ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ
ಪೆÇಲೀಸ್ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಹಾಗೂ
ಶ್ರೀ ಮೈತ್ರಿ ಉಜ್ವಲ ಪುನರ್ವಸತಿ ಕೇಂದ್ರ ದಾವಣಗೆರೆ ಇವರ
ಸಂಯುಕ್ತಾಶ್ರಯದಲ್ಲ್ಲಿ “ಅಂತರಾಷ್ಟ್ರೀಯ ಮಹಿಳಾ
ದಿನಾಚರಣೆ” ಕಾರ್ಯಕ್ರಮವನ್ನು ಮಾ.10 ರಂದು ಬೆಳಗ್ಗೆ 11
ಗಂಟೆಗೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನಿವೇದಿತ
ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು
ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ
ಕಾರ್ಯದರ್ಶಿ ಪ್ರವೀಣ್ ನಾಯಕ್ ಉದ್ಘಾಟಿಸುವರು, ಸರ್ಕಾರಿ
ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಎ.ಎಸ್
ಶೈಲಜ ರವರು ಅಧ್ಯಕ್ಷತೆ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ
ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಸಿ.ಬಿ ರಿಷ್ಯಂತ್, ದಾವಣಗೆರೆ ವಿಶ್ವವಿದ್ಯಾಲಯದ
ಸಿಂಡಿಕೇಟ್ ಸದಸ್ಯರಾದ ವಿಜಯಲಕ್ಷ್ಮಿ ಹಿರೇಮಠ್ ಆಗಮಿಸುವರು.
ಕಾರ್ಯಕ್ರಮದಲ್ಲಿ “ಆಧುನಿಕ ಸಮಾಜದಲ್ಲಿ
ಮಹಿಳೆಯರಿಗಿರುವ ಸವಾಲುಗಳು” ಎಂಬ ವಿಷಯದ ಕುರಿತು
ಶಿವಮೊಗ್ಗದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರೇಖಾ ಜಿ.ಎಂ
ರವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶ್ರೀ ಮೈತ್ರಿ ಉಜ್ವಲ
ಕೇಂದ್ರ ದಾವಣಗೆರೆ ಯೋಜನಾ ನಿರ್ದೇಶಕರಾದ ರೂಪ ಜಿ.ಎಂ, ಜಿಲ್ಲಾ
ವಕೀಲರ ಸಂಘದ ಅಧ್ಯಕ್ಷ ಡಿ.ಪಿ ಬಸವರಾಜ್, ಸರಕಾರಿ ಪ್ರಥಮ
ದರ್ಜೆ ಮಹಿಳಾ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಸವಿತಾ ಕೆ.ಬಿ,
ಸಾಂಸ್ಕøತಿಕ ವಿಭಾಗ ಸಂಚಾಲಕರಾದ ಡಾ. ಕಾವ್ಯಶ್ರೀ ಜಿ ಹಾಗೂ
ಇನ್ನಿತರರು ಉಪಸ್ಥಿತರಿರುವರೆಂದು ಪ್ರಕಟಣೆ ತಿಳಿಸಿದೆ.