ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ
ಹೊನ್ನಾಳಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಇವರು ಮಾ.11 ರಿಂದ
13 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಮಾ.12 ರಂದು ಬೆ.10.30ಕ್ಕೆ ನ್ಯಾಮತಿ ಪಟ್ಟಣದ ಪದವಿ ಕಾಲೇಜಿನ
ಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ
ಸಮಾರಂಭದಲ್ಲಿ ಭಾಗವಹಿಸುವರು. ನಂತರ ಬೆ.11.15ಕ್ಕೆ
ಅರಕೆರೆ ಗ್ರಾಮದಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು
ಉದ್ಘಾಟಿಸುವರು. ಬೆ.11.45ಕ್ಕೆ ಹೊನ್ನಾಳಿ ಪಟ್ಟಣದ ಗುರುಭವನದಲ್ಲಿ
ನಡೆಯುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ
ಭಾಗವಹಿಸುವರು. ಮ.12ಕ್ಕೆ ಹೊನ್ನಾಳಿ ಮಾದಕ ದ್ರವ್ಯ
ವ್ಯಸನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಬಗ್ಗೆ ವಿಜಯ
ಕರ್ನಾಟಕ ವತಿಯಿಂದ ಹಮ್ಮಿಕೊಂಡಿರಿವ ಜಾಥ ಮತ್ತು ಈ ಕುರಿತು
ಅಂಬೇಡ್ಕರ್ ಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ಮ.12.30ಕ್ಕೆ ಹಿರೇಗೋಣಿಗೆರೆ ಗ್ರಾಮದಲ್ಲಿ
ಕಂದಾಯ ಇಲಾಖೆ ವತಿಯಿಂದ ನಡೆಯುವ ಕಂದಾಯ
ಸೇವೆಗಳು ಮನೆ ಬಾಗಿಲಿಗೆ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ಮ.1.30ಕ್ಕೆ ದಾನಿಹಳ್ಳಿ ಗ್ರಾಮದಲ್ಲಿ ಕಂದಾಯ
ಇಲಾಖೆ ವತಿಯಿಂದ ನಡೆಯುವ ಕಂದಾಯ ಸೇವೆಗಳು ಮನೆ
ಬಾಗಿಲಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.2.45ಕ್ಕೆ
ಅರಬಗಟ್ಟಿ ಗ್ರಾಮದಲ್ಲಿ ಏರ್ಪಡಿಸಿರುವ ಅಭಿನಂದನಾ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸ. 04 ಗಂಟೆಗೆ
ಬಸವನಹಳ್ಳಿ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸುವರು. ಸ.05ಕ್ಕೆ
ಸುರೆಹೊನ್ನೆ ಗ್ರಾಮದಲ್ಲಿ ಭೂ ವೈಕುಂಠ ತಿರುಪತಿ ತಿರುಮಲ
ಪಾದಯಾತ್ರಾ ಸಮಿತಿ ವತಿಯಿಂದ ನಡೆಯುವ ತಿಮ್ಮಪ್ಪ ದೇವರ
ಸಾಮೂಹಿಕ ಹರಿಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಸ.06ಕ್ಕೆ ಕುಂದೂರು ಗ್ರಾಮದಲ್ಲಿ ನಡೆಯುವ ಹೊನಲು
ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುವರು. ಸ.07ಕ್ಕೆ
ದೊಡ್ಡೆತ್ತಿನಹಳ್ಳಿ ಗ್ರಾಮದಲ್ಲಿ ಪೂರ್ವನಿಗದಿತ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾ.8.30ಕ್ಕೆ ಹೊನ್ನಾಳಿಗೆ
ಪ್ರಯಾಣ ಮತ್ತು ವಾಸ್ತವ್ಯ.
ಮಾ.13 ರಂದು ಬೆಳಿಗ್ಗೆ ಹೊನ್ನಾಳಿಯಿಂದ ಹೊರಟು ಬೆ.10.30ಕ್ಕೆ
ದೊಡ್ಡೆತ್ತಿನಹಳ್ಳಿ ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಹಿರಿಯ
ಪ್ರಾಥಮಿಕ ಶಾಲೆಯ 111ನೇ ವರ್ಷದ ಶಾಲಾ ಶತಮಾನೋತ್ಸವ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.11.30ಕ್ಕೆ
ಫಲವನಹಳ್ಳಿ ಗ್ರಾಮದಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ಮ.12.30ಕ್ಕೆ ಶಿವಮೊಗ್ಗ ಜಿಲ್ಲೆ
ಹೊಸನಗರದಲ್ಲಿರುವ ರಾಮಚಂದ್ರಪುರ ಮಠಕ್ಕೆ ಭೇಟಿ
ಮತ್ತು ಮಠದಲ್ಲಿ ನಡೆಯುವ ಗೋಸಂರಕ್ಷಣೆ ಕುರಿತಾದ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.2ಕ್ಕೆ ಯಕ್ಕನಹಳ್ಳಿ
ಗ್ರಾಮದಲ್ಲಿ ಶ್ರೀ ಬಸವೇಸ್ವರಸ್ವಾಮಿ ದೇವರ ರಥೋತ್ಸವ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.3.30ಕ್ಕೆ ಹೊನ್ನಾಳಿ
ಪ್ರಯಾಣ ಅದೇ ದಿನ ರಾ.9ಕ್ಕೆ ಬೆಂಗಳೂರಿಗೆ ಪ್ರಯಾಣ
ಬೆಳೆಸುವರು ಎಂದು ಅವರ ವಿಶೇಷ ಕರ್ತವ್ಯಾಧಿಕಾರಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.