ಹೊನ್ನಾಳಿ:ಯಾವುದೇ ಕಾರಣಕ್ಕೂ ಗರ್ಭಿಣಿಯರ ಹೆರಿಗೆಗಳು ಮನೆಗಳಲ್ಲಿ ನಡೆಸಬಾರದು ಸಮೀಪದ ಆಸ್ಪತ್ರೆಯಲ್ಲಿ ಹೆರಿಗೆಗಳು ನಡೆಯುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಪ್ರಸೂತಿ, ಸ್ತ್ರೀೀರೋಗ ತಜ್ಞ ಡಾ. ಹನುಮಂತಪ್ಪ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಘಟಕ ದಾವಣಗೆರೆ, ಹಾಗೂ ತಾಲೂಕು ಆಸ್ಪತ್ರೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಯಿ ಮತ್ತು ಮಗುವಿನ ಆರೋಗ್ಯ ಸಂರಕ್ಷಣೆ, ತಾಯಿಯಿಂದ ಮಗುವಿಗೆ ಎಚ್.ಐ.ವಿ ಸೋಂಕು ಹರಡುವಿಕೆ ನಿರ್ಮೂಲನಾ ಆಂದೋಲನ ಕಾರ್ಯಕ್ರಮ ಹಾಗೂ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಗರ್ಭಿಣೆಯರು ಮೊದಲು ಆರೋಗ್ಯ ಇಲಾಖೆಯಲ್ಲಿ ಕಡ್ಡಾಯವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಪ್ರತಿ ತಿಂಗಳು ನಿಗದಿಪಡಿಸಿದ ದಿನಾಂಕಗಳಂದು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಇದರಿಂದ ಗರ್ಭಿಣಿ ಮಹಿಳೆ ಎಚ್‍ಐವಿ ಸೋಂಕಿತಳಾಗಿದ್ದಲ್ಲಿ ಹುಟ್ಟುವ ಮಗವಿಗೆ ಇದು ಬಾರದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವೈದ್ಯರು ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಗರ್ಭಿಣಿಯರಿಗೆ 3 ಹಂತಗಳಲ್ಲಿ ಆರೋಗ್ಯ ತಾಪಾಸಣೆ ಮಾಡುವ ಮೂಲಕ ತಾಯಿ ಮತ್ತು ಮಗುವಿನ ಮರಣ ಪ್ರಮಾಣವನ್ನು ಕಡಿಮೆಗೊಳಿಸುವುದು ಹಾಗೂ ಮಗುವಿಗೆ ಎಚ್‍ಐವಿ ಸೋಂಕು ಬಾರದಂತೆ ತಡೆಗಟ್ಟುವುದು ಈ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ವೈದ್ಯರಾದ ಡಾ.ರಾಜ್‍ಕುಮಾರ್ ಅವರು ಮಾತನಾಡಿ, ತಾಯಂದಿರಲ್ಲಿ ರಕ್ತಹಿನತೆ, ತೂಕ ಕಡಿಮೆ ಇರುವ ಶಿಶು ಜನನ ಮುಂತಾದÀ ಆರೋಗ್ಯ ಸಮಸ್ಯೆಗಳನ್ನು ಗರ್ಭಿಣಿಯರಲ್ಲಿ ಮತ್ತು ನವಜಾತ ಶಿಶುಗಳಲ್ಲಿ ಆರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಬಾಣಂತಿಯರು ಹಾಗೂ ಶಿಶು ಮರಣ ಪ್ರಮಾಣ ಕಡಿಮೆ ಮಾಡಿ, ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಯನ್ನು ಆರೋಗ್ಯ ಇಲಾಖೆ ವತಿಯಿಂದ ಮಾಡಲಾಗುವುದು ಎಂದು ಹೇಳಿದರು.
ಇತ್ತೀಚಿಗೆ ಸರ್ಕಾರ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 18 ದಿಂದ 21ವರ್ಷ ಮಾಡಿದೆ ಇದರಿಂದ ದೇಹದ ಬೆಳವಣಿಗೆಯಾಗಿ ಆರೋಗ್ಯ ವೃದ್ಧಿಸುತ್ತದೆ. ಒಂದು ಮಗುವಿನಿಂದ ಇನ್ನೊಂದು ಮಗುವಿನ ಅಂತರ ಕನಿಷ್ಟ 2 ವರ್ಷಗಳಿರಬೇಕು ಇಂದರಿಂದ ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುವುದಿಲ್ಲ ಗರ್ಭಿಣೆಯರಿಗೆ ಒಟ್ಟಾರೆಯಾಗಿ ಸರ್ಕಾರದಿಂದ ವಿವಿಧ ಹಂತಗಳಲ್ಲಿ 6ಸಾವಿರ ರೂ.ಗಳ ಧನ ಸಹಾಯದ ಸೌಲಭ್ಯವಿದೆ. ಗರ್ಭಿಣೆಯರು ಹೆರಿಗೆ ಪೂರ್ವ ಹಾಗೂ ನಂತರದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 25ಕ್ಕೂ ಹೆಚ್ಚು ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ನಡೆಸಲಾಯಿತು.
ಡಾ.ಗೀರಿಶ್, ಡಾ.ಸಂತೋಷ್, ಡಾ.ಮೀನಾಕುಮಾರ್, ಡಾ.ಲೀಲಾವತಿ, ಡಾ.ಯೋಗಿತಾ, ಡಾ.ಬಿಂದು, ಡಾ. ಮಂಜುಳಾ, ಆರೋಗ್ಯ ಇಲಾಖೆ ನೌಕರ ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕುಮಾರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗೀತಾ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ
ಟಿ.ನಾಗರತ್ನ, ಆರೋಗ್ಯ ಇಲಾಖೆಯ ಶಶ್ರೂಷಕರುಗಳು, ಆಶಾ ಕಾರ್ಯಕರ್ತರು ಇದ್ದರು.
ಎಸ್.ಆರ್. ಪಾಟೀಲ್ ನಿರೂಪಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ
ಟಿ.ನಾಗರತ್ನ ಸ್ವಾಗತಿಸಿದರು. ಐಸಿಟಿಸಿ ಸಮಾಲೋಚಕಿ ಬಾಗಮ್ಮ ವಂದಿಸಿದರು.
ಚಿತ್ರ:9-ಎಚ್‍ಎನ್‍ಎಲ್-1ಹೊನ್ನಾಳಿ:ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ನಿಯಂತ್ರಣ ಘಟಕ ದಾವಣಗೆರೆ, ಹಾಗೂ ತಾಲೂಕು ಆಸ್ಪತ್ರೆ ಸಂಯಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಡಾ.ರಾಜ್‍ಕುಮಾರ್ ಉದ್ಘಾಟಿಸಿದರು.