನ್ ಸಂಘನಾಳಮಠ ಹೇಳಿದರು.
ಮೃತರು ಕಾಯಕಯೋಗಿ,ಪರಿಸರ ಪ್ರೇಮಿ,ಸರಳ ಸಜ್ಜನರು ಭಾರತೀಯ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿದ್ದ 82 ವರ್ಷದ ಮೃತರು ದೇಹವನ್ನು ತಾವೇ ಹೆಳಿಕೊಂಡಂತೆ ದಾನ ಮಾಡಿದ್ದು ದಾವಣಗೆರೆ ಜೆಜಿಎಂ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದು ಇತರರಿಗೆ ಪ್ರೆರಣೆಯಾಗಿದೆ ಎಂದರು.
ಸಂತಾಪ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುರಿಗೆಪ್ಪಗೌಡ,ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ದೇವೆಂದ್ರಯ್ಯ,ಕೆ ಶೇಕರಪ್ಪ ಸೇರಿದಂತೆ ಇನ್ನಿತರೆ ಸಂಘ ಸಂಸ್ಥೆ ಪದಾಧಿಕಾರಿಗಳು ಈ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇತರರಿಗೆ ಪ್ರೇರಣೆಯಾಗಿದೆ ಎಂದರು.