ಸಾಸ್ವೆಹಳ್ಳಿ : ಸಾಸ್ವೆಹಳ್ಳಿ ಹೊರವಲಯದಲ್ಲಿರುವ ಮಾವಿನ ಕೋಟೆ a d.v.s. ಕಾಲೇಜಿನ l ಮುಂಭಾಗದಲ್ಲಿ ರಾಜಕಾಲುವೆ ಅನ್ನು ಮುಚ್ಚಿ ಏತ ನೀರಾವರಿಯ ಜಾಕ್ವೆಲ್ ನಿರ್ಮಾಣಗೊಳ್ಳುತ್ತಿರುವ ಸ್ಥಳಕ್ಕೆ ಸೋಮವಾರ ಹೊನ್ನಾಳಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಗಾಜನೂರಿನ ಸೂಪರ್ಡೆಂಟ್ ಆಫ್ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು .
ಆದಿ ದ್ರಾವಿಡ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ!! ಎಸ್ ಹೆಚ್ ಕೃಷ್ಣ ಮೂ ರ್ತಿ ಪತ್ರಿಕೆಯೊಂದಿಗೆ ಮಾತನಾಡಿ ಈ ಹಿಂದೆ ಕರ್ನಾಟಕ ರಾಜ್ಯ ಅನುಸೂಚಿತ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಆಯೋಗ ಹೈದ್ರಾಬಾದ್ ಮೂಲದ ಜೀವಿ ಪಿ ಆರ್ ಕಂಪನಿ ಅಧಿಕಾರಿ ಮುಖ್ಯಸ್ಥ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಕಾಮಗಾರಿ ನಿಲ್ಲಿಸುವಂತೆ ನೋಟಿಸ್ ನೀಡಿದರು ಅದನ್ನು ಉಲ್ಲಂಘಿಸಿ ಕಾಮಗಾರಿ ನಡೆಸುತ್ತಿದ್ದು ಸೋಮವಾರ ಕಾಮಗಾರಿ ನಡೆಯುವ ಸ್ಥಳಕ್ಕೆ ಗಾಜನೂರಿನ ಸೂಪರ್ಡೆಂಟ್ ಇಂಜಿನಿಯರ್ ಹಾಗೂ ಹೊನ್ನಾಳಿ ಪೊಲೀಸ್ ಇಲಾಖೆಯ ಸಿಪಿಐ ದೇವರಾಜ್ ಪಿಎಸ್ಐ ಬಸವನಗೌಡ ಬೀರದಾರ್ ಸ್ಥಳ ಪರಿಶೀಲಿಸಿ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ.
ಆದಿದ್ರಾವಿಡ ವಿದ್ಯಾ ಸಂಸ್ಥೆಯನ್ನು ಪ್ರಾಥಮಿಕ ಶಾಲೆ ಪ್ರೌಢಶಾಲೆ ಹಾಗೂ ಕಾಲೇಜುಗನ್ನು 1991/92 ರಿಂದ ಪ್ರಾರಂಭಮಾಡಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದೇನೆ ಕಾಲೇಜಿನ ಮುಂಭಾಗದ ರಾಜ ಕಾಲುವೆಯನ್ನು ಮುಚ್ಚಿ ಏತ ನೀರಾವರಿ ಕಾಮಗಾರಿ ಜಾಕ್ವೆಲ್ ಕಾಮಗಾರಿ ಮಾಡುತ್ತಿರುವುದರಿಂದ ತುಂಗಭದ್ರಾ ನದಿಯ ಹಿನ್ನೀರಿನಿಂದ ಶಾಲಾ ಕಾಲೇಜು ಮುಂಭಾಗದಲ್ಲಿ ನೀರು ನಿಂತು ಶಾಲಾ ಕಾಲೇಜ್ ಕ ಟ್ಟ ಗಳು ಮುಳುಗಡೆಯಾಗಲಿವೆ ಪರಿಹಾರದ ಧನವಾಗಿ ನನಗೆ 80 ಕೋಟಿ ರೂಪಾಯಿ ನನಗೆ ನೀಡಬೇಕು ಇಲ್ಲಿ ನ್ಯಾಯ ಸಿಗದೇ ಇದ್ದರೆ ಸುಪ್ರೀಂ ಕೋರ್ಟಿನ ಮೊರೆ ಹೋಗುತ್ತೇನೆ ಸಂಬಂಧಪಟ್ಟ ಅಧಿಕಾರಿಗಳ ತಲೆದಂಡ ನಿಶ್ಚಿತ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು..