ಮನುಷ್ಯನಿಗೆ ಶ್ರವಣವು (ಕಿವಿ) ಬಹಳ ಮುಖ್ಯವಾಗಿದ್ದು,
ಮಕ್ಕಳಲ್ಲಿ ಅಥವಾ ವಯಸ್ಕರಲ್ಲಿ ಕಂಡುಬರುವ ಶ್ರವಣದೋಷ
ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು,
ವೈದ್ಯರ ಬಳಿ ತಪಾಸಣೆ ಮಾಡಿಸಿ, ಸಕಾಲದಲ್ಲಿ ಚಿಕಿತ್ಸೆ ಪಡೆಯಲು
ಮುಂದಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿ ಡಾ. ನಾಗರಾಜ್ ಹೇಳಿದರು.
ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ
ಆರೋಗ್ಯ ಅಭಿಯಾನ ಯೋಜನೆಯಡಿ ಜಿಲ್ಲಾ ಮಟ್ಟದ ರಾಷ್ಟ್ರೀಯ
ಶ್ರವಣದೋಷ ನಿವಾರಣಾ ಮತ್ತು ನಿಯಂತ್ರಣ ಕಾರ್ಯಕ್ರಮದ
 ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ದೇಹದ ಇತರೆ ಅಂಗದಂತೆ
ಕಿವಿಯ ಆರೋಗ್ಯವನ್ನೂ ಕೂಡ ಕಾಪಾಡಿಕೊಳ್ಳಬೇಕು. ನಿರ್ಲಕ್ಷ್ಯ
ತೋರಿದಲ್ಲಿ ತೀವ್ರ ಶ್ರವಣದೋಷ ಉಂಟಾಗುವ
ಸಾಧ್ಯತೆಗಳಿರುತ್ತವೆ. ಯಾವುದೇ ಸಮಸ್ಯೆಗಳು ಆದಲ್ಲಿ
ತತ್‍ಕ್ಷಣವೇ ವೈದ್ಯರ ಬಳಿ ತಪಾಸಣಾ ಮಾಡಿಸಿ, ಚಿಕಿತ್ಸೆ
ಪಡೆದುಕೊಳ್ಳಬೇಕು ಎಂದರು.
ಮಕ್ಕಳ ತಜ್ಞರಾದ ಡಾ.ಸುರೇಶ ಗುಂಡಪಲ್ಲಿ ಮಾತನಾಡಿ,
ಮಗು ಜನಿಸಿದ ಒಂದು ವರ್ಷದ ಒಳಗೆ ಮಕ್ಕಳಿಗೆ ಕಿವಿ ಕೇಳಿಸದೆ,
ಆಲಿಸದೇ ಇದ್ದ ಲಕ್ಷಣಗಳು ಕಂಡು ಬಂದಲ್ಲಿ ತಜ್ಞರ ಮೂಲಕ ಚಿಕಿತ್ಸೆ
ಪಡೆಯಬೇಕು ಎಂದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ|| ರೇಣುಕಾರಾಧ್ಯ
ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಪಂಚದ 46.6 ಕೋಟಿಗೂ ಹೆಚ್ಚಿನ
ಜನರು ಕಿವುಡುತನ ಸಮಸ್ಯೆಯಿಂದ ನರಳುತ್ತಿದ್ದಾರೆ ಎಂದು
ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಶ್ರವಣದೋಷ ನಿವಾರಣಾ
ಮತ್ತು ನಿಯಂತ್ರಣಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ
ಕರಪತ್ರಗಳು, ಭಿತ್ತಿಪತ್ರಗಳು ಹಾಗೂ ಮಡಿಕೆ
ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಚಿಗಟೇರಿ ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಡಾ. ಷಣ್ಮಖಪ್ಪ,
ಡಾ.ರಾಘವೇಂದ್ರ, ಡಾ.ರೂಪಾ, ವೈದ್ಯಾಧಿಕಾರಿಗಳು ಹಾಗೂ
ಆರೋಗ್ಯ ಸಿಬ್ಬಂದಿಯವರು ಭಾಗವಹಿಸಿ ರಾಷ್ಟ್ರೀಯ ಶ್ರವಣದೋಷ
ನಿವಾರಣಾ ಮತ್ತು ನಿಯಂತ್ರಣ ಕಾರ್ಯಕ್ರಮವನ್ನು

ಯಶಸ್ವಿಗೊಳಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ
ಡಾ.ಸುರೇಶ.ಎನ್.ಬಾರ್ಕಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *