ಹೊನ್ನಾಳಿ ಪಟ್ಟಣದಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್/ಸಫಾಯಿ
ಕರ್ಮಚಾರಿಗಳ ಸಮೀಕ್ಷೆ ನಡೆಸಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು,
ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ
ಆಹ್ವಾನಿಸಲಾಗಿದೆ.
ಸಮೀಕ್ಷೆ ಸಂದರ್ಭದಲ್ಲಿ ಸಲ್ಲಿಕೆಯಾಗಿರುವ 39 ಅರ್ಜಿಗಳನ್ನು
ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಈ ಬಗ್ಗೆ
ಆಕ್ಷೇಪಣೆಗಳಿದ್ದಲ್ಲಿ 15 ದಿನದೊಳಗಾಗಿ ಲಿಖಿತವಾಗಿ ಕಚೇರಿಗೆ
ಸಲ್ಲಿಸಬಹುದು. ನಂತರ ಬರುವ ಆಕ್ಷೇಪಣೆಗಳನ್ನು
ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಪುರಸಭೆ
ಕಚೇರಿಯನ್ನು ಸಂಪರ್ಕಿಸಬಹುದೆಂದು ಹೊನ್ನಾಳಿ ಪುರಸಭೆಯ
ಅಧ್ಯಕ್ಷ ಬಾಬು ಹೋಬಳದಾರ್ ಹಾಗೂ ಮುಖ್ಯಾಧಿಕಾರಿ ಎಸ್.ಆರ್
ವೀರಭದ್ರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *