ಇಡೀ ರಾಜ್ಯವನ್ನು ಬಾಲ್ಯ ವಿವಾಹ ಮುಕ್ತ ರಾಜ್ಯವನ್ನಾಗಿ ಮಾಡಲು
ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು
ಪಣತೊಟ್ಟಿದ್ದಾರೆ. ಅವರ ಆಶಯವನ್ನು ಈಡೇರಿಸಲು ನಾವೂ
ಅವರೊಂದಿಗೆ ಕೈ ಜೋಡಿಸೋಣ ಎಂದು ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಹೇಳಿದರು
ಭಾನುವಾರ ನಗರದ ಜಯದೇವ ಸರ್ಕಲ್ ಬಳಿ ಜಿಲ್ಲಾಡಳಿತ,
ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು
ಪ್ರಸಾರ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ದಾವಣಗೆರೆ ಹಾಗೂ
ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ
ಬಾಲ್ಯವಿವಾಹ ನಿμÉೀಧ ಅಭಿಯಾನದ ‘ವಿಡಿಯೋ ಆನ್ ವ್ಹೀಲ್ಸ್’ ವಾಹ£ಕ್ಕೆÀ
ಚಾಲನೆ ಹಾಗೂ ಬೈಕ್ ಜಾಥಾ ಉದ್ಘಾಟನಾ ಕಾರ್ಯಕ್ರಮ ಮತ್ತು
ಬಾಲ್ಯವಿವಾಹ ನಿμÉೀಧ ಪ್ರಮಾಣವಚನ ಪ್ರತಿಜ್ಞಾ ಸ್ವೀಕಾರ
ಸಮಾರಂಭಲ್ಲಿ ಅವರು ಮಾತನಾಡಿದರು.
ರಾಜ್ಯವನ್ನು ಬಾಲ್ಯ ವಿವಾಹ ಮುಕ್ತ ರಾಜ್ಯವನ್ನಾಗಿ ಮಾಡಬೇಕು
ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು
ಪಣತೊಟ್ಟು ಇವತ್ತು ರಾಜ್ಯಮಟ್ಟದ ಕಾರ್ಯಕ್ರಮಕ್ಕೆ
ಹುಬ್ಬಳ್ಳಿಯಲ್ಲಿ ಚಾಲನೆ ನೀಡಿದ್ದಾರೆ. ಅದರಂತೆ ದಾವಣಗೆರೆ
ಜಿಲ್ಲೆಯಲ್ಲಿಯೂ  ಕೂಡ ವಿಡಿಯೋ ಪ್ರಚಾರ ವಾಹನ
ತಾಲ್ಲೋಕು ಕೇಂದ್ರ ಹಾಗೂ ಗ್ರಾಮಗಳಲ್ಲಿ ಸಂಚರಿಸಲಿದೆ.
ಒಟ್ಟು 18 ದಿನಗಳ ಕಾಲ ಪ್ರತಿ ದಿನ 05 ಪ್ರದರ್ಶನಗಳಂತೆ 90
ಪ್ರದರ್ಶನಗಳನ್ನು ನೀಡಲಿದೆ. ಈ ವಾಹನದಲ್ಲಿ ಪ್ರಸಾರವಾಗುವ
ಕಿರು ಚಿತ್ರದಲ್ಲಿ ಬಾಲ್ಯ ವಿವಾಹದ ದುಷ್ಪರಿಣಾಮದ ಸಂದೇಶಗಳು
ಪ್ರಸಾರವಾಗಲಿವೆ. .
ಬಾಲ್ಯ ವಿವಾಹ ಎಂಬುದು ಶಿಕ್ಷಾರ್ಹ ಅಪರಾಧ, ಮಕ್ಕಳ ಬಾಲ್ಯ
ವಿವಾಹದಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆ
ಯಾಗುತ್ತಿರುವುದರಿಂದ ಸಮಾಜದ ಕಟ್ಟಕಡೆಯ
ನಾಗರಿಕರೂ ಕೂಡ ಇದರಲ್ಲಿ ನನ್ನದೂ ಜವಾಬ್ದಾರಿ ಇದೆ ಎಂದು
ಕೈಜೋಡಿಸಿದರೆ ಮಾತ್ರ ಇದೊಂದು ಪಿಡುಗಿನಿಂದ ನಮ್ಮ

ಸಮಾಜವನ್ನು ಬಾಲ್ಯ ವಿವಾಹ ಮುಕ್ತ ಸಮಾಜ ಮಾಡಬಹುದೆಂದು
ತಿಳಿಸಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ
ನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ, ಏಪ್ರಿಲ್ 2021 ರಿಂದ ಮಾರ್ಚ್
2022 ರ ಒಳಗೆ  ಜಿಲ್ಲೆಯಲ್ಲಿ ಒಟ್ಟು 65 ಬಾಲ್ಯವಿವಾಹ ಪ್ರಕರಣಗಳು
ದಾಖಲಾಗಿದ್ದು ಅದರಲ್ಲಿ 5 ಜನರ ವಿರುದ್ದ ಎಫ್‍ಐಆರ್  ದಾಖಲಿಸಲಾಗಿದೆ
ಎಂದು ಮಾಹಿತಿ ನೀಡಿದರು.
      ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್
ನಾಯಕ್, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಸಿ.ಬಿ ರಿಷ್ಯಂತ್,  ಮಹಾನಗರ
ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ್  ಮಹಾನಗರ ಪಾಲಿಕೆ
ಆಯುಕ್ತ ವಿಶ್ವನಾಥ ಪಿ ಮುದ್ದಜ್ಜಿ, ಹಾಗೂ ವಿವಿಧ ಇಲಾಖೆಯ ಜಿಲ್ಲಾ
ಮಟ್ಟದ ಅಧಿಕಾರಿಗಳು ಅಂಗನವಾಡಿ, ಆಶಾ ಕಾರ್ಯಕರ್ತೆಯರು
ಹಾಜರಿದ್ದರು.

Leave a Reply

Your email address will not be published. Required fields are marked *