ದಾವಣಗೆರೆ ನಗರದಲ್ಲಿ ನಗರ ದೇವತೆ ಶ್ರೀ ದುಗಾರ್ಂಬಿಕಾ
ದೇವಿಯ ಜಾತ್ರೆ ಹಾಗೂ ಶ್ರೀ ಚೌಡೇಶ್ವರಿ ಜಾತ್ರೆ ನಿಮಿತ್ತ ಹೆಚ್ಚಿನ
ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ
ಮದ್ಯ ಮಾರಾಟನಿಷೇಧಧಾಜ್ಞೆಯನ್ನು ಮಾ.15 ರ ಬೆಳಿಗ್ಗೆ 06
ಗಂಟೆಯಿಂದ ಮಾ.16 ರ ಮಧ್ಯರಾತ್ರಿ 12 ಗಂಟೆಯವರೆಗೆ
ಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಆದೇಶ
ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಮಾ.13 ರಿಂದ ಮಾ.22 ರವರೆಗೆ ನಗರ ದೇವತೆ
ಶ್ರೀ ದುಗಾರ್ಂಬಿಕಾ ದೇವಿಯ ಜಾತ್ರೆ ಮತ್ತು ವಿನೋಬನಗರದಲ್ಲಿ
ಶ್ರೀ ಚೌಡೇಶ್ವರಿ ದೇವಿಯ ಜಾತ್ರೆಯು ನಡೆಯಲಿದ್ದು, ಜಾತ್ರೆಗೆ
ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ
ಭಕ್ತಾಧಿಗಳು ಬರಲಿದ್ದಾರೆ ಹಾಗೂ ಹಿಜಾಬ್ ವಿವಾದವು ಈಗಾಗಲೇ
ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ
ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಶ್ರೀ
ದುಗಾರ್ಂಬಿಕಾ ದೇವಿ ದೇವಸ್ಥಾನ ಮತ್ತು ವಿನೋಬನಗರದ ಶ್ರೀ
ಚೌಡೇಶ್ವರಿ ದೇವಿ ದೇವಸ್ಥಾನದ ಸುತ್ತಮುತ್ತ 500 ಮೀಟರ್ ಪರಿಧಿ
ವ್ಯಾಪ್ತಿ ಪ್ರದೇಶದಲ್ಲಿ ಮದ್ಯ ಮಾರಾಟ ಮತ್ತು ಮದ್ಯ
ಸರಬರಾಜನ್ನುನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.