ಹುಣಸಘಟ್ಟ: ಹೊನ್ನಾಳಿ ತಾಲೂಕಿನ ಉಜೀನಿಪುರ ಗ್ರಾಮದ ಗೌಸಂದ್ರಮ್ಮ ದೇವಸ್ಥಾನದ ಪೂಜಾ ನಿರ್ವಹಣೆಗೆ ಹಳೇ ಗ್ರಾಮ ಠಾಣದಲ್ಲಿನ 2 ಎಕ್ಕರೆ ಭೂಮಿ ಕಾಯ್ದಿರಿಸುವಂತೆ ಶನಿವಾರ ಉಜನೀಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮದ ಮುಖಂಡ ಮಂಜನಾಯ್ಕ ಮಾತನಾಡಿ ಈ ಹಿಂದೆ ಗ್ರಾಮದ ಹಿರಿಯರು ಗೌಸಂದ್ರಮ್ಮ ದೇವಸ್ಥಾನದ ಪೂಜಾ ನಿರ್ವಹಣೆಗೆ ಹಾಗೂ ಅರ್ಚಕರಿಗೆ ಉಜೀನಿಪುರ ಹಳೇ ಗ್ರಾಮ ಠಾಣದಲ್ಲಿ 2 ಎಕರೆ ಭೂಮಿ ದೇವಸ್ಥಾನಕ್ಕೆ ಮೀಸಲಿಟ್ಟಿದ್ದರು. ಅಬ್ಬಲಗೆರೆ ಗ್ರಾಮದಿಂದ ಬಂದು ಉಜಿನಿ ಪುರ ಗ್ರಾಮದಲ್ಲಿ ಮದುವೆಯಾಗಿ ವಾಸವಾಗಿದ್ದ ಈಶ್ವರ ನಾಯ್ಕ ದೇವಸ್ಥಾನದ ಒಂದು ಎಕರೆ ಭೂಮಿಯಲ್ಲಿ ಕಮಿಟಿಯವರ ಷರತ್ತಿನ ಮೇರೆಗೆ ಭತ್ತದ ಬೆಳೆ ಬೆಳೆಯುತ್ತಿದ್ದ. ಆದರೆ ದೇವಸ್ಥಾನದ ಖರ್ಚು ವೆಚ್ಚಕ್ಕೆ ಹಣ ನೀಡಲು ನಿರಾಕರಿಸಿ ಭೂಮಿ ಬಿಡಲು ತಕರಾರು ತೆಗೆದು ಕಳೆದ ವರ್ಷ ಗ್ರಾಮಸ್ಥರ ವಿರುದ್ಧ ದೂರು ದಾಖಲಿಸಿದ್ದು ಅಲ್ಲದೆ. ಹಾಲಿ ಶಾಸಕರ ಪ್ರಭಾವ ಬಳಸಿಕೊಂಡು ನನಗೆ ಉಳುಮೆ ಮಾಡಲು ಈ ಭೂಮಿ ಬಿಟ್ಟರೆ ಯಾವುದೇ ಜಮೀನು ಇಲ್ಲ ಎಂದು ಸುಳ್ಳಿನ ಕಟ್ಟುಕತೆ ಹೇಳುತ್ತಾ ಗ್ರಾಮಸ್ಥರಲ್ಲಿ ಒಡಕು ಮೂಡಿಸಿ. ತಹಸಿಲ್ದಾರ್ ರವರಿಗೆ ಶಾಸಕರಿಂದ ಒತ್ತಡ ಏರಿಸಿದ್ದಾನೆ ಎಂದರು.
ಬಣ್ಣದ ಮಾತನಾಡುವ ಈಶ್ವರ್ ನಾಯ್ಕನಿಗೆ ಅಬ್ಬಲಗೆರೆ ಗ್ರಾಮದಲ್ಲಿ ಒಂದು ಎಕರೆ ಜಮೀನು, ಸಾಸ್ವೆಹಳ್ಳಿ ಗಡಿ ಸರ್ವೆ ನಂಬರ್ 93 ರಲ್ಲಿ ಹೆಂಡತಿ ಶಾರದಾಬಾಯಿ ಹೆಸರಿನಲ್ಲಿ 2 ಎಕರೆ ಜಮೀನು ಮಂಜೂರಾತಿ ಪಡೆಡದಿದ್ದಾನೆ. ತಾಲೂಕು ದಂಡಾಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಉಜನೀಪುರ ಹಳೆ ಗ್ರಾಮ ಠಾಣದಲ್ಲಿ ದೇವಸ್ಥಾನದ ನಿರ್ವಣೆಗೆ 2 ಎಕರೆ ಭೂಮಿಯನ್ನು ಕಾಯ್ದಿರಿಸುವಂತೆ ಒತ್ತಾಯಿಸಿದರು.
ಗೌಸಂದ್ರಮ್ಮ ದೇವಿಯ ಪೂಜಾ ನಿರ್ವಹಣೆಗೆ ಯಾವುದೇ ಆರ್ಥಿಕ ಮೂಲಗಳು ಇಲ್ಲದೆ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಅರ್ಚಕರು ಹಲವು ಬಾರಿ ಪೂಜಾ ಕೈಂಕರ್ಯಗಳನ್ನು ತೆಜಿಸಿದ್ದ ಉದಾಹರಣೆಗಳಿವೆ. ಒಬ್ಬ ವ್ಯಕ್ತಿಯಿಂದ ಗ್ರಾಮದ ಧಾರ್ಮಿಕ ವ್ಯವಸ್ಥೆ ಹಾಳಾಗಬಾರದು. ದಂಡಾಧಿಕಾರಿಗಳು ಗ್ರಾಮಸ್ಥರು ದೇವಸ್ಥಾನಕ್ಕೆ ಕಾಯ್ದಿರಿಸಿದ ಭೂಮಿಯನ್ನು ಯಾರಿಗೂ ಮಂಜೂರು ಮಾಡಬಾರದು ಎಂದು ದೆವೀರ ನಾಯಕ ಹೇಳಿದರು.
ಈ ಸಂದರ್ಭದಲ್ಲಿ ಗಣಪತಿ ನಾಯ್ಕ, ಹಾಲೇಶ್ ನಾಯ್ಕ, ತುಕ್ಯಾ ನಾಯ್ಕ, ಪಿ ರಾಜನಾಯ್ಕ, ವಿ, ಹಾಲೇಶ್ ನಾಯ್ಕ, ನಾಗನಾಯ್ಕ, ದೇವರ ನಾಯ್ಕ ಮಧು ಕಿರಣ ಅರವಿಂದ ಮೊದಲಾದವರು ಉಪಸ್ಥಿತರಿದ್ದರು.
ಫೋಟೋ ಸುದ್ದಿ 1: ಉಜನೀಪುರ ಹಳೆ ಗ್ರಾಮ ಠಾಣದಲ್ಲಿ ದೇವಸ್ಥಾನದ ನಿರ್ವಹಣೆಗೆ 2 ಎಕರೆ ಭೂಮಿ ಕಾಯ್ದಿರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು .

Leave a Reply

Your email address will not be published. Required fields are marked *