ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ
ನಿಗಮದ ದಾವಣಗೆರೆ ಜಿಲ್ಲಾ ಕಛೇರಿಯಲ್ಲಿ ಪ್ರಸಕ್ತ ಸಾಲಿನ ಪರಿಶಿಷ್ಟ
ಪಂಗಡದ ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ ಅತಿಸೂಕ್ಷ್ಮ
ಸಮುದಾಯಗಳ ಜನಾಂಗದವರಿಂದ ವಸತಿ ರಹಿತ ನಿವೇಶನ(ಸೈಟ್)
ಹೊಂದಿದ ಫಲಾಪೇಕ್ಷಿಗಳಿಗೆ ಮನೆ ನಿರ್ಮಿಸಿಕೊಡಲು
ಮನೆ(ವಸತಿ)ನಿರ್ಮಾಣ ಯೋಜನೆ ಕಲ್ಪಿಸಲು ಆನ್‍ಲೈನ್ ಮತ್ತು
ಆಫ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾ. 15 ರವರೆಗೆ ಅವಧಿ
ವಿಸ್ತರಿಸಲಾಗಿದೆ.
ಈ ಮೊದಲು ಫೆ.28 ರವರೆಗೆ ದಿನಾಂಕ ನಿಗದಿಗೊಳಿಸಲಾಗಿತ್ತು.
ಆದರೆ ಸಮುದಾಯದ ಅನೇಕ ಮುಖಂಡರುಗಳ ಕೋರಿಕೆಯ
ಮೇರೆಗೆ ಆಫ್‍ಲೈನ್ ಹಾಗೂ ಆನ್‍ಲೈನ್ ಅರ್ಜಿ ಸಲ್ಲಿಸುವ ದಿನಾಂಕವನ್ನು
ಮಾ.15 ರವರೆಗೆ ವಿಸ್ತರಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ 08192-233309
ಯನ್ನು  ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವ್ಯವಸ್ಥಾಪಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *