ಹೊನ್ನಾಳಿ; ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗು ಜಿಲ್ಲಾ ಸಮ್ಮೇಳನದ ಪೂರ್ವಭಾವಿ ಸಭೆಯು ನಿವೃತ್ತ ನೌಕರ ಭವನದಲ್ಲಿ ಪರಿಷತ್ತಿನ ಅಧ್ಯಕ್ಷ ಮುರುಗೆಪ್ಪಗೌಡ ಇವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ಸಭೆಯಲ್ಲಿ ಮಾತನಾಡಿದ ಮುರುಗೆಪ್ಪಗೌಡರು ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ದಿನಾಂಕ ನಿಗದಿ ಸಭೆಗೆ ಶಾಸಕರು ಹಾಗು ಹೀರೆಕಲ್ಮಠ ಸ್ವಾಮೀಜಿಗಳ ಆಹ್ವಾನಿಸುವ ಬಗ್ಗೆ ಚರ್ಚಿಸಲಾಗಿದೆ ಎಂದರು.
ಜಗಳೂರು ತಾಲ್ಲೂಕಿನಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಬ್ಬರು ಯುವ ಕವಿಗಳನ್ನು ಕವಿಗೋಷ್ಠಿಗೆ ನಿಗದಿತ ಸಮಯದಲ್ಲಿ ಆಯ್ಕೆ ಮಾಡಿ ‘ಕವಿ ಹಾಗು ಕವಿತಿ’್ರ ಹೆಸರಿನಲ್ಲಿಬ್ಬರ ಕಳಿಸಲಾಗುವುದೆಂದರು.
ತಾಲ್ಲೂಕಿನಿಂದ ಇಬ್ಬರು ಸಾಧಕರನ್ನು ಸನ್ಮಾನಿಸಲು ಸೂಚಿಸಬೇಕಿರುವುದರಿಂದ ಈ ಎಲ್ಲ ವಿಷಯಗಳ ಬಗ್ಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸದಸ್ಯರು ಸಲಹೆ – ಸೂಚನೆ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪರಿಷತ್ತಿನ ಮಾಜಿ ಅಧ್ಯಕ್ಷರಾದ ರುದ್ರಪ್ಪ,ರೇವಣ್ಣಪ್ಪ,ಸಾಹಿತಿ ಸಂಘನಾಳ ಮಠ,ಸಿದ್ಧಯ್ಯ,ಗೋವಿಂದಪ್ಪ,ಕುಂದೂರು ಬಸವರಾಜ್,ಕುಂಬಳೂರು ಹಾಲೇಶ್,ಕುಲಂಬಿ ಮೊಹನ್,ಸಾಸ್ವೆ ಹಳ್ಳಿ ನಿಜಲಿಂಗಪ್ಪ,ಬಿಎನ್ ಮಹೇಶ್ವರಪ್ಪ,ಜಿಹೆಚ್ ರಾಜು,ಕತ್ತಿಗೆ ನಾಗರಾಜ್,ಶಾರದ ಕಣಗೊಟಗಿ,ಸುಧಾ ಶಿವು ಇನ್ನಿತರರಿದ್ದರು.