ದಾವಣಗೆರೆ ನಗರದಲ್ಲಿ ನಗರ ದೇವತೆ ಶ್ರೀ
ದುಗಾರ್ಂಬಿಕಾದೇವಿ ದೇವಸ್ಥಾನ ಟ್ರಸ್ಟ್‍ದಾವಣಗೆರೆ ಇವರ
ಆಶ್ರಯದಲ್ಲಿ ಮಾ.13 ರಿಂದ ಮಾ.16 ರವರೆಗೆ ನಗರ ದೇವತೆ ಶ್ರೀ
ದುಗಾರ್ಂಬಿಕಾದೇವಿ ಜಾತ್ರೆಯು ಜರುಗಲಿದೆ ಹಾಗೂ
ವಿನೋಬನಗರದ ಶ್ರೀ ಚೌಡೇಶ್ವರಿ ದೇವಿ ಜಾತ್ರೆ ಹಾಗೂ ಈ
ಸಂದರ್ಭದಲ್ಲಿ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮಗಳು
ಜರುಗಲಿದ್ದು, ಜಾತ್ರೆಗೆ ಲಕ್ಷಾಂತರ ಭಕ್ತಾಧಿಗಳು ಆಗಮಿಸಿ
ದೇವಸ್ಥಾನದ ಅಥವಾ ಜಾತ್ರಾ ಆವರಣದ ಪ್ರದೇಶದೊಳಗೆ
ದೇವರ ಹೆಸರಿನಲ್ಲಿ ಪ್ರಾಣಿಗಳ ಬಲಿ ನೀಡುವುದು ಕಾನೂನಿಗೆ
ವಿರುದ್ಧವಾಗಿರುತ್ತದೆ.
ಸಾರ್ವಜನಿಕ ಹಿತದೃಷ್ಟಿಯಿಂದಾಗಿ, ಪರಿಸರ ನೈರ್ಮಲ್ಯ ಹಾಗೂ
ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮಾ.13 ರಿಂದ ಮಾ.16
ರವರೆಗೆ ನಗರದೇವತೆ ಶ್ರೀ ದುಗಾರ್ಂಬಿಕಾದೇವಿ ಹಾಗೂ
ವಿನೋಬನಗರ ಶ್ರೀ ಚೌಡೇಶ್ವರಿ ದೇವಿ ಜಾತ್ರೆ ಸಂದರ್ಭದಲ್ಲಿ
ಪ್ರಾಣಿಬಲಿ ನೀಡುವುದನ್ನು ನಿμÉೀಧಿಸುವುದು ಅಗತ್ಯ ಎಂದು
ಕಂಡುಬಂದಿರುವ ಹಿನ್ನಲೆಯಲ್ಲಿ ನಗರದೇವತೆ ಶ್ರೀ
ದುಗಾರ್ಂಬಿಕಾದೇವಿ ಹಾಗೂ ವಿನೋಬನಗರ ಶ್ರೀ ಚೌಡೇಶ್ವರಿ ದೇವಿ
ಜಾತ್ರೆಯಲ್ಲಿ ದೇವಸ್ಥಾನದ ಅಥವಾ ಜಾತ್ರಾ ಅವರಣದ
ಪ್ರದೇಶದೊಳಗೆ ಭಕ್ತಾಧಿಗಳು, ಸಾರ್ವಜನಿಕರು ದೇವರ
ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿ ಬಲಿ ನೀಡುವುದನ್ನು
ಮತ್ತು ಇತರೆ ಪ್ರಾಣಿಗಳನ್ನು ತೆಗೆದುಕೊಂಡು ಬರುವುದು,
ಮಾರಕಾಸ್ತ್ರಗಳನ್ನು ತರುವುದು ಹಾಗೂ ಇತರೆ ಅನಾಗರಿಕ
ಪದ್ಧತಿಗಳನ್ನು ನಿμÉೀಧಿಸಿ ಎಂದು ಜಿಲ್ಲಾಧಿಕಾರಿಗಳು ಅದೇಶಿಸಿದ್ದಾರೆ.