ಹರಿಹರ ; ತಾಲ್ಲೂಕಿನ ಪಂಚಮಸಾಲಿ ಹರಪೀಠದಲ್ಲಿಂದು ಬೆಳಗ್ಗೆ 11 ಗಂಟೆಗೆ ರಾಜ್ಯ,ಜಿಲ್ಲಾ ಹಾಗು ತಾಲ್ಲೂಕು ನೂತನ ಅಧ್ಯಕ್ಷರುಗಳನ್ನು ಸೇರಿದಂತೆ ರಾಜ್ಯ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಜಿಪಿ ಪಾಟೀಲ್‍ರವರು ತಿಳಿಸಿರುವರು.
ಅವರು ಹರಪೀಠದಲ್ಲಿ ಭಾನುವಾರ ನಡೆಯಲಿರುವ ನೂತನ ಕಾರ್ಯಕಾರಿ ಸಮಿತಿ ಪದಗ್ರಹಣ ಸಮಾರಂಭದ ವೇದಿಕೆ ಸಿದ್ದತೆಯನ್ನು ಪರಿಶೀಲಿಸಿ ಪತ್ರಿಕೆಯೊಂದಿಗೆ ಮಾತನಾಡಿದರು.
ಹರಪೀಠದ ಜಗದ್ಗುರುಗಳಾದ ವಚನಾನಂದ ಸ್ವಾಮಿಜಿಗಳ ಸಾನಿಧ್ಯದಲ್ಲಿ ನಡೆಯುವ ಸಮಾರಂಭದಲ್ಲಿ 15 ಜಿಲ್ಲಾ ಅಧ್ಯಕ್ಷರು 75 ಕ್ಕೂ ಹೆಚ್ಚು ತಾಲ್ಲೂಕು ಅಧ್ಯಕ್ಷರನ್ನೋಳಗೊಂಡತೆ ಸಮಿತಿ ಪದಾಧಿಕಾರಿಗಳು ಹಾಗು ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಸೇರಿದಂತೆ 1500 ಕ್ಕೂ ಹೆಚ್ಚು ಸಮಾಜದಿಂದ ಆಯ್ಕೆಗೊಂಡ ಪದಾಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೋಳ್ಳಲಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ನೂತನ ಅಧ್ಯಕ್ಷರು,ತಾಲ್ಲೂಕು ಅಧ್ಯಕ್ಷರು,ರಾಜ್ಯ ಕಾರ್ಯಕಾರಿ ಸಮಿತಿಯವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದೆಂದರು.
ಈ ಸಂದರ್ಭದಲ್ಲಿ ನಿಕಟಪೂರ್ವ ರಾಜ್ಯಧ್ಯಕ್ಷರುಗಳಾದ ಬಾವಿ ಬೆಟಪ್ಪ,ಬಸವರಾಜ ದಿಂಡೂರ್,ಹರಪೀಠದ ಧರ್ಮದರ್ಶಿಗಳಾದ ಬಿಸಿ ಉಮಪತಿ ಸಮಾಜದ ಪ್ರಮುಖರಾದ ಸೊಮನಗೌಡ ಪಾಟೀಲ್,ಬಿ ಲೋಕೆಶ್,ಪಟ್ಟಣಶಟ್ಟಿ ಪರಮೇಶ,ಜೋತಿ ಪ್ರಕಾಶ್ ಇನ್ನಿತರರಿದ್ದರು.

Leave a Reply

Your email address will not be published. Required fields are marked *