ನ್ಯಾಮತಿ ;-ಮಾರ್ಚ್-, ತಾಲೂಕಿನ ಬೆಳಗುತ್ತಿ ಮಲ್ಲಿಗೆನಹಳ್ಳಿ ಮಧ್ಯಭಾಗದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸರಸ್ವತಿ ಪೂಜೆ ಮತ್ತು ಎಸೆಸೆಲ್ಸಿ 20-21-22 ನೇ ಸಾಲಿನ ಮಕ್ಕಳ ಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮವನ್ನು ಈ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಎಸ್ಡಿಎಂಸಿ ಅಧ್ಯಕ್ಷರಾದ ಕುಬೇರಪ್ಪ ನೇತೃತ್ವದಲ್ಲಿ ಸರಸ್ವತಿ ದೇವರ ಭಾವಚಿತ್ರಕ್ಕೆ ಪೂಜೆ ಮಾಡುವುದರ ಮೂಲಕ ಚಾಲನೆ ಕೊಡಲಾಯಿತು .
ಮುಖ್ಯೋಪಾಧ್ಯಾಯರಾದ ತೀರ್ಥಪ್ಪನವರು ಮಾತನಾಡಿ ನಮ್ಮ ಶಾಲೆಯಲ್ಲಿ ಎರಡು ಸಮಾರಂಭವನ್ನು ಹಮ್ಮಿಕೊಂಡಿದ್ದೇವೆ, ಒಂದು ಸರಸ್ವತಿ ಪೂಜೆ ಇನ್ನೊಂದು ಎಸೆಸೆಲ್ಸಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಹಿಂದಿನ ವರ್ಷ ಅತಿ ಹೆಚ್ಚು ಅಂಕ ಪಡೆದ ಎಸ್ಎಲ್ಸಿ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಡಲಾಯಿತು. ಇದರ ಜೊತೆಗೆ ಬೆಂಗಳೂರಿನ ವಾಸಿಯಾದ ತೀರ್ಥಪ್ಪ ನವರು ನಮ್ಮ ಶಾಲೆಗೆ 200 ನೋಟ ಮತ್ತು 300 ತಟ್ಟೆ ಗಳನ್ನು ಹಾಗೂ ತಟ್ಟೆ ಇಡುವ ಸ್ಟ್ಯಾಂಡನ್ನು ಕೊಟ್ಟಿದ್ದರು,ಅದರ ಅಂಗವಾಗಿ ಅವರಿಗೂ ಸಹ ಸನ್ಮಾನ ಕಾರ್ಯಕ್ರಮವನ್ನು ಮಾಡಲಾಯಿತು ಎಂದು ತಿಳಿಸಿದರು.


ಈ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಕುಬೇರಪ್ಪ ನವರು ಮಾತನಾಡಿ ಈ ವರ್ಷದ 2022ಸಾಲಿನಲ್ಲಿಎಸೆಸೆಲ್ಸಿ ಓದುತ್ತಿರುವ ಮಕ್ಕಳು ನೀವುಗಳು ಚೆನ್ನಾಗಿ ಓದಿ, ಶಾಲೆಗೆ ಮತ್ತು ನಿಮಗೆ ಪಾಠ ಹೇಳಿ ಕೊಟ್ಟಂತಹ ಶಿಕ್ಷಕರು ಗಳಿಗೆ, ತಂದೆ-ತಾಯಿಗಳಿಗೆ ಹೆಸರನ್ನು ತಂದು ಕೊಡುವುದರ ಜೊತೆಗೆ ಊರಿಗೆ ಮತ್ತು ರಾಜ್ಯಕ್ಕೆ ಅತಿ ಹೆಚ್ಚು ಅಂಕ ಪಡೆದು ಮಾದರಿ ವಿದ್ಯಾರ್ಥಿಗಳು ಆಗಬೇಕು ಎಂದರು. ಮತ್ತು ಈಗಿನ ವಿದ್ಯಾರ್ಥಿಗಳು ಮುಂದಿನ ದೇಶದ ಆಸ್ತಿ ಹಾಗಾಗಿ ಮುಂದಿನ ಗುರಿಯನ್ನು ಇಟ್ಟುಕೊಂಡು ಚೆನ್ನಾಗಿ ಓದಿ ಎಂದು ಅಲ್ಲಿ ಸೇರಿರುವ ಎಲ್ಲಾ ಮಕ್ಕಳಿಗೆ ಕಿವಿ ಮಾತನ್ನು ತಿಳಿಸಿದರು.


ಬೆಳಗುತ್ತಿ ಮತ್ತು ಮಲ್ಲಿಗೆನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಈ ಶಾಲೆಗೆ ದಾನವಾಗಿ ಕೊಟ್ಟಂತಹ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಧನ್ಯವಾದಗಳನ್ನು ಹೇಳುವುದರ ಜೊತೆಗೆ ಅವರುಗಳಿಗೆ ಸನ್ಮಾನವನ್ನು ಸಹ ಮಾಡಲಾಯಿತು.

ಉಪಸ್ಥಿತಿಯಲ್ಲಿ ;-ಮುಖ್ಯಶಿಕ್ಷಕ ತೀರ್ಥ ಲಿಂಗಪ್ಪ ಸಿ, ಸಹಶಿಕ್ಷಕ ಸೋಮಶೇಖರಪ್ಪ ಎಸ್, ಬಸವರಾಜ್ ಎಂ, ಯೋಗೀಶ ,ಶಿವಲಿಂಗಪ್ಪ ಬಿ ಜಾಡರ್ ,ವಿಶ್ವನಾಥ್ ಸಿಎಂ ,ಚನ್ನಮಲ್ಲಿಕಾರ್ಜುನ ಜಿಎಂ ,ಭರತ್ ಕುಮಾರ್ ಎಬಿ, ಸುಮಲತಾ ,ಶಿವಕುಮಾರ ವೈ ಕೆ, ಕೋಮಲ ಎಂಕೆ, ಸುನಿತಾ ಟಿ ಪ್ರಥಮ ದರ್ಜೆ ಸಹಾಯಕರು ಮತ್ತು ನೀಲಮ್ಮ ಹಾಗೂ ಶಾಲಾ ಮಕ್ಕಳೊಂದಿಗೆ ಅಡುಗೆ ಸಿಬ್ಬಂದಿ ವರ್ಗದವರು ಈ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *