ಇತ್ತೀಚಿಗೆ ನಡೆದ ಹಿಮಾಚಲ ಪ್ರದೇಶದ 12ನೇ ರಾಷ್ಟ್ರೀಯ ಕೋಡೋ ಚಾಂಪಿಯನ್ ಶಿಪ್ ಹೊನ್ನಾಳಿ ತಂಡದಿಂದ ಉತ್ತಮ ಪ್ರದರ್ಶನ ನಡೆಯಿತು
ಈ ಪಂದ್ಯಾವಳಿಯಲ್ಲಿ ಕೋಡೋ ಅಸೋಸಿಯನ್ ಆಫ್ ಕರ್ನಾಟಕ ಅಧ್ಯಕ್ಷ ಸಿಂಹಾನ ಶಬ್ಬೀರ್ ಅಹ್ಮದ್ ಇವರ ನೇತೃತ್ವದಲ್ಲಿ ಹೊನ್ನಾಳಿ ತಾಲೂಕಿನ ತರಬೇತಿದಾರ ಅಂಬೇಡ್ಕರ್ ತಂಡದ ಪ್ರದರ್ಶನಕ್ಕೆ ಕಾರಣರಾಗಿದ್ದು ಕ್ರೀಡಾ ಪಟುಗಳು ಪದಕ ಹಾಗೂ ಅಭಿನಂದನಾ ಪತ್ರ ಪಡೆದು ತಾಲೂಕಿಗೆ ಹೆಮ್ಮೆಯ ಕ್ರೀಡಾಪಟು ಗಳಾಗಿದ್ದಾರೆ
ಹೊನ್ನಾಳಿ ತಂಡದ ಕ್ರೀಡಾಪಟುಗಳು. ಭಾಗವಹಿಸಿದವರು ಪೂರ್ವಿ ಎಚ್ ಪಿ ಒಂದು ಬೆಳ್ಳಿ ಪದಕ ಸಂಸ್ಕೃತಿ ಎರಡು ಕಂಚು ಪದಕ ಲೇಖನ ಕೆಆರ್ ಒಂದು ಬೆಳ್ಳಿ ಪದಕ ಧೀರಜ್ ಒಂದು ಕಂಚು ಪದಕ ಕಿಶೋರ್ ಎಮ್ ಎಸ್ ಒಂದು ಕಂಚು ಪದಕ ಪಡೆದಿದ್ದಾರೆ ಎಂದು ತರಬೇತುದಾರ ತಿಳಿಸಿದರು
ಪತ್ರಿಕೆಯೊಂದಿಗೆ ಮಾತನಾಡಿ ಕೊಡೋ ಎಂಬ ಕಲೆ ಜಪಾನಿನ ಸಮರ ಕಲೆಯಾಗಿದ್ದು ಇದರ ಸಿಸ್ತು ನಿಯಮ ಗಮನಿಸಿದ ಭಾರತ ಸರ್ಕಾರದಲ್ಲಿ ಕ್ರೀಡೆಗೆ ಹೆಚ್ಚಿನ ಮಾನ್ಯತೆ ನೀಡಿದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ಹಾಗೂ ಉದ್ಯೋಗ ಮೀಸಲಾತಿ ಸಿಗಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು